ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವದ ಹಕ್ಕುಗಳಿಗೆ ಧಕ್ಕೆ : ಮಮತಾ

0
4

ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಧರಣಿ ನಡೆಸುತ್ತಿರುವ ಸ್ಥಳದಿಂದಲೇ ಫೇಸ್‍ಬುಕ್ ಮೂಲಕ ಕೃಷಿಕ ಸಭಾ ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಸರ್ಕಾರ ರೈತ ಸಮುದಾಯದ ಸುಖನಿದ್ರೆಯನ್ನೂ ಕಸಿದುಕೊಂಡಿದೆ ಎಂದು ಕಿಡಿ ಕಾರಿದರು.

“ಕೇಂದ್ರ ಸರ್ಕಾರದ ನೀತಿಗಳಿಂದಾಗಿ ರೈತರು ಆತ್ಮಹತ್ಯೆಗೆ ಮುಂದಾಗುವಂತಾಗಿದೆ. ರೈತರ ಸಹಾಯಕ್ಕಾಗಿ ಕೇಂದ್ರದಿಂದ ಯಾವುದೇ ಸಹಾಯ ಪಡೆಯಲು ರಾಜ್ಯ ಸರ್ಕಾರ ಸಿದ್ಧವಿಲ್ಲ. 500 ಹಾಗೂ 1 ಸಾವಿರ ಮುಖಬೆಲೆಯ ನೋಟ್ ಬ್ಯಾನ್‍ ಸಂದರ್ಭದಲ್ಲಂತೂ 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದರು.”ಮೋದಿಯವರು ಕೇಂದ್ರದ ಯೋಜನೆಗಳಿಂದ ಲಾಭ ಪಡೆದುಕೊಳ್ಳುತ್ತ, ಯಶಸ್ಸಿಗಾಗಿ ಸಂಭ್ರಮಿಸುತ್ತ ಫೋಟೋಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಆದರೆ ನಾವು ಎಲ್ಲ ಖರ್ಚುವೆಚ್ಚಗಳನ್ನು ನಿಭಾಯಿಸಬೇಕಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದರು.

loading...