ಯುವಜನರಲ್ಲಿ ಸ್ವಾತಂತ್ರö್ಯದ ಉನ್ನತ ಮೌಲ್ಯಗಳನ್ನು ರೂಢಿಸುವ ಅಗತ್ಯ: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ

0
34

ವಿಜಯಪುರ: ವಿದ್ಯಾರ್ಥಿಗಳಲ್ಲಿ ಹಾಗೂ ಇಂದಿನ ಯುವಜನರಲ್ಲಿ ಸ್ವಾತಂತ್ರö್ಯವನ್ನು ಗೌರವಿಸುವ, ಎತ್ತಿ ಹಿಡಿಯುವಂತಹ ಉನ್ನತ ಮೌಲ್ಯಗಳನ್ನು ರೂಢಿಸಬೇಕಾಗಿದೆ. ಭವಿಷ್ಯದ ನಾಗರಿಕರಾಗಿರುವ ವಿದ್ಯಾರ್ಥಿಗಳಲ್ಲಿ ಮತ್ತು ಯುವಜನರಲ್ಲಿ ಉನ್ನತ ಮಟ್ಟದ ಮೌಲ್ಯಗಳ ರೂಢಿಗತವಾದರೆ ಮಾತ್ರ ಭವಿಷ್ಯದಲ್ಲಿ ದೇಶದ ಉನ್ನತಿ ನಿರೀಕ್ಷಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರಿÃಡಾಂಗಣದಲ್ಲಿಂದು ೭೩ನೇ ಸ್ವಾತಂತ್ರೊö್ಯÃತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ವಿವಿಧ ಪಡೆಗಳಿಂದ ಗೌರವ ವಂದನೆ ಸ್ವಿÃಕರಿಸಿ ಅವರು ಮಾತನಾಡಿ, ದೇಶದ ಸ್ವಾತಂತ್ರö್ಯ ಪರಿಕಲ್ಪನೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಲಕ್ಷಾಂತರ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ದೊರೆತ ಸ್ವಾತಂತ್ರö್ಯದಿಂದಾಗಿ ಇಂದು ಮುಕ್ತವಾಗಿ ಬದುಕಲು ಸಾಧ್ಯವಾಗಿದೆ. ದೇಶದ ಜನರು ಸ್ವಾತಂತ್ರö್ಯವನ್ನು ಗೌರವಿಸುವ ಅಗತ್ಯವನ್ನು ಮನಗಾಣದಿದ್ದರೆ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ ಎಂದೇ ಭಾವಿಸಬೇಕಾಗುತ್ತದೆ. ದೇಶಧ ಜನರು ಸ್ವಾತಂತ್ರö್ಯದ ಬಗೆಗಗೆ ನಿರಾಸಕ್ತಿ ತಾಳಿದರೆ ಅದು ದೇಶದ ಸ್ವಾತಂತ್ರö್ಯಕ್ಕೆ ಕಂಟಕವಾಗಬಲ್ಲದು. ಯುವಜನರು ಮತ್ತು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸ್ವಾತಂತ್ರö್ಯದ ಮೌಲ್ಯಗಳ ಬಗೆಗೆ ಅರಿವು ಮತ್ತು ಗೌರವ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.
ಆಂಗ್ಲರ ದಬ್ಬಾಳಿಕೆ, ಕುಟಿಲನೀತಿ, ಭಾರತೀಯರನ್ನು ಗುಲಾಮರಂತೆ ನಡೆಸಿಕೊಳ್ಳುವ ಪದ್ಧತಿ, ಸಾಮ್ರಾಜ್ಯಶಾಹಿ ಹಾಗೂ ಒಡೆದು ಆಳುವ ನೀತಿಗಳಿಂದಾಗಿ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಆದ ಜೀವ ಹಾನಿಗೆ ಲೆಕ್ಕವಿಲ್ಲ. ಭಾರತಾಂಬೆಗೆ ಸ್ವಾತಂತ್ರö್ಯ ಕಿರೀಟ ತೊಡೆಸಲು ಹುತಾತ್ಮರಾದವರು ಲೆಕ್ಕವಿಲ್ಲದಷ್ಟು ಜನ, ಬ್ರಿಟಿಷರ ವಿರುದ್ದ ಹೋರಾಟ ಮಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವೀರಸಿಂಧೂರ ಲಕ್ಷö್ಮಣ, ಆತ್ಮಬಲಿದಾನ ವೀರರಾದ ಚಾಪೇಕರ್ ಸೋದರರು, ತೇಜೋಭಾಸ್ಕರ್ ವಾಸುದೇವ ಬಲವಂತ ಫಡಕೆ, ವೀರಸಾವರಕರ್, “ಸ್ವಾತಂತ್ರ್ö್ಯ” ಎಂಬ ಪದವನ್ನು ತನ್ನ ಹೆಸರಿನಲ್ಲಿ ಮತ್ತು ಉಸಿರಿನಲ್ಲಿ ಬೆರೆಸಿದ ಚಂದ್ರಶೇಖರ ಆಝಾಧ, ಕ್ರಾಂತಿಸೂರ್ಯ ಭಗತಸಿಂಗ್, ರಣಬೇರಿ ಮೊಳಗಿಸಿದ ಸ್ವಾಭಿಮಾನಿ ಮಂಗಲಪಾಂಡೆ, ವೀರಾಂಗಣೆ ಝಾನ್ಸಿರಾಣಿ ಲಕ್ಷಿö್ಮÃಬಾಯಿ, ಲೋಕಮಾನ್ಯ ಬಾಲಗಂಗಾಧರ ತಿಲಕ, ಲಾಲ ಲಜಪತರಾಯ, ಬಿಪಿನ್ ಚಂದ್ರಪಾಲ್, ಮಹಾತ್ಮಾಗಾಂಧೀಜಿ, ನೇತಾಜಿ ಸುಭಾಷಚಂದ್ರ ಬೋಸ್, ಪಂಡಿತ ಜವಾಹರಲಾಲ ನೆಹರು, ವಿಶ್ವರತ್ನ ಬಾಬಾಸಾಹೇಬ ಅಂಬೇಡ್ಕರ್, ಉಕ್ಕಿನ ಮನುಷ್ಯ ಸರದಾರ ವಲ್ಲಭಭಾಯಿ ಪಟೇಲ್, ಗೋಪಾಲಕೃಷ್ಣ ಗೋಖಲೆ, ಮೌಲಾನಾ ಆಜಾದ್‌ರಂತಹ ನಾಯಕರ ದೊಡ್ಡಪಟ್ಟಿಯೇ ನಮ್ಮೆದುರಿಗಿದೆ ಎಂದು ಹೇಳಿದರು.
ಲಕ್ಷಾಂತರ ಜನರ ಪ್ರಾಣ, ತ್ಯಾಗ, ಬಲಿದಾನಗಳಿಂದಾಗಿ ನಮಗೆ ಸ್ವಾತಂತ್ರö್ಯ ದೊರೆತಿದೆ. ಬ್ರಿಟಿಷರ ದಾಸ್ಯದಿಂದ ಮುಕ್ತಿ ದೊರೆತಿದೆ. ಹಿರಿಯರ ತ್ಯಾಗ, ಬಲಿದಾನಗಳಿಗೆ ಅರ್ಥ ಬರಬೇಕಾದರೆ ಈ ದೇಶದ ಜನಸಾಮಾನ್ಯರ ಬದುಕು ಹಸನಗೊಳಿಸುವ ಕಾರ್ಯ ಪೂರ್ಣಗೊಳಿಸಬೇಕಾಗಿದೆ. ಈ ಕಾರ್ಯಕ್ಕೆ ನಾವೆಲ್ಲರೂ ಕೈ ಜೋಡಿಸಿದಾಗ ಮಾತ್ರ ಸ್ವಾತಂತ್ರö್ಯ ದಿನಾಚರಣೆ ಅರ್ಥಪೂರ್ಣವಾಗುತ್ತದೆ. ಸ್ವಾತಂತ್ರö್ಯ ದಿನಾಚರಣೆ ಪ್ರತಿಯೊಬ್ಬ ಭಾರತೀಯನು ಗೌರವಪೂರ್ವಕವಾಗಿ ಆಚರಿಸಬೇಕಾದ ದಿನವಾಗಿದೆ ಎಂದು ಹೇಳಿದರು.
ಇಡೀ ಕರ್ನಾಟಕದ ಅರ್ಧಕ್ಕಿಂತಲೂ ಭಾಗ ಪ್ರಕೃತಿಯ ಮುನಿಸಿನಿಂದ ತತ್ತರಿಸಿ ಹೋಗಿವೆ. ಹಲವಾರು ಜನರು ಜೀವ ಕಳೆದುಕೊಂಡಿದ್ದಾರೆ. ಸಾವಿರಾರು ದನಕರುಗಳು ನೀರು ಪಾಲಾಗಿವೆ. ಲಕ್ಷಾಂತರ ಎಕರೆಗಳಲ್ಲಿ ಬೆಳೆದು ನಿಂತಿದ್ದ ಫಸಲು ಪ್ರವಾಹಕ್ಕೆ ಆಹುತಿಯಾಗಿದೆ. ಹಿಂದೆಂದೂ ಕಂಡು ಕೇಳರಿಯದ ಪ್ರವಾಹ ಇಡೀ ರಾಜ್ಯದ ಜನರ ನಿದ್ದೆಯನ್ನೆÃ ಕಂಗೆಡಿಸಿದೆ. ವಿಜಯಪುರ ಜಿಲ್ಲೆಯಲ್ಲಿ ಮಳೆಯ ಅಬ್ಬರ ಇಲ್ಲದಿದ್ದರೂ ಮಹಾರಾಷ್ಟçದಲ್ಲಿ ಸುರಿದ ಭಾರತಿ ಮಳೆಗೆ ಕೃಷ್ಣೆ ಮತ್ತು ಭೀಮಾ ನದಿಗಳು ಉಕ್ಕಿ ಹರಿದ ಪರಿಣಾಮ ಹಲವಾರು ಹಳ್ಳಿಗಳ ಜನರು ಸಂಕಷ್ಟಕ್ಕಿÃಡಾಗಿದ್ದಾರೆ. ಈ ಜನರ ರಕ್ಷಣೆಗೆ ಜಿಲ್ಲಾಡಳಿತ ಟೊಂಕ ಕಟ್ಟಿ ನಿಂತುಕೊಂಡಿದೆ. ಅಗತ್ಯವಿರುವೆಡೆ ಕಾಳಜಿ ಕೇಂದ್ರಗಳನ್ನು ಆರಂಭಿಸಿ ಜನರ ನೆರವಿಗೆ ಜಿಲ್ಲಾಡಳಿತ ನಿಂತುಕೊಂಡಿದೆ ಎಂದು ಹೇಳಿದರು.
ನೀರಿನಿಂದ ಆವೃತವಾದ ಹಳ್ಳಿಗಳ ಜನರನ್ನು ರಕ್ಷಿಸಲು ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿ-ಸಿಬ್ಬಂದಿ ವರ್ಗ, ವಿವಿಧ ಸಂಘ-ಸಂಸ್ಥೆಗಳು ಮತ್ತು ವಿಶೇಷವಾಗಿ ಜನಸಾಮಾನ್ಯರೂ ಕೈ ಜೋಡಿಸಿದ್ದಾರೆ. ಜಿಲ್ಲೆಯ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ನೀಡಿದ ಮಾರ್ಗದರ್ಶನ, ಸಹಾಯ, ಸಹಕಾರದಿಂದ ಪ್ರವಾಹದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಪ್ರಕೃತಿ ವಿಕೋಪ ಸೃಷ್ಟಿಸಿರುವ ಅವಾಂತರಗಳಿಂದ ನಾವು ಪಾಠ ಕಲಿಯಬೇಕಿದೆ. ಪರಿಸರ ರಕ್ಷಣೆ ಕಾರ್ಯದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕಾಗಿದೆ. ಜಿಲ್ಲೆಯ ರೈತರು ತಮ್ಮ ಹೊಲಗಳಲ್ಲಿ ಮಳೆಯ ನೀರು ಇಂಗುವಂತೆ ಮಾಡುವುದು, ಕೃಷಿ ಹೊಂಡಗಳನ್ನು ನಿರ್ಮಿಸುವುದು, ಅರಣ್ಯ ಕೃಷಿ, ಬದುಗಳಲ್ಲಿ ಗಿಡಗಳನ್ನು ನೆಡುವುದರ ಮೂಲಕ ಪರಿಸರ ರಕ್ಷಣೆ ಜೊತೆಗೆ ತಮ್ಮ ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಕೋಟಿ ವೃಕ್ಷ ಅಭಿಯಾನ ಆರಂಭಿಸಲಾಗಿದೆ. ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವುದು ಅಗತ್ಯವಾಗಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಕೆರೆ ತುಂಬುವ ಯೋಜನೆಯಿಂದಾಗಿ ಹಲವಾರು ಹಳ್ಳಿಗಳಲ್ಲಿ ನೀರಿನ ಲಭ್ಯತೆ ಹೆಚ್ಚಾಗಿದೆ. ಇದನ್ನು ಬಳಸಿಕೊಂಡು ವೃಕ್ಷ ಅಭಿಯಾನ ಒಂದು ಮಹಾ ಆಂದೋಲನವಾಗಿ ರೂಪುಗೊಂಡರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬಹುದೊಡ್ಡ ಬದಲಾವಣೆಗಳನ್ನು ಕಾಣಲು ಸಾಧ್ಯವಿದೆ ಎಂದು ಹೇಳಿದರು.
ವಿಜಯಪುರ ಎಂದರೆ ಬರದ ನಾಡು ಎಂಬ ಹಣೆಪಟ್ಟಿ ಸದಾ ಬೆಂಬಿಡದೇ ಕಾಡುತ್ತಿದ್ದರೂ ಅವಿಭಜಿತ ವಿಜಯಪುರ ಜಿಲ್ಲೆ ಕರ್ನಾಟಕದ ಪಂಜಾಬ ಎಂದೇ ಹೆಸರು ಗಳಿಸಿದೆ. ರಾಜ್ಯದ ಇತರ ಜಿಲ್ಲೆಗಳಂತೆಯೇ ವಿಜಯಪುರ ಜಿಲ್ಲೆಯಲ್ಲಿಯೂ ಅಭಿವೃದ್ದಿಯ ಶಕೆ ಆರಂಭವಾಗಿದೆ. ಇತಿಹಾಸದ ಜತೆಗೆ ವರ್ತಮಾನವನ್ನು ತೂಗಿ ನೋಡುವ, ವಾಸ್ತವತೆಗೆ ಕನ್ನಡಿ ಹಿಡಿಯುವ ಹಾಗೂ ಮುನ್ನೊÃಟವನ್ನು ಗುರುತಿಸುವ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಡಾ.ಎಂ.ಬಿ.ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...