“ಮ್ಯಾನ್ ವರ್ಸಸ್ ವೈಲ್ಡ್” ನಲ್ಲಿ ಪಿ ಎಂ ಮೋದಿ…. ಸಾಮಾಜಿಕ ಮಾಧ್ಯಮಗಳಲ್ಲಿ ವೈವಿಧ್ಯಮಯ ಸ್ಪಂದನೆ….!

0
6

ನವದೆಹಲಿ:- “ನಾನಾಗ ತುಂಬಾ ಬಡವನಾಗಿದ್ದೆ. ಚಹಾ ಮಾರಾಟ ಮಾಡುತ್ತಿದ್ದೆ, ನಿಜಕ್ಕೂ ನನಗೆ ಸ್ವಾರ್ಥವೇ ಇರಲಿಲ್ಲ. 18 ವರ್ಷಗಳಲ್ಲಿ ಈ ರೀತಿ ಮಾತನಾಡುತ್ತಿರುವುದು ಇದೇ ಮೊದಲು. ನಾನು ತುಂಬಾ ಕಷ್ಟಪಟ್ಟಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾತ್ರಿ ಡಿಸ್ಕವರಿ ಚಾನೆಲ್‌ ಪ್ರಸಾರ ಮಾಡಿದ “ಮ್ಯಾನ್ ವರ್ಸಸ್ ವೈಲ್ಡ್” ಕಾರ್ಯಕ್ರಮದಲ್ಲಿ ಆಡಿರುವ ಮಾತುಗಳಿಗೆ ಸಾಮಾಜಿಕ ಮಾಧ್ಯಮ ತನ್ನದೇ ಆದ ಶೈಲಿಯಲ್ಲಿ ಸ್ಪಂದಿಸಿದೆ.
” ನಾನಾಗ ತುಂಬಾ ಬಡವನಾಗಿದ್ದೆ, ಚಹಾ ಮಾರಾಟಮಾಡುತ್ತಿದ್ದೆ ಎಂಬ ಮೋದಿ ಅವರ ಮಾತುಗಳು … ಬಿಯರ್ ಗ್ರಿಲ್ಸ್‌ ಗೆ ಮೊದಲಿರಬಹುದು, ಆದರೆ, ಇದು ನಮಗೆ ಹಳೆಯ ಮಾತು “ಮನ್ ಕಿ ಬಾತ್” ನಲ್ಲಿ ನಾವು ಹಲವು ಬಾರಿ ಈ ಮಾತುಗಳನ್ನು ಕೇಳಿದ್ದೇವೆ ಎಂದು ಕೆಲವರು ಟ್ವೀಟ್ ಮಾಡಿದ್ದರೆ, ಮೋದಿಯವರು ಹಿಂದಿಯಲ್ಲಿ ಮಾತನಾಡಿರುವ ಬಗ್ಗೆ ಹಲವರು ಟ್ವೀಟ್ ಮಾಡಿದ್ದಾರೆ.

ಹಿಂದಿಯ ಒಂದು ಶಬ್ದವೂ ಗೊತ್ತಿಲ್ಲದ ಬಿಯರ್ ಗ್ರಿಲ್ಸ್, ಮೋದಿಯವರ ಮಾತುಗಳನ್ನು ಹೇಗೆ ಅರ್ಥಮಾಡಿಕೊಂಡರು ಎಂದು ಹೆಚ್ಚುಮಂದಿ ಅಚ್ಚರಿ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ದೇಶಾದ್ಯಂತ ಲಕ್ಷಾಂತರ ಜನರು ಮೋದಿ ಕಾರ್ಯಕ್ರಮವನ್ನು ನೋಡಿದ್ದಾರೆ ಡಿಸ್ಕವರಿ ಚಾನೆಲ್ ಟಿಆರ್‌ಪಿ ದರ ಅದ್ಭುತವಾಗಿ ಏರಿಕೆಯಾಗಿದೆ. ಡಿಸ್ಕವರಿ ಚಾನೆಲ್‌ನ ಮುಖ್ಯಸ್ಥರು ಸಾಕಷ್ಟು ಹಣ ಸಂಗ್ರಹಿಸಿರಬಹುದು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
ದೇಶದ ಅನೇಕ ಹಳ್ಳಿಗಳಲ್ಲಿ, ಶಾಲೆಗಳು ಮತ್ತು ಪಂಚಾಯತ್ ಕಚೇರಿಗಳಲ್ಲಿ ಬಿಜೆಪಿ ಮುಖಂಡರು ಟಿವಿ ಹಾಕಿ ಮೋದಿ ಅವರ ಕಾರ್ಯಕ್ರಮವನ್ನು ಜನರಿಗೆ ತೋರಿಸಿದ್ದರು.

loading...