ಮೂವರಿಗೆ 10 ವರ್ಷ ಜೈಲು ಶಿಕ್ಷೆ

0
51

ಕನ್ನಡಮ್ಮ ಸುದ್ದಿ-ಬೆಳಗಾವಿ: ಎರಡನೇ ಅಡಿಷನಲ್ ಸೆಷನ್ ನ್ಯಾಯಾಲಯ ಎನ್‍ಡಿಪಿಎಸ್ ಸ್ಪೆಷಲ್ ಕೇಸ್ ನಂ. 100/15 ರಲ್ಲಿ ಮಾದಕ ವಸ್ತುಗಳನ್ನು ಸಾಗಾಟ ಮಾಡಿದ ಆರೋಪದಲ್ಲಿ ಮೂವರಿಗೆ 10 ವರ್ಷ ಜೈಲು ಶಿಕ್ಷೆ ನೀಡಿ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿದೆ.

ಗದಗ ಜಿಲ್ಲೆಯ ಶ್ರೀನಿವಾಸ. ಸಿದ್ದಪ್ಪ. ನರಗುಂದ, ಹುಬಳ್ಳಿ ತಾಲೂಕಿನ ಗಂಧಿವಾಡ ಗ್ರಾಮದ ಬೆಜಾಂಮಿನ್ ರಾಜರತ್ನಮ್ಮ ಹಾಗೂ ಬೆಳಗಾವಿಯ ವಡಗಾಂವಿಯ ಕೃಷ್ಣ. ರಾಮಪ್ಪ. ಶಿಂಗನಮಲೆ ಈ ಮೂರು ಜನ ಆರೋಪಿಗಳಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ಒಂದು ಲಕ್ಷ ರೂ. ದಂಡ ವಿಧಿಸಿ, 05 ಜನ ಆರೋಪಿತರನ್ನು ಖುಲಾಸೆಗೊಳಿಸಿ ಮಾ.12 ರಂದು ಆದೇಶ ಹೊರಡಿಸಿದೆ.
ಪ್ರಕರಣವನ್ನು ರಾಜ್ಯ ವಿಚಕ್ಷಣ ದಳದ ಅಬಕಾರಿ ಅಧೀಕ್ಷಕರಾದ ಶಿವನಗೌಡ ಅವರ ನೇತೃತ್ವದಲ್ಲಿ ರಾಜ್ಯ ವಿಚಕ್ಷಣ ದಳದ ಅಬಕಾರಿ ನಿರೀಕ್ಷಕರಾದ ವಿಜಯಕುಮಾರ್. ಜಿ.ವಿ ಅವರು ಪ್ರಕರಣ ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿದ್ದರು. ಬೆಳಗಾವಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಜಗದೀಶ ಕುಲಕರ್ಣಿ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

loading...