ಮೋದಿ ದೇಶದ ಆರ್ಥಿಕತೆ, ಅನ್ನದಾತರ ಬಗ್ಗೆ ಮಾತನಾಡಲಿ: ಶರದ್ ಪವಾರ್

0
0

ಮುಂಬೈ :- ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ಬಿರುಸು ಗೊಂಡಿರುವಾಗಲೇ  ಯುಕೆಯಲ್ಲಿನ ಕಾಂಗ್ರೆಸ್‌ ಘಟಕವು ರಹಸ್ಯವಾಗಿ  ಪ್ರತಿಪಕ್ಷ ಲೇಬರ್‌ ಪಾರ್ಟಿ ನಾಯಕ ಜೆರೆಮಿ ಕಾರ್ಬಿನ್‌ರನ್ನು ಭೇಟಿಯಾಗಿ ಕಾಶ್ಮೀರ ವಿಚಾರ ಕುರಿತು ಮಾತುಕತೆ ನಡೆಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಇದಕ್ಕಾಗಿ ಪಕ್ಷದ ಮುಖಂಡ  ರಾಹುಲ್‌ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ  ಆಗ್ರಹಪಡಿಸಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಮೂರನೆಯವರ ಹಸ್ತಕ್ಷೇಪ ಸಲ್ಲ ಎಂಬ ಭಾರತೀಯ ನಿಯಮಗಳಿಗೆ ವಿರುದ್ಧವಾಗಿ ಕಾಂಗ್ರೆಸ್‌ ನಡೆದುಕೊಂಡಿದೆ. ಈ ಬಗ್ಗೆ ರಾಹುಲ್‌ ಗಾಂಧಿ ಸ್ಪಷ್ಟನೆ ನೀಡಿ, ಕ್ಷಮೆ ಯಾಚಿಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ .
ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಕೇವಲ ತಮ್ಮ ಕುಟುಂಬದ ಹಿತಾಸಕ್ತಿಗಾಗಿ  ಕೆಲಸ ಮಾಡುತ್ತಿವೆ. ಆದರೆ, ಬಿಜೆಪಿ ಮಾತ್ರ ದೇಶಕ್ಕಾಗಿ ಕೆಲಸ ಮಾಡುತ್ತಿದೆ ಎಂದೂ ಶಾ ಹೇಳಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ  ಪ್ರತಿಕ್ರಯಿಸಿರುವ ಎನ್‌ಸಿಪಿ ನಾಯಕ ಶರದ್‌ ಪವಾರ್‌, ಬೇಡದ ವಿಚಾರಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಮೋದಿ ಮತ್ತು ಅಮಿತ್ ಶಾ  ದೇಶದ ಆರ್ಥಿಕತೆ, ಅನ್ನದಾತರ ಬಗ್ಗೆ ಮಾತನಾಡಿ ಸತ್ಯ ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.

loading...