ಮೆಕ್ಸಿಕೊ: ಬೆದರಿಕೆ ಬೆನ್ನಲ್ಲೇ ಕೊಲೆಗೀಡಾದ ಪತ್ರಕರ್ತ

0
7
ಮೆಕ್ಸಿಕೊ ಸಿಟಿ: ಕೊಲೆ ಬೆದರಿಕೆ ಬೆನ್ನಲ್ಲೇ, ಮೆಕ್ಸಿಕೊ ಪತ್ರಕರ್ತರೊಬ್ಬರು ಹತ್ಯೆಗೀಡಾಗಿದ್ದು, ಕ್ಷಿಂಟಿನಾನೊ ರೂ ರಾಜ್ಯದ ಆಗ್ನೇಯ ಭಾಗದಲ್ಲಿರುವ ಪ್ಲೇಯಾ ಡೆಲ್ ಕಾರ್ಮೆನ್ ನಗರದಲ್ಲಿನ ಬಾರೊಂದರ ಬಳಿ ಅವರ ಶವ ಪತ್ತೆಯಾಗಿದೆ.
ಮೆಕ್ಸಿಕೊ ಸರ್ಕಾದ ಪತ್ರಕರ್ತರ ಹಾಗೂ ಕಾರ್ಯಕರ್ತರ ರಕ್ಷಣಾ ಕಾರ್ಯಕ್ರಮದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ ಫ್ರಾನ್ಸಿಸ್ಕೊ ರೋಮಿರೊ ಅವರ ಹತ್ಯೆಯಾಗಿದ್ದು, ನೈಟ್ ಕ್ಲಬ್ ಬಾರೊಂದರ ಹೊರಗಡೆ ರಕ್ತದ ಮಡುವಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಫ್ರಾನ್ಸಿಸ್ಕೊ ರೋಮಿರೊ ಡಯಾಜ್ ಅವರ ಹತ್ಯೆಯ ತನಿಖೆ ನಡೆಸಲಾಗುತ್ತಿದೆ ಎಂದು ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ವರದಿ ಮಾಡಿದೆ.
ರೊಮಿರೋ ಡಯಾಜ್, ಜುಲೈ 24, 2018ರಲ್ಲಿ ಕೊಲೆಗೀಡಾಗಿದ್ದ “ಸೆಮನರಿಯೊ ಪ್ಲಯ ನ್ಯೂಸ್” ವೆಬ್ ಸೈಟ್ ನಿರ್ದೇಶಕರಿಗೆ ಸಹಯೋಗ ನೀಡಿದ್ದರು. ಏಪ್ರಿಲ್ 12ರಂದು ತಾಮಗೆ ಕೊಲೆ ಬೆದರಿಕೆ ಬಂದಿದೆ ಎಂದು ತಮ್ಮ ಸಿಬ್ಬಂದಿಗೆ ತಿಳಿಸಿದ್ದರು.
2019ರ ವರ್ಷವೊಂದರಲ್ಲೇ ಮೆಕ್ಸಿಕೊದಲ್ಲಿ ಹತ್ಯೆಗೀಡಾದ ಪತ್ರಕರ್ತರ ಪೈಕಿ ರೊಮಿರೊ ಡಯಾಜ್ ಐದನೆಯವರಾಗಿದ್ದಾರೆ.
loading...