ಮೂಲಭೂತ ಸೌಕರ್ಯದ ಕೊರತೆಯಿಂದ ನಲುಗಿದ ಕುಮಾರಸ್ವಾಮಿ ಲೇಔಟ್: ಪಟ್ಕಲ್

0
19

ಬೆಳಗಾವಿ
ಕುಮಾರಸ್ವಾಮಿ ಬಡಾವಣೆ 12 ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದರೂ ಮೂಲಭೂತ ಸೌಕರ್ಯದ ಕೊರತೆ ಎದುರಿಸುತ್ತಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಲೇಔಟ್ ರಹವಾಸಿ ಸಂಘಗಳ ಅಧ್ಯಕ್ಷ ಶಿವಪುತ್ರಪ್ಪ ಪಟ್ಕಲ್ ಹೇಳಿದರು.
ಶನಿವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕುಮಾರಸ್ವಾಮಿ ಲೇಔಟ್ ಬುಡಾ ವ್ಯಾಪ್ತಿಯಲ್ಲಿ ಬರುತ್ತಿದೆ. ಇಲ್ಲಿನ ರಸ್ತೆಗಳು ಸಂಪೂರ್ಣ ಹದಗೇಟ್ಟಿದೆ. ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಇದೆ. ಆದರೆ ಪಾಲಿಕೆ ಹಾಗೂ ಬುಡಾ ಅಧಿಕಾರಿಗಳ ಸಮನ್ವಯ ಕೊರತೆಯಿಂದ ಇಲ್ಲಿನ ರಹವಾಸಿಗಳು ಪರದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದೇವೆ. ಅವರು ಜಿಲ್ಲಾಡಳಿತಕ್ಕೆ ಇಲ್ಲಿನ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿ 8 ತಿಂಗಳು ಕಳೆದರೂ ಮೂಲಭೂತ ಸೌಕರ್ಯ ವದಗಿಸಿಲ್ಲ ಎಂದು ಹರಿಹಾಯ್ದರು.
ಬುಡಾದ ಹೊಸ ಬಡಾವಣೆಗಳು ಆಗುತ್ತಿರುವುದು ಅವೈಜ್ಞಾನಿಕವಾಗಿವೆ. ನಾಗರಿಕರಿಗೆ ತೊಂದರೆ ನೀಡುವುದೇ ಇವರ ಉದ್ದೇಶವಾಗಿದೆ. ಕುಮಾರಸ್ವಾಮಿ ಲೇಔಟ್ ನ ಜಮೀನನ್ನು ಯೋಗ್ಯ ದರ ನೀಡಿದ್ದೇವೆ. ಆದರೆ ಬುಡಾ ಅಧಿಕಾರಿಗಳು ನಮಗೆ ತೊಂದರೆ ನೀಡುತ್ತಿದ್ದಾರೆ. ಏಂಟು ದಿನದಲ್ಲಿ ರಾಮತೀರ್ಥ ನಗರ ಹಾಗೂ ಕುಮಾರಸ್ವಾಮಿ ಲೇಔಟ್ ನ ಮೂಲಭೂತ ಸೌಕರ್ಯ ವದಗಿಸದಿದ್ದರೆ ಮಹಿಳೆಯರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಚ್ಚರಿಸಿದರು.

ಈಶ್ವರ ಗಾಣಿಗೇರ, ಅರವಿಂದ ಜೋಶಿ, ಅಭಿನಯ ಸೋಲಿ, ಯಲ್ಲಪ್ಪ ಪಾಟೀಲ, ಮಹಾದೇವ ಹೊಂಗಲ, ಬಿ.ಜಿ.ಪಟ್ಟಣಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

loading...