ಯುವಕರು ಸಾತ್ವಿಕ ವಿಚಾರ, ಸದ್ಗುಣ ಬೆಳೆಸಿಕೊಳ್ಳಿ: ಚಚಡಿ

0
19

ಕನ್ನಡಮ್ಮ ಸುದ್ದಿ-ಧಾರವಾಡ: ದೇಶಕ್ಕೆ ಸ್ವಾತಂತ್ರ್ಯ ದೊರೆತು ಏಳು ದಶಕವಾದರೂ ಇಲ್ಲಿಯವರೆಗೆ ಶೇ. 76ರಷ್ಟು ಮಾತ್ರ ಅಕ್ಷರಸ್ಥರು, ಸುಶಿಕ್ಷಿತರಾಗಿದ್ದಾರೆ ಇದು ಖೇದಕರ ಎಂದು ಕರ್ನಾಟಕ ಕಲಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ. ಎನ್.ಜಿ. ಚಚಡಿ ಅಭಿಪ್ರಾಯಪಟ್ಟರು.
ರಾ.ಹ.ದೇಶಪಾಂಡೆ ಸಭಭಾವನದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಕುಮಾರ ವಿಶಾಲ ರಾಜಶೇಖರ ಹಂಚಿನಮನಿ ಸಂಸ್ಮರಣೆ ದತ್ತಿ ಕಾರ್ಯಕ್ರಮಲ್ಲಿ “ಭಾರತದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ” ವಿಷಯ ಕುರಿತು ಮಾತನಾಡಿದರು. ಯುವಜನಾಂಗ ದೇಶದ ದೊಡ್ಡ ಶಕ್ತಿ. 2020 ರ ಹೊತ್ತಿಗೆ ಭಾರತವು ಇಡೀ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮುತ್ತದೆ, ಇದಕ್ಕೆ ಯುವಜನಾಂಗವೇ ಬುನಾದಿ ಎಂದು ಮಾಜಿ ರಾಷ್ಟ್ರಪತಿ ದಿ. ಎ.ಪಿ.ಜೆ. ಅಬ್ದುಲ ಕಲಾಂ ಅವರ ವಿಜನ್ ಇಂಡಿಯಾ ಬಗ್ಗೆ ಹೇಳಿದನ್ನು ಸ್ಮರಿಸಿ, ದೇಶವು ಹೊಸ ಆರ್ಥಿಕ ನೀತಿಯನ್ನು ರೂಪಿಸಿಕೊಂಡು ಸರಿಯಾದ ದಿಶೆಯಲ್ಲಿ ಯುವಜನಾಂಗವನ್ನು ಬಳಸಿಕೊಂಡಿದ್ದೇ ಆದಲ್ಲಿ ಇದು ಸಾಧ್ಯವಾಗಬಲ್ಲದು ಎಂದರು.
ಸರಕಾರದ ರಾಷ್ಟ್ರೀಯ ಆದಾಯದಲ್ಲಿ ಶಿಕ್ಷಣಕ್ಕೆ ಈಗಿರುವ ಶೇ 4 ರಿಂದ 10 ಕ್ಕೆ ನಿರ್ದಿಷ್ಟಪಡಿಸಿ ಶಿಕ್ಷಣಕ್ಕೆ ಆಧ್ಯತೆ ನೀಡಿದಲ್ಲಿ, ಸರಕಾರ ಯುವಜನಾಂಗವನ್ನು ಸುಶಿಕ್ಷಿತರನ್ನಾಗಿ ಮಾಡುವಲ್ಲಿ, ಅವರ ಕೌಶಲ್ಯ ಹೆಚ್ಚಿಸಿ, ಉತ್ತಮ ಆರೋಗ್ಯ ಒದಗಿಸಿ, ಉದ್ಯೋಗ ಸೃಷ್ಠಿ ಮಾಡುವುದರಿಂದ ದೇಶದ ಅಭಿವೃದ್ಧಿಯಾಗುವುದು. ಅವರು, ಯುವಕರು ನಮ್ಮ ದೇಶದ ಇತಿಹಾಸವನ್ನು ಅರಿತುಕೊಂಡು, ಸಾತ್ವಿಕ ವಿಚಾರ, ಸದ್ಗುಣಗಳನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆ ನೀಡುವಂತಾಗಬೇಕು, ದಿ. ವಿಶಾಲ ಹಂಚಿನಮನಿ ಕುರಿತ ದತ್ತಿ ಕಾರ್ಯಕ್ರಮ ಯುವ ಪೀಳಿಗೆಗೆ ಹೊಸ ಸಂದೇಶ ನೀಡುವಂತಹ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು.
ಸಿದ್ಧಶಿವಯೋಗಿ ಅಪ್ಪಗಳವರು ಸಾನ್ನಿಧ್ಯವಹಿಸಿ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ತರುಣರು ದೇಶದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದು, ಈ ದಿಶೆಯಲ್ಲಿ ಇನ್ನೂ ಹೆಚ್ಚಿನ ಆವಿಷ್ಕಾರ, ಸಂಶೋಧನೆ, ಸಂಘಟನೆಯಲ್ಲಿ ತೊಡಗಿಕೊಂಡು ತರುಣರು ದೇಶಕ್ಕೆ ತಮ್ಮಿಂದ ಇನ್ನೂ ಹೆಚ್ಚಿನ ಉತ್ಕøಷ್ಠ ಕೊಡುಗೆ ನೀಡಿ, ವಿಶ್ವದಲ್ಲಿ ಭಾರತವು ಇನ್ನೂ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವಂತೆ ಕಾರ್ಯ ಮಾಡಬೇಕೆಂದರು. ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ ಅಧ್ಯಕ್ಷತೆವಹಿಸಿ ಮಾತನಾಡಿದರು.
2017-18 ನೇ ಸಾಲಿನಲ್ಲಿ ಕೆ.ಎಚ್. ಪಾಟೀಲ ಕಾಮರ್ಸ್ ಮತ್ತು ಬಿ.ಬಿ.ಎ ಕಾಲೇಜಿನ ವಿದ್ಯಾರ್ಥಿನಿ ಬಿ.ಬಿ.ಎ.ದಲ್ಲಿ ಪ್ರಥಮ ಸ್ಥಾನ ಪಡೆದ ಪೂರ್ಣಿಮಾ ಶೆಟ್ಟರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ದಿ. ವಿಶಾಲನ ತಾಯಿ ಶ್ರೀಮತಿ ವಿಜಯಲಕ್ಷ್ಮೀ ಹಂಚಿನಮನಿ ಉಪಸ್ಥಿತರಿದ್ದರು. ಪ್ರಕಾಶ ಉಡಿಕೇರಿ ಸ್ವಾಗತಿಸಿದರು. ದತ್ತಿದಾನಿ, ಚನ್ನಬಸಪ್ಪ ಮರದ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಶಾಂತೇಶ ಗಾಮನಗಟ್ಟಿ ವಂದಿಸಿದರು.

loading...