ಯುವಕನನ್ನು ಕೊಲೆಗೈದ ಮೂವರು ಆರೋಪಿಗಳ ಬಂಧನ

0
30

ಯುವಕನನ್ನು ಕೊಲೆಗೈದ ಮೂವರು ಆರೋಪಿಗಳ ಬಂಧನ

ಬೆಳಗಾವಿ:
ಸೋಮನಟ್ಟಿಯ ಯುವಕನನ್ನು ಕೊಲೆಗೈದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸ್‌ರು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಳಪ್ಪಾ ಭಗವಂತಪ್ಪಾ ಕೋಳ್ಯಾನಟ್ಟಿ, ಬಸವರಾಜ ಯಲ್ಲಪ್ಪಾ ಉಪ್ಪಾರ, ಮಂಜುನಾಥ ಪೀರಪ್ಪಾ ಬಂಧಿAತ ಆರೋಪಿಗಳು, ಮಗ ಸಾಗರ ಗಂಗಪ್ಪ ಪೂಜೇರಿ ಕಾಣೆಯಾಗಿದ್ದಾನೆ ಎಂದು ಗಂಗಪ್ಪಾ ಪೂಜೇರಿ ತಂದೆ ಫೆ.೧೧ ರಂದು ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಸೊಸೆ ಅನೈತಿಕ ಸಂಬAಧಕ್ಕೆ ಮಗ ಅಡ್ಡಿಯಾಗಿದ್ದ ಕೆಲವು ದಿನಗಳ ಹಿಂದೆ ಇಬ್ಬರು ಮನಸ್ತಾಪ ಉಂಟಾಗಿತ್ತು
ಹಿನ್ನೆಲ್ಲೆಯಲ್ಲಿ ಇಬ್ಬರ ಮಧ್ಯೆ ಜಗಳವಾಗಿತ್ತು ಇದಾದ ಬಳಿಕ ಮಗ ಕಾಣೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಫೆ. ೨೨ ರಂದು ಜೋಯಿಡಾ ತಾಲೂಕಿನ ಉಳವಿ ಬಳಿ ಯುವಕನ ಶವ ಪತ್ತೆಯಾಗಿತ್ತು. ಪ್ರಕರಣ ಬೆನ್ನಟ್ಟಿದ ಪೊಲೀಸ್‌ರು ಮೂವರು ಆರೋಪಿಗಳನ್ನು ಬುಧವಾರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಆಯುಕ್ತ, ವಿಕ್ರಮ ಅಮಟೆ ಡಿ.ಸಿ.ಪಿ ಮಾರ್ಗದರ್ಶನದಲ್ಲಿ
ಎಸ್ . ಆರ್ . ಕಟ್ಟಿಮನಿ ಎ.ಸಿ.ಪಿ. ಮಾರ್ಕೆಟ್ , ಸಂಗಮೇಶ ಶಿವಯೋಲ ವಿ.ಐ , ಮಾರ್ಕೆಟ , ಬರಲ. ಹಾವನ್ನವರ ಪಿಎಸ್‌ಐ ಮಾರ್ಕೇಟ ಹಾಗೂ ಮಾರ್ಕೆಟ ಪೊಲೀಸ್ ಠಾಣೆಯ ಸಿಬ್ಬಂದಿ ಜನರಾದ ಎಸ್.ಬಿ. ಖಾನಾಪೂರೆ , ವಿರೂಪಾಕ್ಷಿ ಬೂದನವರ , ಎಲ್ , ಎಸ್ , ಕಲ್ಲರ , ಆಶೀರ ಜಮಾದಾರ , ಎಮ್.ಎಸ್.ಚಾವಡಿ , ಯಲ್ಲಪ್ಪ ಕೊಚ್ಚರಲಿ , ಚಿಕ್ಕಣ್ಣ ಕೆರನಾಯಕ , ಎಸ್.ಎಮ್.ಕರಲಿಂಗಣ್ಣವರ , ಖಾದರಸಾಬ ಖಾನಮ್ಮನವರ , ಮತ್ತು ಎ.ಸಿ.ಪಿ. ಮಾರ್ಕೆಟ ಕಚೇಲ , ನಿಬ್ಬಂದಿ ಜನರಾದ ಎಫ್.ಸಿ.ಮುಜಾವರ , ಸತೀಶ್ ಶಾಲೆ , ನವೀನ್ , ಅನೀಲ , ಮಹೇಶ ಕೌಜಲಗಿ ಬಂಧಿಸಿದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

loading...