ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಿ: ರಮೇಶ ಜಿಗಜಿಣಗಿ

0
21

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯಾಗಿಸುವ ಮೂಲಕ ದೇಶವನ್ನು ಮತ್ತಷ್ಟು ಸುಭದ್ರಗೊಳಿಸುವ ಕಾರ್ಯಕ್ಕೆ ಪ್ರತಿಯೊಬ್ಬ ಕಾರ್ಯಕರ್ತರು ಕೈ ಜೋಡಿಸಬೇಕಿದೆ ಎಂದು ಲೋಕಸಭಾ ಕ್ಷೆÃತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದರು.
ವಿಜಯಪುರದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಪಕ್ಷದ ಇತಿಹಾಸ ಕುರಿತು ಅವಲೋಕನ ಮಾಡಿಕೊಳ್ಳಬೇಕಾದ ದಿನ. ಇದು ದೇಶದ ಜನತೆ ನಮ್ಮ ಮೇಲೆ ಇರುವ ಭರವಸೆಯನ್ನು ನೂರಕ್ಕೆ ನೂರರಷ್ಟು ಈಡೇರಿಸಬೇಕಾದ ಜವಾಬ್ದಾರಿ ನಮ್ಮದು. ನಮ್ಮ ಪಕ್ಷದ ಸಂಸ್ಥಾಪನಾ ದಿನದಂದು ನಾವೆಲ್ಲರೂ, ಸಂಭ್ರಮದ ಜೊತೆಗೆ ನಮ್ಮ ಜವಾಬ್ದಾರಿಯನ್ನು ಪುನರ್ ಸ್ಮರಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಬಿಜೆಪಿ ಚಂದ್ರಶೇಖರ ಕವಟಗಿ ಮಾತನಾಡಿ, ಭಾರತೀಯ ಜನತಾ ಪಕ್ಷವು ಭಾರತೀಯ ಜನಸಂಘ ಎಂಬ ಹೆಸರಿನಲ್ಲಿ ಬಲಪಂಥೀಯ ಪಕ್ಷವಾಗಿ ಆರಂಭವಾಯಿತು. ಸ್ವಾತಂತ್ರ ಬಂದ ನಂತರ ಭಾರತೀಯ ರಾಜಕೀಯ ಕ್ಷೆÃತ್ರದಲ್ಲಿ ನಮ್ಮ ಪಕ್ಷದಷ್ಟು ಕಷ್ಟ ಅವಮಾನ ಇನ್ಯಾವ ಪಕ್ಷ ಅನುಭವಿಸಿಲ್ಲ. ಪಕ್ಷದ ಸ್ಥಾಪನೆಯಾದ ೨೦ ತಿಂಗಳಲ್ಲಿ ನಮ್ಮ ಸಂಸ್ಥಾಪಕ ಅಧ್ಯಕ್ಷ ಅಂದಿನ ದಿನಗಳ ಅತ್ಯಂತ ದಿನ ಅತ್ಯಂತ ಎತ್ತರ ನಾಯಕ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರು ಕಾಶ್ಮಿÃರದ ಸೆರೆವಾಸದಲ್ಲಿದ್ದಾಗ ನಿಗೂಢ ರೀತಿಯಲ್ಲಿ ಮರಣ ಹೊಂದಿದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಅತ್ಯಂತ ಹೆಚ್ಚಿನ ರೀತಿಯ ನೋವು ಕಷ್ಟ ಅನುಭವಿಸಿದ್ದು ನಮ್ಮ ಪಕ್ಷ. ಮಹೋನ್ನತ ನಾಯಕರ ತತ್ವ, ಸಿದ್ಧಾಂತಗಳನ್ನು ಉಸಿರಾಗಿಸಿಕೊಂಡಿರುವ ಬಿಜೆಪಿ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಪಕ್ಷವಾಗಿ ಬೆಳೆದು ನಿಂತಿದೆ. ನರೇಂದ್ರ ಮೋದಿಯವರನ್ನು ಇಡೀ ದೇಶದ ಜನತೆ ಭರವಸೆಯನ್ನು ಇಟ್ಟಿದ್ದಾರೆ. ಭಾರತ ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಅಭ್ಯರ್ಥಿ ಗೆಲುವಿಗೆ ಹಗಲಿರುಳು ದುಡಿಯಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿವೇಕಾನಂದ ಬಡ್ಡಿ, ರವಿಕಾಂತ ಬಗಲಿ ಇತರÀರು ಇದ್ದರು.

loading...