ಮುಖ್ಯ ರಸ್ತೆ ಅಗಲೀಕರಣಕ್ಕೆ ಸಂಸದರಿಂದ ಚಾಲನೆ

0
29

(ಹುಕ್ಕೇರಿ ಕಾರ್ಯಾಲಯದಿಂದ)

ಹುಕ್ಕೇರಿ 4 :  ಇಲ್ಲಿಯ ಸಂಕೇಶ್ವರ-ಗೋಕಾಕ ಮುಖ್ಯ ಹೆದ್ದಾರಿ ರಸ್ತೆಯ ಪಕ್ಕದಲ್ಲಿರುವ ನಗರದ ಮುಖ್ಯ ರಸ್ತೆಯ 1100 ಕಿ.ಮೀ ರಸ್ತೆಯ ಅಗಲೀಕರಣಕ್ಕೆ ಇಂದು ಮುಂಜಾನೆ ಸಾಂಸದ್ ರಮೇಶ ಕತ್ತಿಯವರು ಗುದ್ದಲಿ ಪೂಜೆ ನೆರವೇರಿಸುವದರೊಂದಿಗೆ ಕಾಮಗಾರಿಗೆ ಚಾಲನೆ ನೀಡಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಗರದ ಈ ಮುಖ್ಯ ರಸ್ತೆಯನ್ನು ಅಗಲೀಕರಣಗೊಳಿಸಲು ನಾಗರಿಕರ ಬಹುದಿನದ ಬೇಡಿಕೆಯಾಗಿತ್ತು ಕೋರ್ಟ ಸರ್ಕಲಿನಿಂದ ಸಾರ್ವಜನಿಕ ಗ್ರಂಥಾಲಯದ ವರೆಗಿನ 1100 ಕಿ.ಮೀ ರಸ್ತೆ ಸದಸ್ಯದ ರಸ್ತೆಯ ಮಧ್ಯದಿಂದ ಎರಡೂ ಬದಿಗೆೆ 6 ರಿಂದ 7 ಮೀಟರ ಅಗಲೀಕರಣಗೊಳ್ಳಲಿದೆ. ಇದಕ್ಕಾಗಿ 1.90 ಕೋಟಿ ರೂ ಮಂಜೂರಾಗಿದ್ದು ಮುಂಬರುವ 9 ತಿಂಗಳೊಳಗಾಗಿ ಕೆಲಸ ಪೂರ್ಣಗೊಳ್ಳಲಿದೆಯೆಂದರು. ಈ ಕಾಮಗಾರಿಯ ಗುತ್ತಿಗೆಯನ್ನು ಸಾಗರ ಖೆಮಲಾಪೂರೆಯವರಿಗೆ ನೀಡಲಾಗಿದೆ. ಪಟ್ಟಣ ಪಂಚಾಯತ ರಸ್ತೆಯ ಎರಡೂ ಬದಿಗಳಲ್ಲಿ ಬರುವ ಅತಿಕ್ರಮಣದ ಸ್ವಚ್ಛತೆ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದವರು ರಸ್ತೆ ಅಗಲೀಕರಣಕ್ಕೆ ಅಡ್ಡ ಬರುವ ದೀಪದ ಕಂಬಗಳನ್ನು ತೆಗೆದು ಹಾಕಿದ ನಂತರ ಕೆಲಸ ಪ್ರಾರಂಭಗೊಳ್ಳಲಿದೆಯೆಂದರು.

ಸದ್ಯಕ್ಕೆ ತುರ್ತು ಡಿವ್ಹಾಯಡರ ಅಳವಡಿಸಿ ಸಂಚಾರಕ್ಕೆ ಅಡ್ಡಿಯಾದರೆ ಅವನ್ನು ತೆಗೆದು ಹಾಕಲಾಗುವದೆಂದರು. ಎಸ್.ಎಫ್.ಸಿ ಯೋಜನೆಯಡಿ ನಗರಾಭಿವೃದ್ದಿಗೆ 2 ಕೋಟಿ 50 ಲಕ್ಷ ರೂ., ಅನುದಾನ ಬಂದಿದ್ದು ಆ ಪೈಕಿ 18 ಲಕ್ಷ 56000 ರೂ ಗಳನ್ನು 44 ಕಾಮಗಾರಿಗಿಗೆ ವೆಚ್ಚ ಮಾಡಲಾಗಿದೆಯೆಂದರು. ಕೆಲವು ವಾರ್ಡಗಳಲ್ಲಿ ಕೆಲಸಗಳು ಬಾಕಿ ಇದ್ದು ಅವನ್ನೂ ಸಹಿತ ಪೂರ್ಣಗೊಳಿಸಲಾಗುವದೆಂದರು. ಇದಕ್ಕಾಗಿ ಹೆಚ್ಚಿನ ಅನುದಾನ ತರುವ ಆಶ್ವಾಸನೆ ನೀಡಿದ ಅವರು ನಗರಕ್ಕೆ ಹೊಸ ಮೆರಗು ತರುವ ಹಿನ್ನೆಲೆಯಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಕಳಪೆ ಮಟ್ಟದ ಕೆಲಸ ನಡೆದಲ್ಲಿ ನೇರವಾಗಿ ತಮಗೆ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ಸೂಚಿಸಿದರು. ಪ.ಪಂ ಅಧ್ಯಕ್ಷ ಜಯಗೌಡಾ ಪಾಟೀಲ, ಉಪಾಧ್ಯಕ್ಷೆ ಶ್ರೀಮತಿ ಶಫಿಯಾಬಿ ಮುಜಾವರ ಸದಸ್ಯರಾದ ಮಹಾವೀರ ನಿಲಜಗಿ, ಮೀರಾಸಾಹೇಬ ಮೋಮಿನ, ಆನಂದ ಬಾಗೇವಾಡಿ, ಸುನೀಲ ನಾುಕ, ರಂಗನಾಥ ಬಾರಕೇರ ಮುಖ್ಯಾಧಿಖಾರಿ ಈರಣ್ಣಾ ಬಗನಾಳ, ಯೋಜನಾಧಿಕಾರಿ ಎಸ್.ಆರ್.ರೋಗಿ, ಕಿರಿಯ ಆರೋಗ್ಯ ನೀರೀಕ್ಷಕ ಮಹಾಂತೇಶ ಕೌಲಾಪೂರ ಹಾಗೂ ಅಶೋಕ ಪಟ್ಟಣಶೆಟ್ಟಿ, ಪರಗೌಡಾ ಪಾಟೀಲ, ಶಿವಾನಂದ ಹಿರೇಮಠ, ಪ್ರಕಾಶ ಖೋತ, ನ್ಯಾಯವಾದಿ ಎಸ್.ಬಿ.ಗಾವಡಿ, ನೀಲಪ್ಪಾ ಕೋಲೆ, ಗುತ್ತಿಗೆದಾರ ಸಾಗರ ಖೆಮಲಾಪೂರೆ, ಶೇಖರ ನಾುಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here