ಮೋದಿ ಮತ್ತೊÃಮ್ಮೆ ಪ್ರಧಾನಿಯಾಗಿದ್ದಕ್ಕೆ ಹರಕೆ ತಿರಿಸಿದ ಅಭಿಮಾನಿ

0
8

ಬೆಳಗಾವಿ:ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗುವ ಮೂಲಕ ಕೇಂದ್ರದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿರುವ ಹಿನ್ನಲೆಯಲ್ಲಿ ಉದಗಟ್ಟಿ ಹಾಗೂ ಅವರ ಅಭಿಮಾನಿಗಳಿಂದ ಉರುಳು ಸೇವೆ ನಡೆಸಿ ಹರಕೆ ತಿರಿಸಿದರು.

ನಗರದ ಚನ್ನಮ್ಮ ವೃತ್ತದಲ್ಲಿರುವ ಗಣೇಶ ಮಂದಿರದಲ್ಲಿ ರವಿವಾರ ಸಂಜೆ ದೇವರಿಗೆ ಪೂಜೆ ಸಲ್ಲಿಸಿ, ೨೦೧ ಕಾಯಿ ಹಾಗೂ ೫೦೦ ಉಂಡಿಗಳನ್ನು ಹಂಚುವ ಮೂಲಕ ಉರುಳು ಸೇವೆ ನೆರವೆರಿಸಿ ಹರಕೆ ಪೂರ್ಣಗೊಳಿಸಿದರು.

ಇದೇ ವೇಳೆ ಬಾಳಾಸಾಹೇಬ್ ಉದಗಟ್ಟಿ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ರಚನೆಯಾಗಬೇಕು. ಜಿಲ್ಲೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೆÃತ್ರದ ಸುರೇಶ ಅಂಗಡಿ ಹಾಗೂ ಚಿಕ್ಕೊÃಡಿ ಲೋಕಸಭಾ ಕ್ಷೆÃತ್ರದ ಅಣ್ಣಸಾಹೇಬ್ ಜೊಲ್ಲೆ ಬಿಜೆಪಿ ಪಕ್ಷದಿಂದ ಪ್ರಚಂಡ ಬಹುಮತದಿಂದ ಆಯ್ಕೆಯಾಗದರೆ, ೨೦೧ ಕಾಯಿ ಹಾಗೂ ಉರುಳು ಸೇವೆ ಮಾಡುತ್ತೆನೆಂದು ಹರಕೆ ಹೊತ್ತಿದ್ದರಿಂದ ಹರಕೆಯನ್ನು ಪೂರ್ಣಗೊಳಿಸುತ್ತಿದೆ ಎಂದು ಹೇಳಿದರು. ಚಂದ್ರಕಾಂತ ಉದಗಟ್ಟಿ, ವಿಶ್ವನಾಥ ಉದಗಟ್ಟಿ, ಸಂದೀಪ ಉದಗಟ್ಟಿ, ಸುರೇಶ ಉದಗಟ್ಟಿ, ಸಾಗರ ಉದಗಟ್ಟಿ ಉರುಳು ಸೇನೆ ಮಾಡುವ ಮೂಲಕ ಹರಕೆ ಪೂರ್ಣಗೊಳಿಸಿದರು.
ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಂದ್ರ ಹರಕುಣಿ ಮಾತನಾಡಿ, ಉದಗಟ್ಟಿ ಬಂಧುಗಳು ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾದರೇ ಉರುಳು ಸೇವೆ ಮಾಡುತ್ತೆನೆ ಎಂದು ಹರಕೆ ಕಟ್ಟಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಉದಗಟ್ಟಿ ಬಂಧು ಗಳು ೨೦೧ ಟೆಂಗಿನ ಕಾಯಿ ಹಾಗೂ ೫೦೦ ಸಿಹಿ ಉಂಡಿಗಳನ್ನು ಹಂಚುವ ಮೂಲಕ ಹರಕೆ ಪೂರ್ಣಗೊಳಿಸಿದ್ದಾರೆ. ದೇವರು ಅವರ ಕುಟುಂಬಕ್ಕೆ ಒಳ್ಳೆದ ಮಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಲಿನಾ ಟೋಪಣ್ಣನವರ, ರಾಜಕುಮಾರ್ ಟೋಪಣ್ಣನವರ, ಸವಿತಾ ಗುಡಕಾಯಿ ಉದಗಟ್ಟಿ ಬಂಧುಗಳು, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

loading...