ಮುಧೋಳ ಬಳಿ ಕಾರ್ಖಾನೆಯ ಬಾಯ್ಲರ್​ ಸ್ಫೋಟ: ನಾಲ್ಕು ಕಾರ್ಮಿಕರ ಸಾವು

0
10

ಬಾಗಲಕೋಟೆ: ರಾಜ್ಯದಲ್ಲಿ ವಿಷ ಪ್ರಸಾದ ಸೇವಿಸಿ ಹದಿಮೂರು ಜನ ಸಾವಿಗೀಡಾದ ದುರಂತವನ್ನು ಮರೆಯುವ ಮುಂಚೆಯೇ ಮತ್ತೊಂದು ಘೋರ ದುರಂತವೊಂದು ನಡೆದಿದೆ.
ಕಾರ್ಖಾನೆಯ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ನಾಲ್ಕು ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಸಮೀಪ ನಡೆದಿದೆ.
ಮಾಜಿ ಸಚಿವ ಮುರುಗೇಶ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ್ ನಲ್ಲಿ ಸಂಸ್ಕರಣಾ ಘಟಕ ಸ್ಫೋಟಗೊಂಡಿದ್ದರಿಂದ ನಾಲ್ಕು ಸಾವನ್ನಪ್ಪಿದ್ದು, ಕಟ್ಟಡ ಸಂಪೂರ್ಣ ಕುಸಿತಗೊಂಡಿದೆ.
ಮುಧೋಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶುಗರ್ ಫ್ಯಾಕ್ಟರಿಯಲ್ಲಿ ೧೫೦ಕ್ಕೂ ಹೆಚ್ಚು ಕೆಎಲ್​ಡಿಬಿ ಬಾಯಲರ್ ಇತ್ತು. ಅದು ಜಿಲ್ಲೆಯ ಅತಿ ದೊಡ್ಡ ಬಾಯಲರ್ ಆಗಿತ್ತು. ಇದರ ಸ್ಫೋಟದ ತೀವ್ರತೆಗೆ ಇಡೀ ಕಟ್ಟಡವೇ ನೆಲಕ್ಕೆ ಉರುಳಿದೆ.

loading...