ಯಾರೋ ರಾಜೀನಾಮೆ ನೀಡಿದ್ದರೂ ಮೂಡಲಗಿ ತಾಲೂಕಿಗಾಗಿ ನಿರಂತರ‌ ಹೋರಾಟ: ಕಡಾಡಿ

0
39

ಕನ್ನಡಮ್ಮ ಸುದ್ದಿ
ಬೆಳಗಾವಿ:18 ಮೂಡಲಗಿ ತಾಲೂಕು ಘೋಷಣೆಯಲ್ಲಿ ಬಿಜೆಪಿ ಪಕ್ಷ ಬದ್ದವಾಗಿದೆ ಪಕ್ಷಾತೀತವಾಗಿ ಎಲ್ಲರೂ‌ ಹೋರಾಟ ಮಾಡುತ್ತಿದ್ದೇವೆ ಎಂದು ಈರಣ್ಣಾ ಕಡಾಡಿ ಇಂದಿಲ್ಲಿ ಹೇಳಿದರು.
ಅವರು ಸೋಮವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಜನರ ಪರವಾಗಿ ಹೋರಾಟ‌ ಮಾಡುತ್ತಿದ್ದೇವೆ. ಬಾಲಚಂದ್ರ ಜಾರಕಿಹೊಳಿ ರಾಜೀನಾಮೆ ನೀಡಿದರೂ‌ ನಮ್ಮ‌ ಹೋರಾಟ ನಿಲ್ಲೋಲ್ಲ ಎಂದರು.
ಗದ್ದಿಗೌಡರ ಆಯೋಗ ರಚನೆ ಮಾಡಿದಾಗ ಮೂಡಲಗಿ ತಾಲೂಕು ಮಾಡಲು ಅಭ್ಯಂತರವಿಲ್ಲ ಎಂದು‌ ವರದಿ ನೀಡಿದವು.2013 ರಲ್ಲಿ ವಿಧಾನ ಸಭೆಯಲ್ಲಿ 43 ತಾಲೂಕುಗಳನ್ನು ಘೋಷಣೆ ಮಾಡಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ತಡೆಹಿಡಿತ್ತು. 2017 ರಲ್ಲಿ 49 ತಾಲೂಕುಗಳನ್ನು ವಿಧಾನ ಸಭೆಯಲ್ಲಿ‌ ಘೋಷಣೆ‌ ಮಾಡಿದರು.
49 ತಾಲೂಕುಗಳ ಪಟ್ಟಿಯಲ್ಲಿ ಮೂಡಲಗಿ ಕೈ ಬಿಟ್ಟು ದಕ್ಷಿಣ ಕರ್ನಾಟದ ತಾಲೂಕನ್ನು ಸೇರಿಸಿರುವುದು ವಿಪರ್ಯಾಸದ ಸಂಗತಿ.
ಮೂಡಲಗಿಯನ್ನು ಯಾವ ಕಾರಣದಿಂದ ಕೈ ಬಿಟ್ಟಿರುವುದು ಸರಕಾರದಲ್ಲಿ ಯಾವುದೇ ಉಲ್ಲೇಖವಿಲ್ಲ. ರಾಜಕೀಯ ಒತ್ತಡಕ್ಕೆ‌ಮಣಿದು ಸರಕಾರದ ಕಾಗದವನ್ನು ಕಸದ ಬುಟ್ಟಿಗೆ ಎಸೆದಿದ್ದು ಏಕೆ ಎಂದು ಸರಕಾರವನ್ನು ಪ್ರಶ್ನಿಸಿದರು.
ಅಶೋಕ ಪೂಜಾರಿ ಮಾತನಾಡಿ, ಕಳೆದ 12 ದಿನಗಳಿಂದ ಮೂಡಲಗಿ ತಾಲೂಕು‌ ಘೋಷಣೆ ಮಾಡಿರುವುದನ್ನು ಕೆಲವರು ತಡೆಹಿಡಿದಿರುವುದು‌ ಖಂಡನೀಯ. ಮೂಡಲಗಿ ತಾಲೂಕನ್ನು ಸರಕಾರ‌ಕೂಡಲೇ ತಾಲೂಕನ್ನಾಗಿ ಘೋಷಣೆ ಮಾಡಬೇಕು. ಮೂಡಲಗಿ ತಾಲೂಕು ಆಗಬೇಕೆಂದು ಇಲ್ಲಿನ ಗ್ರಾಮಸ್ಥರು ಅಧಿಕೃತ ಘೋಷಣೆ ಮಾಡಬೇಕೆಂದು ಈ ಹಿಂದಿನ‌ ಮುಖ್ಯಮಂತ್ರಿ ಜಗಧೀಶ ಶೆಟ್ಟರ ಅವರಿಗೆ ಮನವಿ ಸಲ್ಲಿಸಿದರು ಎಂದರು.
ಮೂಡಲಗಿ ಭಾಗದ ಜನರು ದೀಪದ ಕೆಳಗೆ ದೀಪ ಹುಡುಕುವ ಯತ್ನ ಮಾಡುತ್ತಿದ್ದಾರೆ. ಸರಕಾರದಿಂದ ಅಧಿಕೃತ ಮೂಡಲಗಿ ತಾಲೂಕು‌ ಘೋಷಣೆಯಾಗಿದೆ ಅನುದಾನವನ್ನು ನೀಡಲಾಗಿದೆ. ಏಕಾಏಕಿ ತಾಲೂಕಾ ರಚನೆ ಕೈ ಬಿಟ್ಟಿರುವುದು ವಿಪರ್ಯಾಸದ ಸಂಗತಿ ಎಂದರು.
ತಾಲೂಕು ರಚನೆಯಾದಂತೆ ತಡೆದಿರುವುದು ತಾವೇ ಎಂದು ಹೇಳಿಕೆ ನೀಡಿರುವ ಜಿಲ್ಲಾ ಮಂತ್ರಿಗಳ‌ಮಾತಿನಿಂದ ಸತ್ಯಾಗ್ರಹದ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ರಾಜಕೀಯ ಹಿತಾಸಕ್ತಿ ಕಾಪಾಡಿಕೊಳ್ಳಲು ಮೂಡಲಗಿ ತಾಲೂಕಿನ ಪ್ರಸ್ತಾವನೆಗೆ ರಮೇಶ ಜಾರಕಿಹೊಳಿ ತಡೆದಿದ್ದಾರೆ ಎಂಬ ಭಾಸವಾಗುತ್ತಿದೆ. ರಾಜಕೀಯ ನಿರ್ಣಯ ತೆಗೆದುಕೊಳ್ಳುವಾಗ ಆ ಕುಟುಂಬದ ರಾಜಕೀಯ ನಾಯಕರು ತೆಗೆದುಕೊಳ್ಳುತ್ತಿರುವುದು ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ ಎಂದರು.
ಜಿಲ್ಲಾಮಂತ್ರಿಗಳು ಸಚಿವ ಸಂಪುಟದಲ್ಲಿ ಮೂಡಲಗಿ ತಾಲೂಕು ತಡೆಹಿಡಿದಿರುವುದು ಮಾತೃದ್ರೋಹದ ಕೆಲಸ ಎಂದು ಹರಿಹಾಯ್ದರು. ಬಾಲಚಂದ್ರ ಜಾರಕಿಹೊಳಿ‌ ಅವರು ಸಹೋದರ ರಮೇಶ ಜಾರಕಿಹೊಳಿ ಅವರಿಗೆ ಮನವರಿಕೆ ಮಾಡಿಕೊಡಬೇಕೆಂದರು.

 

 

loading...