ಮೈತ್ರಿ ಸರ್ಕಾರದಿಂದ  ಪಕ್ಷಗಳಿಗಿಂತ ಜನರಿಗೆ ಆಗುವ ಲಾಭ ಮುಖ್ಯ: ಎಚ್‌ ವಿಶ್ವನಾಥ್‌

0
8

ಕೋಲಾರ- ಪದೇ ಪದೇ ಚುನಾವಣೆಗೆ ಹೋಗಿ ಜನರ ತೆರಿಗೆ ಹಣ ಪೋಲು ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ.
ಕೋಲಾರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಏನು ಲಾಭ ವಾಯಿತು ಎಂಬುದು ಮುಖ್ಯವಲ್ಲ, ಜನರಿಗೆ ಏನು ಲಾಭವಾಗಿದೆ ಎಂಬುದು ಬಹಳ  ಮುಖ್ಯವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ  ಎಚ್. ಡಿ.ಕುಮಾರಸ್ವಾಮಿ ಹಲವು  ಜನ ಕಲ್ಯಾಣ ಕಾರ್ಯಕ್ರಮ ಜಾರಿಗೆ  ತರುತ್ತಿರುವವಾಗ ಅದನ್ನು ಎರಡೂ ಪಕ್ಷಗಳು ಸೇರಿ  ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು  ಎಂದು ಅವರು ಹೇಳಿದರು.
ಕೈ ಶಾಸಕ  ರೋಷನ್ ಬೇಗ್  ಪಕ್ಷ ತೊರೆಯುವ ಹೇಳಿಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು  ಎಲ್ಲಿಗೆ ಬೇಕಾದರೂ ಹೋಗಬಹುದು, ಜನತಂತ್ರದಲ್ಲಿ ಅವರಿಗೆ ಮುಕ್ತ ಅವಕಾಶವಿದೆ. ಅವರು ಇಷ್ಟ ಬಂದ ಪಕ್ಷವನ್ನು ಸೇರಬಹುದು ಎಂದು ಹೇಳಿದರು.
ಸದ್ಯ ಸರ್ಕಾರವನ್ನು ಉಳಿಸಿಕೊಳ್ಳುವುದು, ಬಿಡುವುದರ ಬಗ್ಗೆ ಕಾಂಗ್ರೆಸ್ ನಾಯಕರು ಅಲೋಚನೆ  ಮಾಡಬೇಕು, ಮೈತ್ರಿ ಪಕ್ಷಗಳಲ್ಲಿ ಗೊಂದಲ ಸಹಜ, ಅದನ್ನು ನಿವಾರಣೆ  ಮಾಡಿಕೊಂಡು  ಹೋಗಬೇಕು, ಹಿಂದೆ ಯುಪಿಎ ಅವಧಿಯಲ್ಲಿ  ಡಾ. ಮನಮೋಹನ್ ಸಿಂಗ್ ಅವರು 23 ಪಕ್ಷಗಳ  ನಾಯಕರನ್ನು ಹೊಂದಾಣಿಕೆ ಮಾಡಿ ಆಡಳಿತ ಮಾಡಿದ್ದರು.  ಇಲ್ಲಿ ಕೇವಲ ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಮಾಡಿಕೊಂಡು  ಆಡಳಿತ ಕೊಡುವುದಕ್ಕೆ ಇರುವ ಅಡ್ಡಿ ನಿವಾರಣೆ ಮಾಡುವುದು ಬಹಳ ಮುಖ್ಯ ಎಂದು ಅವರು ಹೇಳಿದರು.

loading...