ಮೈತ್ರಿ ಸರಕಾರ‌ ಪತನವಾಗಲು ಜಾರಕಿಹೊಳಿ ಕುಟುಂಬ ಕಾರಣವಲ್ಲ: ಮಾಜಿ ಸಚಿವ ಸತೀಶ

0
87


ಬೆಳಗಾವಿ

ಬಿಜೆಪಿ ಸರ್ಕಾರ ರಚನೆಗೆ 111 ಸೀಟುಗಳು ಬೇಕು.
ತಾಂತ್ರಿಕವಾಗಿ ಅವರಿಗೆ ಸಂಖ್ಯಾಬಲ ಇಲ್ಲ.
ಸಂಖ್ಯಾಬಲ ಇಲ್ಲದಕ್ಕೆ ಇಷ್ಟೆಲ್ಲ ಡ್ರಾಮಾ ನಡೆದಿದೆ.
ಯಾವ ಆದಾರದ ಮೇಲೆ‌ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಕಾದುನೋಡಬೇಕಿದೆ‌ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಶುಕ್ರವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿಯವರಿಗೆ ಸಂಖ್ಯಾ ಬಲ ಇಲ್ಲ. ಯಾವ ಆಧಾರದ‌ ಮೇಲೆ ಬಿ.ಎಸ್‌.ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ‌ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಣ ಎಂದರು.

ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶಕುಮಾರ ಅನರ್ಹ ಮಾಡಿದ್ದನ್ನ ನಾನು ಸ್ವಾಗತ ಮಾಡುತ್ತೇನೆ. ಅತೃಪ್ತ ಶಾಸಕರ ಅನರ್ಹ ಮುಂಚೆನೇ ಮಾಡಿದ್ದರೆ ಸರ್ಕಾರ ಉಳಿಯುತ್ತಿತ್ತು.ಇನ್ನುಳಿದ 13 ಜನ ಅತೃಪ್ತ ಶಾಸಕರನ್ನ ಅನರ್ಹ ಮಾಡುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅವರೆಲ್ಲ ಪಕ್ಷ ವಿರೋದಿ ಚಟುವಟಿಗಳನ್ನ ಮಾಡಿದ್ದಾರೆ.
ಅತೃಪ್ತರನ್ನ ಸೇರಿಸಿಕ್ಕೊಳ್ಳುವುದು ಹೈಕಮಾಂಡ್ ಗೆ ಬಿಟ್ಟಿದ್ದು. ನಾನು ಹಿರಿಯ ನಾಯಕರಿಗಳಿಗೆ ಆಪರೇಶನ್ ಕಮಲದ ಬಗ್ಗೆ ಎಚ್ಚರಿಕೆ ನೀಡಿದ್ದೆ.‌ಈ ಕುರಿತು ಹೈಕಮಾಂಡ್‌ ಸರಿಯಾಗಿ ಪರಿಗಣಿಸಲಿಲ್ಲ, ಪರಿಗಣಿಸಿದ್ದರೆ ಸರ್ಕಾರ ಪತನವಾಗುತ್ತಿರಲಿಲ್ಲ.
ಇನ್ನೂ ಒಂದು ವರ್ಷದ ವರೆಗೆ ರಾಜ್ಯದಲ್ಲಿ ಮಧ್ಯಂತರ ಚುಣಾವಣೆ ಬರುವುದಿಲ್ಲ‌. ಕಾಂಗ್ರೆಸ್ ರಿವರ್ಸ್ ಆಪರೇಷನ್ ಮಾಡಿದ್ದರೆ ಸಕ್ಸಸ್ ಆಗುತ್ತಿತ್ತು‌ ಎಂದು ಕಳವಳ ವ್ಯಕ್ತಪಡಿಸಿದ್ದರು.
ನಾವು ಸಿರಿಯಸ್ ಆಪರೇಶನ್ ಮಾಡಲಿಲ್ಲ.
ಸ್ಪೀಕರ್ ರಮೇಶ ಕುಮಾರ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದಾರೆ.ಬಿಜೆಪಿ ಅವರಿಗೆ ಸ್ಪೀಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.
ಸ್ಪೀಕರ್ ರಮೇಶ್ ಕುಮಾರ ನಮ್ಮ ಪಕ್ಷದಲ್ಲಿದರೂ ಸರಿಯಾದ ಕ್ರಮ ತೆಗೆದುಕ್ಕೊಂಡಿದ್ದಾರೆ ಎಂದರು.

ಸರ್ಕಾರ ಬೀಳಲು ಜಾರಕಿಹೊಳಿ ಕುಟುಂಬ ಅಂತ ತಿಳಿದ್ದಾರೆ.ಸರ್ಕಾರ ಬೀಳಲು ಜಾರಕಿಹೊಳಿ ಕುಟುಂಬ ಕಾರಣವಲ್ಲ, ಒಂದು ವಸ್ತು ಕಾರಣ.
ವಸ್ತುವಿನಿಂದ ಸರ್ಕಾರಕ್ಕೆ ಇಂತಾ ಪರಿಸ್ಥಿತಿ ಬಂದಿದೆ.
ಅದನ್ನ ಸಮಯ ಬಂದಾಗ ಹೇಳುತ್ತೆನೆ ಹೇಳಲೆಬೇಕು.
ಇಲ್ಲದಿದ್ರೆ ಇದು ಇತಿಹಾಸದಲ್ಲಿ ಹಾಗೆ ಉಳಿಯುತ್ತೆ ಎಂದರು.

loading...