ಮ್ಯಾದನೇರಿ ಕ್ರಾಸ್ ಬಳಿ,ಟೆಂಪೊ-ಲಾರಿಗೆ ಡಿಕ್ಕಿ:ಮಹಾರಾಷ್ಟ್ರ ಮೂಲದ 5 ಜನ ಸಾವು

0
37


ಯಲಬುರ್ಗಾ: ಲಾರಿಗೆ ಟೆಂಪೊಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ 5 ಜನ ಮೃತಪಟ್ಟಿರುವ ಘಟನೆ ತಾಲೂಕಿನ ಮ್ಯಾದನೇರಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಬುಧವಾರ ಮದ್ಯರಾತ್ರಿ ಘಟನೆ ನಡೆದಿದೆ.
ಮೂಲತ: ಮಹಾರಾಷ್ಟ್ರದ ಅಹ್ಮದ್‍ನಗರದಿಂದ ಮೈಸೂರಿಗೆ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ತಾಲೂಕಿನ ಮ್ಯಾದನೇರಿ ಕ್ರಾಸ್ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಟೆಂಪೋ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ನಾಲ್ವರು ಮೃತ್ತಪಟ್ಟರೆ,ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮತ್ತೊಬ್ಬ ಗಾಯಾಳು ಮೃತ ಪಟ್ಟಿದ್ದಾರೆ. ಮೃತರಲ್ಲಿ ಜಮೀಲಾ(50), ತಾಯೋಬ್(14), ಇಕ್ಬಾಲ್ (42), ಮದೀನಾ (50) ಇನುಷಾ(42), ಎಂದು ತಿಳಿದು ಬಂದಿದೆ.ಉಳಿದಂತೆ ವಾಹನದಲ್ಲಿದ್ದ 9 ಜನರಿಗೆ ತೀವ್ರ ಗಾಯಗೊಂಡಿದ್ದಾರೆ.ಗಾಯಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಲ್‍ಕಲ್, ಬಾಗಲಕೋಟ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಸಿಪಿಐ ನಾಗರಾಜ ಕಮ್ಮಾರ್, ಬೇವೂರು ಠಾಣೆಯ ಪಿಎಸ್‍ಐ ಶಿವರಾಜ ಇಂಗಳೆ ಭೇಟಿ ನೀಡಿ ಪರಿಶೀಲಿಸಿದರು.ಈ ಕುರಿತು ಬೇವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here