ಮುಂಬೈ  ಸರಣಿ ಸ್ಫೋಟ ಅಪರಾಧಿ  ನಾಪತ್ತೆ, ವ್ಯಾಪಕ ಶೋಧನೆ

0
6
ಮುಂಬೈ:- 1993ರಲ್ಲಿ ನಡೆದ ಮುಂಬೈ  ಸರಣಿ ಸ್ಫೋಟ ಪ್ರಕರಣದಲ್ಲಿ ಜೀವಾಧಿ ಶಿಕ್ಷೆಗೆ ಗುರಿಯಾಗಿದ್ದ  ಅಪರಾಧಿ  ಜಲೀಸ್ ಅನ್ಸಾರಿ ಹಠಾತ್ ನಾಪತ್ತೆಯಾಗಿರುವುದು  ಬಹಳ ಆತಂಕಕ್ಕೆ ಕಾರಣವಾಗಿದೆ.
ದಕ್ಷಿಣ ಮುಂಬೈನ ಅಗ್ರಿಪಾಡ  ನಿವಾಸಿಯಾದ ಈತ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ದೇಶದ ವಿವಿಧೆಡೆಗಳಲ್ಲಿ ನಡೆದ ಅನೇಕ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಈತ ಷಾಮೀಲಾಗಿರುವ  ಶಂಕೆಯೂ ಇದೆ.
ರಾಜಸ್ಥಾನದ ಅಜ್ಮೀರ್ ಕೇಂದ್ರೀಯ ಕಾರಾಗೃಹದಲ್ಲಿದ್ದ ಈತ 21 ದಿನಗಳ ಪರೋಲ್ ಪಡೆದಿದ್ದ.  ಅವಧಿಯಲ್ಲಿ ಅಗ್ರಿಪಾಡ ಪೊಲೀಸ್ ಠಾಣೆಗೆ ಪ್ರತಿದಿನ ಬೆಳಗ್ಗೆ  ತಪ್ಪದೆ  ಹಾಜರಾಗುವಂತೆ ಆದೇಶಿಸಲಾಗಿದ್ದರೂ  ಜಲೀಸ್ ಪೊಲಿಸರ ಮುಂದೆ ಗುರುವಾರ  ಹಾಜರಾಗಿಲ್ಲ  ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.ಸಂಜೆ ಠಾಣೆಗೆ ಆಗಮಿಸಿದ ಜಲೀಸ್ ಅವರ ಮಗ ಜೈದ್ ಅನ್ಸಾರಿ, ತಮ್ಮ ತಂದೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಮುಂಜಾನೆ ತೆರಳಿದ್ದ ಅನ್ಸಾರಿ ಮನೆಗೆ ವಾಪಸ್ಸಾಗಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.  ಆರೋಪಿಯ ಪತ್ತೆಗೆ ಮುಂಬೈ ಅಪರಾಧ ವಿಭಾಗದ ಪೊಲೀಸರು ಹಾಗೂ ಭಯೋತ್ಪಾದಕ ನಿಗ್ರಹ ಪಡೆ ವ್ಯಾಪಕ ಶೋಧನೆಯಲ್ಲಿ ನಿರತವಾಗಿದೆ.

loading...