ಮುಂದುವರಿದ ಮುಷ್ಕರ: ಪರದಾಡಿದ ಪ್ರಯಾಣಿಕರು

0
28

ದಾಂಡೇಲಿ : ವೇತನ ಹೆಚ್ಚಳ ಸೇರಿದಂತೆ ವಿವಿದ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರು ಕರೆ ನೀಡಿರುವ ಮುಷ್ಕರ ಮೂರನೆÉಯ ದಿನವಾದ ಬುಧವಾರವೂ ಕೂಡಾ ನಾಗರಿಕ ವಲಯದಲ್ಲಿ ಬಿಸಿ ತಟ್ಟಿದೆ.
ಕೆ.ಎಸ್.ಆರ್.ಟಿ.ಸಿ ದಾಂಡೇಲಿ ಘಟಕದ ಯಾವ ಬಸ್ಸುಗಳೂ ಬುಧವಾರ ಕೂಡಾ ರಸ್ತೆಗಿಳಿಯಲಿಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ನಿತ್ಯದ ಕೆಲಸಗಳಿಗೆ ಬೇರೆ ಊರುಗಳಿಗೆ ಹೋಗಿಬರುವ ಸಾರ್ವಜನಿಕರು ಪರದಾಡುವಂತಾಗಿದೆ. ಹಲವರು ಹೆಚ್ಚಿನ ದರ ನೀಡಿ ಖಾಸಗಿ ವಾಹನ ಮಾಡಿಕೊಂಡು ಹೀಗಿ ಬಂದಿದ್ದಾರೆ. ನಗರ ಸಾರಿಗೆಯೂ ಇಲ್ಲದ ಕಾರಣ ನಗರಕ್ಕೆಂದು ಬಂದು ಹೋಗುವವರಿಗೂ ತೊಂದರೆಯಾಗಿದೆ. ಆಟೋರಿಕ್ಷಾದವರನ್ನೇ ಹೆಚ್ಚಾಗಿ ಅವಲಂಭಿಸಿದಂತಹ ಪರಿಸ್ಥಿತಿ ಎದುರಾಗಿದೆ. ಕೆಲವು ಆಟೋ ರಿಕ್ಷಾದವರು ಹಾಗೂ ಕೆಲವು ಖಾಸಗಿ ವಾಹನ ಚಾಲಕರು ನಿಗದಿಗಿಂತ ಹೆಚ್ಚಿನ ಹಣ ಪಡೆದಿರುವ ಬಗ್ಗೆ ನಾಗರಿಕರು ದೂರಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ಖಾಸಗಿ ವಾಹನದವರಿಗೆ ಹಬ್ಬದೂಟವೇ ಸಿಕ್ಕಂತಾಗಿದೆ.
ಮೂರನೆಯ ದಿನದ ಸಾರಿಗೆ ಮುಷ್ಕರದ ವಿಚಾರವಾಗಿ ದಾಂಡೇಲಿಯ ಘಟಕ ವ್ಯವಸ್ಥಾಪಕರಾದ ಎಸ್.ಡಿ. ಭೋಸ್ಲೆಯವರನ್ನು ವಿಚಾರಿಸಿದಾಗ ಮೂರನೆಯ ದಿನ ಕೂಡಾ ದಾಂಡೇಲಿ ಡಿಪೋದಲ್ಲಿ ಯಾವ ಬಸ್ಸುಗಳ ಸಂಚಾರವೂ ನಡೆದಿಲ್ಲ. ಆದರೆ ನಾವು ನೌಕರರ ಮನವೊಲಿಸುವ ಯತ್ನ ಮಾಡಿದ್ದೇವೆ. ಚಾಲಕರು ಹಾಗೂ ನಿರ್ವಾಹಕರಿಗೆ ದೂರವಾಣಿ ಕರೆ ಮಾಡಿ ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡುತ್ತಿದ್ದೇವೆ. ಆದರೆ ಕರೆದರೂ ಕೂಡಾ ಯಾರೂ ಕೂಡಾ ಬರುತ್ತಿಲ್ಲ. ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here