ಯಶಸ್ವಿಯಾಗಲು ಬಯಸಿದಲ್ಲಿ ಶ್ರಮ ಮುಖ್ಯವಾಗಿರುತ್ತದೆ

0
37

ಕನ್ನಡಮ್ಮ ಸುದ್ದಿ-ಧಾರವಾಡ : ಯಶಸ್ಸು ಕೆಲವೊಂದು ಸುಳಿವುಗಳನ್ನು ಬಿಟ್ಟಿರುತ್ತದೆ. ನಾವು ಅವುಗಳನ್ನು ಗುರುತಿಸಿ, ಯಶಸ್ವಿ ವ್ಯಕ್ತಿಗಳ ಗುಣಗಳನ್ನು ಅಳವಡಿಸಿಕೊಂಡರೆ ನಾವೂ ಯಶಸ್ವಿ ವ್ಯಕ್ತಿಗಳಾಗುತ್ತೇವೆ ಎಂದು ಸಂಕಲ್ಪ ಸೆಮಿಕಂಡಕ್ಟರನ ಸ್ಥಾಪಕ ವಿವೇಕ ಪವಾರ್ ಹೇಳಿದರು.
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿದ್ದ ಫೆಸ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಶಸ್ಸು ಆಕಸ್ಮಿಕವಲ್ಲ ಅದು ನಮ್ಮ ಮನೋಭಾವ ತರುವ ಪರಿಣಾಮವಾಗಿದೆ. ನಮ್ಮ ಮನೋಭಾವವು ನಮ್ಮದೇ ಆಯ್ಕೆ ಆಗಿದೆ. ಆದ್ದರಿಂದ ಯಶಸ್ಸು ಸಹ ಆಯ್ಕೆಯ ವಿಷಯವಾಗಿಯೇ ಹೊರತು ಅದೃಷ್ಟದ ವಿಚಾರವಲ್ಲ. ನೀವು ನಿಜವಾಗಲೂ ಯಶಸ್ವಿಯಾಗಲು ಬಯಸಿದಲ್ಲಿ. ಪರಾಜಿತರು ಮಾಡಲು ಇಚ್ಚಿಸದಿರುವುದನ್ನು ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ ಎಂದರು.
ಅರ್ಹ ಅಥವಾ ಯೋಗ್ಯವಾದ ಗುರಿಯನ್ನು ಪ್ರಗತಿ ಪೂರ್ವಕವಾಗಿ ಸಾಧಿಸುವ ಪರಿಯೇ ಯಶಸ್ಸು. ಯಶಸ್ಸು ಹಾಗೂ ಸಂತೋಷ ಯಾವತ್ತೂ ಒಟ್ಟಿಗೆ ಸಾಗುವುವು ನಿಮಗೆ ಬೇಕಾದುದನ್ನು ಪಡೆಯುವುದೇ ಯಶಸ್ಸು. ದೊರಕಿರುವುದನ್ನು ಬಯಸುವುದೇ ಸಂತೋಷ. ಪರೀಕ್ಷೆಗಳಲ್ಲಿ ಅಂಕಗಳಿಸುವುದು ಮುಖ್ಯವಲ್ಲ ಪಡೆದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಜೀವನದಲ್ಲಿ ಪರಿಶ್ರಮ ಪಡದೇ ಯಾವುದೇ ಉತ್ತಮವಾದುದು ಸಿಗುವದಿಲ್ಲ ಎಂದರು.
ಪ್ರಾಚಾರ್ಯ ಡಾ. ಅಜಿತ ಪ್ರಸಾದ ಅಧ್ಯಕ್ಷತೆವಹಿಸಿ ಮಾತನಾಡಿ, ನಾವು ನಮ್ಮ ಸಮಸ್ಯೆಗಳಿಂದ ದೂರ ಓಡುವಂತಿಲ್ಲ ಕೇವಲ ಪರಾಜಿತರು ಮಾತ್ರ ಓಡಿಹೋಗುತ್ತಾರೆ. ಯಶಸ್ವಿ ವ್ಯಕ್ತಿಗಳು ವಿಶೇಷÀವಾದ ಕೆಲಸಗಳನ್ನೇನು ಮಾಡುವದಿಲ್ಲ ಮಾಡುವ ಕೆಲಸಗಳನ್ನೆ ವಿಶೇಷವಾಗಿ ಮಾಡುತ್ತಾರೆ ಎಂದರು.
ಜಿ. ಕೃಷ್ಣಮೂರ್ತಿ, ಸೂರಜ್ ಜೈನ್, ವಿವೇಕ್ ಲಕ್ಷ್ಮೇಶ್ವರ, ಎಲ್, ವಿ, ಲಕ್ಕನಗೌಡರ, ರಾಧಾ ಗೌಡರು ಉಪಸ್ಥಿತರಿದ್ದರು.

loading...