ಮೋದಿಯವರಿಗೆ ಬಲ ನೀಡಲು ಜಿಗಜಿಣಗಿ ಅವರನ್ನು ಆಯ್ಕೆ ಮಾಡಿ: ಪಾಟೀಲ

0
27

ವಿಜಯಪರ : ಮೋದಿ ಅವರು ಇನ್ನೊಮ್ಮೆ ಪ್ರಧಾನಿಯಾಗಬೇಕು ಎಂಬುದು ಕೋಟ್ಯಂತರ ಭಾರತೀಯರ ಕನಸಾಗಿದೆ. ಇಡೀ ವಿಶ್ವವೇ ಅವರು ಇನ್ನೊಮ್ಮೆ ಪ್ರಧಾನಿಯಾಗುವ ಕ್ಷಣವನ್ನು ಎದುರು ನೋಡುತ್ತಿದೆ ಎಂದು ಬಿಜೆಪಿ ಮುಖಂಡ ವಿಜಯಕುಮಾರ ಪಾಟೀಲ ಹೇಳಿದರು.
ಬಬಲೇಶ್ವರ ಮತ ಕ್ಷೆÃತ್ರದ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮತಯಾಚಿಸಿದ ಅವರು, ಕಾಂಗ್ರೆಸ್ ಸರ್ಕಾರ ೬೦ ವರ್ಷಗಳ ಕಾಲ ಮಾಡದ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಐದೇ ವರ್ಷಗಳಲ್ಲಿ ಮಾಡಿದ್ದಾರೆ. ಈ ಅಭಿವೃದ್ಧಿಯ ಪರ್ವ ಮುಂದುವರೆಯಬೇಕಿದೆ. ಮೋದಿ ಅವರು ಹಗಲಿರುಳು ದುಡಿದು ದೇಶದ ಪ್ರತಿಷ್ಠೆ ಜಗತ್ತಿಗೆ ಗೊತ್ತಾಗುವಂತೆ ಮಾಡಿದ್ದಾರೆ. ಭಾರತೀಯರಾದ ನಾವು ನರೇಂದ್ರ ಮೋದಿಯವರಿಗೆ ಬಲ ನೀಡಲು ರಮೇಶ ಜಿಗಜಿಣಗಿ ಅವರನ್ನು ಬಬಲೇಶ್ವರ ಮತಕ್ಷೆÃತ್ರದಲ್ಲಿ ಅತೀ ಹೆಚ್ಚು ಮತಗಳ ಆಶೀರ್ವಾದವನ್ನು ನೀಡಿ ಅವರನ್ನು ವಿಜಯಶಾಲಿಯಾಗಿಸಬೇಕಿದೆ. ಈ ನಿಟ್ಟಿನಲ್ಲಿ ಬಬಲೇಶ್ವರದ ಬಿಜೆಪಿ ಕಾರ್ಯಕರ್ತರು ಜಿಗಜಿಣಗಿ ಅವರ ಗೆಲುವಿಗೆ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಬಬಲೇಶ್ವರ ಮಂಡಳ ಅಧ್ಯಕ್ಷ ಬಸವರಾಜ ಬಿರಾದಾರ, ವಿಶ್ವನಾಥ ಭಟ್, ಎಪಿಎಂಸಿ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಜಿಲ್ಲಾ ಪಂಚಾಯತ ಸದಸ್ಯರಾದ ಸಾಬು ಮಾಶ್ಯಾಳ, ಕಲ್ಲಪ್ಪ ಕೊಡಬಾಗಿ, ಗುರಲಿಂಗಪ್ಪ ಅಂಗಡಿ, ಸಿದ್ದೆÃಶ್ವರ ಬ್ಯಾಂಕ್ ನಿರ್ದೇಶಕ ರಮೇಶ ಬಿದನೂರ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಸುರೇಶಗೌಡ ಬಿರಾದಾರ, ಕಾಡಪ್ಪ ಸಾಹುಕಾರ, ಯಾದವಾಡ, ಮನೋಜ ಜಂಗಮಶೆಟ್ಟಿ ಕಾರ್ಯಕರ್ತರು ಉಪಸ್ಥಿತರಿದ್ದರು.

loading...