ಮುಷ್ಠಿ ಧಾನ್ಯ ಸಂಗ್ರಹ ರೈತರ ಪರ: ಕುಂಬಾರ

0
56

ಯರಗಟ್ಟಿ: ಸಮೀಪದ ಗುಡಮಕೇರಿ ಗ್ರಾಮದಲ್ಲಿ ಬಿಜೆಪಿ ಮಹಿಳಾ ಮೂರ್ಚಾ ತಾಲೂಕಾ ಅಧ್ಯಕ್ಷೆಯಾದ ಸಕ್ಕುಬಾಯಿ ಕುಂಬಾರ ಮತ್ತು ಕಾರ್ಯಕರ್ತರು ಗುರುವಾರ ಮುಷ್ಠಿ ದಾನ್ಯ ಸಂಗ್ರಹ ಮಾಡಿದರು. ಈ
ಸಂದರ್ಭದಲ್ಲಿ ಮಾತನಾಡಿ ಅವರು ಮುಷ್ಠಿ ಧಾನ್ಯ ಸಂಗ್ರಹ ರೈತರ ಪರ ಕಾರ್ಯಕ್ರಮ ಇದಾಗಿದ್ದು ಇದು ಪ್ರಧಾನಿ ನರೇಂದ್ರ ಮೋದಿಜಿಯವರ ಫಸಲ್ ಭೀಮಾ ಯೋಜನೆ ನೇರವಾಗುತ್ತದೆ ಮತ್ತು ರೈತರಿಗೆ ವೈಜ್ಞಾನಿಕ ಬೆಳೆ ಮುಂತಾದವುಗಳಿಗೆ ಇದು ನಾಂದಿಯಾಗುತ್ತದೆ. ಮತ್ತು ತಾವೆಲ್ಲರೂ ಬಿಜೆಪಿ ಪರ ಮತ ಚಲಾಯಿಸಬೇಕೆಂದು ಹೇಳಿದರು.

ಅಭಿಯಾನದಲ್ಲಿ ಗೌಡಪ್ಪ ಸವದತ್ತಿ, ಬಸನಗೌಡ ಪಾಟೀಲ, ಪರ್ವತಗೌಡ ಪಾಟೀಲ, ಮಕ್ತುಮ್‍ಸಾಬ್ ಬಾಗವಾನ, ಈರಣ್ಣ ಹೂಸಮನಿ, ಪ್ರಕಾಶ ವಾಲಿ, ಮಹಾಂತೇಶ ಗೋಡಿ, ಪ್ರಕಾಶ ಹೂಸಮನಿ ಹಾಗೂ ಮುಂತಾದವರು ಭಾಗವಹಿಸಿದ್ದರು.

loading...