ಯಲ್ಲಮ್ಮ ದೇವಸ್ಥಾನ ಆವರಣದ ಸುತ್ತ ಅತಿಕ್ರಮಣ ಮಳಿಗೆಗಳ ಸರ್ವೆ: ಸಚಿವ ಕೋಟಶ್ರೀನಿವಾಸ ಪೂಜಾರಿ

0
91
ಯಲ್ಲಮ್ಮ ದೇವಸ್ಥಾನ ಆವರಣದ ಸುತ್ತ ಅತಿಕ್ರಮಣ ಮಳಿಗೆಗಳ ಸರ್ವೆ: ಸಚಿವ ಕೋಟಶ್ರೀನಿವಾಸ ಪೂಜಾರಿ
ಬೆಳಗಾವಿ:ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ತೊಂದರೆಯಾಗುವ ಮಳಿಗೆಗಳನ್ನು ಸರ್ವೆ ನಡೆಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಭಾನುವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯ ಸರಕಾರ ಪ್ರವಾಸೋದ್ಯಮ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆ ಇವುಗಳನ್ನು ಸೇರಿದಂತೆ ರಾಜ್ಯದಲ್ಲಿ ಪ್ರವಾಸೋಧ್ಯಮವನ್ನು ಅಭಿವೃದ್ಧಿ ಪಡಿಸಬೇಕೆಂದು ಸುಧಾ ಮೂರ್ತಿ ನೇತೃತ್ವದಲ್ಲಿ ಸಿಎಂ ಯಡಿಯೂರಪ್ಪ ಸಮಿತಿ ರಚನೆ ಮಾಡಿದ್ದಾರೆ.
ಸುಧಾ ಮೂರ್ತಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಈಗಾಗಲೇ ಎರಡ್ಮೂರು ಸಭೆಗಳು ಆಗಿವೆ.
ಅದರಲ್ಲಿ ನಮ್ಮ‌ ದೇವಾಲಯಗಳ‌ ಅಭಿವೃದ್ಧಿ ಹೇಗೆ ಮಾಡಬೇಕು. ಎಂಬುದು ಒಂದು ಭಾಗದಲ್ಲಿ ಚಿಂತನೆ ಇರುತ್ತದೆ. ಆದ್ದರಿಂದ ಅತ್ಯಂತ ಪುರಾತನ ಹಾಗೂ ಇತಿಹಾಸ ಇರುವ ದೇವಸ್ಥಾನಗಳಿಗೆ ಮತ್ತು ಬಹಳ ಕಾಲದ ಕಲಾಕೃತಿ ಹೊಂದಿರುವ ಇತಿಹಾಸ ಸಾರಿ ಹೇಳುವ ದೇವಾಲಯಗಳನ್ನು ನಮ್ಮ‌ ಇಲಾಖೆಯಿಂದ ಗುರುತು ಮಾಡಲಾಗುತ್ತಿದೆ.
ಯಲ್ಲಮ್ಮ ದೇವಸ್ಥಾನ ಸೇರಿದಂತೆ ಇನ್ನೂ ರಾಜ್ಯದ ಕೆಲ ಕಡೆಗಳಲ್ಲಿ ದೇವಸ್ಥಾನದ ಆವರಣದ ಜಾಗೆ ಹಾಗೂ ಬೀದಿಗಳನ್ನು ಪ್ರಭಾವಿಗಳು ಅತಿಕ್ರಮಿಸಿಕೊಂಡಿದ್ದಾರೆ. ದೇವಸ್ಥಾನದ ಅಭಿವೃದ್ಧಿಗೆ ದಕ್ಕೆಯಾಗುತ್ತದೆ ಎನ್ನುವ ಆರೋಪದಲ್ಲಿ ಯಾರು ಅತಿಕ್ರಮಣ ‌ಮಾಡಿಕೊಂಡಿದ್ದಾರೋ ಅದರ ಬಗ್ಗೆ ಸರಕಾರದಿಂದ ಈಗಲೇ ಸರ್ವೆ ಮಾಡಿಸಲಾಗುವುದು.
ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಕೆಲ‌ ಗೂಡಂಗಂಡಿಗಳ ಮಾಲೀಕರಿಗೆ ಪುನರ್ವಸತಿ ಮಾಡಲಾಗುತ್ತಿದೆ. ಅವರನ್ನು ಬೀದಿಗೆ ಹಾಕಲಾಗದು. ಅವರಿಗೆ ಬೇಕಾದ ವ್ಯವಸ್ಥೆ ಮಾಡಿ ಸರ್ವೆ ಮಾಡಿದ ಬಳಿಕ ಅದನ್ನು ತೆರವುಗೊಳಿಸಲಾಗುವುದು ಎಂದರು.
.ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆಯ ಕುರಿತು ನಮ್ಮ ಇಲಾಖೆಗೆ ಇಲ್ಲಿಯ ವರೆಗೆ ಪ್ರಸ್ತಾವನೆ ಬಂದಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಸವದತ್ತಿ ಯಲ್ಲಮ್ಮ ದೇವಸ್ಥಾನದ‌ ಆವರಣದಲ್ಲಿ ಯಾವುದೇ ರಾಸಾಯನಿಕ ಲೇಪಿತವಾದ ಧಾರ್ಮಿಕ ವಿಷಯಕ್ಕೆ ಸಂಬಂದಿಸಿದ ವಿಚಾರಗಳನ್ನು ಮುಜಾರಿ ಇಲಾಖೆ ಸಹಿಸುವುದಿಲ್ಲ. ಕುಂಕುಮ ಸೇರಿದಂತೆ ಶ್ರೀಗಂಧದಲ್ಲೂ ಕಲಬೆರಕೆ ಹಾಗೂ ಕೆಮಿಕಲ್ ಮಾರಾಟ ಮಾಡುವ ವಿಷಯಕ್ಕೆ ಸಂಬಂಧಿದಂತೆ ಸರಕಾರ ತನಿಖೆ ನಡೆಸಿ ಅಂಥವರ ಮೇಲೆ ಕ್ರಮ ಕೈಗೊಂಡು ಅದನ್ನು‌ ನಿಷೇಧ ಮಾಡಲಾಗುವುದು.
loading...