ಬೆಳಗಾವಿ 02: ಸೋಮವಾರ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ನ್ಯಾಯಾಲಯದ ಆವರಣದ ಶೌಚಾಲಯದಲ್ಲಿ ನಿಗೂಢ ವಸ್ತುವೊಂದು ಸ್ಪೋಟ್ಗೊಂಡ ಹಿನ್ನಲೆಯಲ್ಲಿ ಸರಕಾರ ರಾಜ್ಯದ ಎಲ್ಲ ಪ್ರಮುಖ ನ್ಯಾಯಾಲಯಗಳಲ್ಲಿ ಎಚ್ಚರ ವಹಿಸಿರುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಹಿನ್ನಲೆಯಲ್ಲಿ ಮಂಗಳವಾರ ಮುಂಜಾನೆ ಶ್ವಾನ ಹಾಗೂ ಬಾಂಬ್ ನಿಗ್ರಹ ದಳದ ಸಿಬ್ಬಂದಿಗಳು ನಗರದ ಜಿಲ್ಲಾಧಿಕಾರಿಗಳ ಕಛೇರಿ ಆವರಣದ ಪಕ್ಕದಲ್ಲಿರುವ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪರಿಶೀಲನೆ ನಡೆಸಿದರು.
ಮುಂಜಾನೆ ಶ್ವಾನಗಳೊಂದಿಗೆ ನ್ಯಾಯಲಯದ ಆವರಣದಲ್ಲಿನ ಕಟ್ಟಡ, ನಿಲುಗಡೆ ಮಾಡಿದ ವಾಹನಗಳು ಸೇರಿದಂತೆ ಪ್ರಮುಖ ವಸ್ತುಗಳನ್ನು ತಪಾಸಣೆ ನಡೆಸಿದರು. ಮೈಸೂರಿನ ನ್ಯಾಯಾಲಯದ ಆವರಣದಲ್ಲಿ ನಡೆದ ಸ್ಪೋಟ್ ಕೃತ್ಯದ ಹಿನ್ನಲೆಯಲ್ಲಿ ಮಹಾನಗರದಲ್ಲಿ ಯಾವುದೇ ಅಹೀತಕರ ಘಟನೆ ಜರುಗದಂತೆ ಮಹಾನಗರದ ರೈಲು ನಿಲ್ದಾಣ, ಸಾಂಬ್ರಾ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳ ತಪಾಸಣೆ ನಡೆಸಲಾಗಿದೆ. ಸೂಕ್ತ ಪೊಲೀಸ್ ಭದ್ರತೆ ಕೂಡ ನಿಯೋಜಿಸಲಾಗಿದೆಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
loading...