ಯಂಗ್ ರೆಬೆಲ್ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ವಿರಾಜಿಸಲಿ: ರಜನಿಕಾಂತ್

0
14

ಬೆಂಗಳೂರು:-ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯದ ಚೊಚ್ಚಲ ಚಿತ್ರ ‘ಅಮರ್’ ರಾಜ್ಯಾದ್ಯಂತ ನಾಳೆ ಮೇ 31ರಂದು ತೆರೆ ಕಾಣಲಿದ್ದು, ಅಭಿಮಾನಿಗಳು ಚಿತ್ರ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಏತನ್ಮಧ್ಯೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, ಅಭಿಷೇಕ್ ಹಾಗೂ ಅವರ ಮೊದಲ ಚಿತ್ರ ‘ಅಮರ್’ಗೆ ಶುಭ ಹಾರೈಸಿದ್ದಾರೆ.

“ನನ್ನ ಆತ್ಮೀಯ ಗೆಳೆಯ ಅಂಬರೀಶ್ ಹಾಗೂ ಸೋದರಿ ಸುಮಲತಾ ಪುತ್ರ ಅಬಿಷೇಕ್ ಅಂಬರೀಶ್ ‘ಅಮರ್’ ಚಿತ್ರದ ಮೂಲಕ ಕೀರ್ತಿವಂತನಾಗಲಿ, ಅಂಬರೀಶ್ ಅವರಂತೆಯೇ ಚಿತ್ರರಂಗದಲ್ಲಿ ಹೆಸರು ಗಳಿಸಿ, ಕರ್ನಾಟಕದ ಜನರ ಹೃದಯದಲ್ಲಿ ವಿರಾಜಿಸಲಿ” ಎಂದು ಹಾರೈಸಿದ್ದಾರೆ.

‘ಅಮರ್’ ಚಿತ್ರದ ಮೊದಲ ಟಿಕಟ್ ಅನ್ನು ಅಂಬರೀಶ್ ಅಭಿಮಾನಿಯೊಬ್ಬರು, ಒಂದು ಲಕ್ಷ ರೂಪಾಯಿಗೆ ಖರೀದಿಸಿದ್ದು, ಚಿತ್ರದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ನಾಗಶೇಖರ್ ನಿರ್ದೇಶನದ ‘ಅಮರ್’ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್, ತಾನ್ಯಾ ಹೋಪ್, ಮೊದಲಾದವರು ನಟಿಸಿದ್ದು, ಚಿತ್ರದ ಹಾಡುಗಳು, ಟ್ರೇಲರ್ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

loading...