ಮೋದಿ ಮತ್ತೆÃ ಪ್ರಧಾನಿ: ಲಕ್ಷಿö್ಮÃರಂಗನಾಥ ದೇವಸ್ಥಾನಕ್ಕೆ ಪಾದಯಾತ್ರೆ

0
10

ಗುಳೇದಗುಡ್ಡ: ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವಿÃಕರಿಸಿದ ಹಿನ್ನಲೆಯಲ್ಲಿ ಇಲ್ಲಿನ ಹಿರಿಯ ನಾಗರಿಕರ ಪ್ರಜಾ ಜಾಗೃತ ವೇದಿಕೆಯ ಅಧ್ಯಕ್ಷ ವೆಂಕಣ್ಣ ಮ್ಯಾಗಿನಹಳ್ಳಿ ನೇತೃತ್ವದಲ್ಲಿ ರವಿವಾರ ನಗರದ ಸಾಲೇಶ್ವರ ದೇವಸ್ಥಾನದಿಂದ ಕೆಲವಡಿಯ ಲಕ್ಷಿö್ಮÃರಂಗನಾಥ ದೇವಸ್ಥಾನದ ವರೆಗೆ ಸಂಕಲ್ಪ ಪಾದಯಾತ್ರೆ ಕೈಗೊಳ್ಳಲಾಯಿತು.
ಇತ್ತಿÃಚೆಗೆ ನಡೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ನಗರದಿಂದ ಕೆಲವಡಿ ಗ್ರಾಮದ ಲಕ್ಷಿö್ಮÃರಂಗನಾಥ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಳ್ಳುವುದಾಗಿ ಹಿರಿಯರಾದ ವೆಂಕಣ್ಣ ಮ್ಯಾಗಿನಹಳ್ಳಿ ಸಂಕಲ್ಪ ತೊಟ್ಟಿದ್ದರು, ಅದರಂತೆ ನರೇಂದ್ರ ಮೋದಿ ಅವರು ಮತ್ತೆ ಬಾರಿಗೆ ಪ್ರಧಾನಿಯಾದ ಹಿನ್ನಲೆಯಲ್ಲಿ ರವಿವಾರ ಬಿಜೆಪಿ ಪಕ್ಷದ ಕಾರ್ಯಕರ್ತರು, ಮೋದಿ ಅಭಿಮಾನಿಗಳೊಂದಿಗೆ ನಗರದ ಸಾಲೇಶ್ವರ ದೇವಸ್ಥಾನದಿಂದ ಪಾದಯಾತ್ರೆಯ ಮೂಲಕ ಹರದೊಳ್ಳಿ, ಬಾದಾಮಿ ನಾಕೆ, ಕೋಟೆಕಲ್ಲ, ಮರುಡಿ, ಸುಮಡ್ಡಿ, ತೋಗುಣಶಿ, ತೆಗ್ಗಿಕ್ರಾಸ್ ಮೂಲಕ ಕೆಲವಡಿ ಗ್ರಾಮದ ಲಕ್ಷಿö್ಮÃರಂಗನಾಥ ದೇವಸ್ಥಾನ ತಲುಪಿತು. ಬಳಿಕ ದೇವರ ದರ್ಶನ ಮಾಡಿ, ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಲೋಕಸಭೆ ಸದಸ್ಯ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕರಾದ ರಾಜಶೇಖರ ಶೀಲವಂತ, ಶಾಂತಗೌಡ ಪಾಟೀಲ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವೆಂಕಣ್ಣ ಮ್ಯಾಗಿನಹಳ್ಳಿ ಅವರು, ಈ ಬಾರಿಯ ಲೋಕಸಭೆ ಚುನಾವಣೆಯ ಮೇಲೆ ಇಡೀ ಜಗತ್ತೆÃ ಗಮನವಿಟ್ಟು ನೋಡುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಅಭೂತಪೂರ್ವ ಗೆಲವು ಸಾಧಿಸಿ ಮತ್ತೆ ಪ್ರಧಾನಿಯಾದರು. ದೇಶ ಜನರು ಪ್ರಧಾನಿ ಮೋದಿ ಅವರ ಮೇಲೆ ಅತ್ಯಂತ ಹೆಚ್ಚಿನ ವಿಶ್ವಾಸವಿಟ್ಟು ಭಾರಿ ಗೆಲುವು ನೀಡಿದ್ದಾರೆ. ಅವರ ಸಾಧನೆಯೇ ಅವರ ಗೆಲುವಿಗೆ ಕಾರಣ ಎಂದರು.
ರಂಗಪ್ಪ ಸೇಬಿನಕಟ್ಟಿ ಮಾತನಾಡಿದರು.
ಪಾದಯಾತ್ರೆಯಲ್ಲಿ ಬಿಜೆಪಿ ನಗರಾಧ್ಯಕ್ಷ ದೀಪಕ ನೇಮದಿ, ನಿಜಗುಣೆಪ್ಪ ಕೊಳ್ಳಿ, ಪುರಸಭೆ ಸದಸ್ಯ ಪ್ರಶಾಂತ ಜವಳಿ, ನಾಗಪ್ಪ ಸನ್ನೂರ, ಗೌರೀಶಪ್ಪ ಭಾವಿ, ದಾನಪ್ಪ ಚಲ್ಲಾ, ಶಿವಪ್ಪ ಹೆಗಡೆ, ಮಲ್ಲೆÃಶ ಧೋತರದ, ಸಾವಿತ್ರಿ ಜೋಗೂರ, ಭುವನೇಶ ಪೂಜಾರಿ, ಮಲ್ಲು ಬಾದಾಮಿಮಠ, ಸುನೀತಾ ಮರಡಿಮಠ, ಯೋಗೇಶ ಉಂಕಿ, ಸವಿತಾ ಉಂಕಿ, ಮಹಾದೇವ ಜಗತಾಪ, ಈರಣ್ಣ ಶೇಖಾ, ಬಸವರಾಜ ಗೊಬ್ಬಿ, ಶಂಕರ ಕಾಟವಾ, ಶ್ರಿÃಕಾಂತ ಭಾವಿ, ಗಣೇಶ ಹುಂಡಿ, ಮುತ್ತು ಬಾರಾಟಕ್ಕಿ ಮತ್ತಿತರರು ಭಾಗವಹಿಸಿದ್ದರು.

loading...