ಯುಎಸ್‌ ಓಪನ್‌ ಸಿಂಗಲ್ಸ್‌ನಿಂದ ಆ್ಯಂಡಿ ಮರ್ರೆ ಔಟ್‌

0
4

ವಾಷಿಂಗ್ಟನ್‌:- ಸಿನ್ಸಿನಾಟಿ ಓಪನ್‌ ಮೊದಲು ಸುತ್ತಿನಲ್ಲೇ ಸೋತು ನಿರಾಸೆಗೆ ಒಳಗಾಗಿರುವ ಬ್ರಿಟೀಷ್‌ ಟೆನಿಸ್‌ ತಾರೆ ಆ್ಯಂಡೆ ಮರ್ರೆ ಅವರು ಮುಂಬರುವ ಯುಎಸ್‌ ಓಪನ್‌ ಸಿಂಗಲ್ಸ್‌ ವಿಭಾಗದಲ್ಲಿ ಕಣಕ್ಕೆ ಇಳಿಯದಿರಲು ನಿರ್ಧರಿಸಿದ್ದಾರೆ.
ಸತತ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಆ್ಯಂಡಿ ಮರ್ರೆ ಅವರು ಕಳೆದ ಜನವರಿಯಲ್ಲಿ ಜರುಗಿದ್ದ ಆಸ್ಟ್ರೇಲಿಯಾ ಓಪನ್‌ನಲ್ಲಿ ಸೋಲಿನ ಬಳಿಕ ತಮ್ಮ ಟೆನಿಸ್‌ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಬಗ್ಗೆ ಭಾವುಕರಾಗಿ ಹೇಳಿದ್ದರು. ಸೊಂಟದ ಬಲ ಭಾಗದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು ಇನ್ನೂ ಚೇತರಿಸಿಕೊಳುತ್ತಿದ್ದಾರೆ. ಹಾಗಾಗಿ, ಸಿಂಗಲ್ಸ್‌ನಲ್ಲಿ ಆಡಲು ಸ್ವಲ್ಪ ಕಠಿಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯುಎಸ್‌ ಓಪನ್‌ನಲ್ಲಿ ಸಿಂಗಲ್ಸ್‌ನಿಂದ ಹೊರಗುಳಿಯುತ್ತಿದ್ದಾರೆ.
ಆದರೆ, ಯುಎಸ್‌ ಓಪನ್‌ ಪುರುಷರ ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ ಆಡಲು ನಿರ್ಧರಿಸಿದ್ದಾರೆ. ಕಳೆದ ತಿಂಗಳು ನಡೆದಿದ್ದ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ನಲ್ಲೂ ಅವರು ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್ ಆಡಿದ್ದರು.
ಆದಾಗ್ಯೂ, ಆ್ಯಂಡಿ ಮರ್ರೆ ಅವರು ಮುಂದಿನ ವಾರ ಆರಂಭವಾಗುವ ವಿನ್ಸ್‌ಟನ್‌-ಸಲೀಮ್‌ ಓಪನ್‌ನಲ್ಲಿ ಸಿಂಗಲ್ಸ್ ಸ್ಪರ್ಧೆಯಲ್ಲಿ ಮುಂದುವರಿಯಲಿದ್ದಾರೆ.

loading...