ಯು.ಕೆ.ಕ್ಯಾಬಿನೆಟ್‌ ಪುನರ್ರಚನೆ: ಮೂವರು ಭಾರತೀಯ ಮೂಲದ ಸಂಸದರಿಗೆ ಸಚಿವ ಸ್ಥಾನ

0
4

ಲಂಡನ್-  ತನ್ನ ಐತಿಹಾಸಿಕ ಗೆಲುವಿನ ಎರಡು ತಿಂಗಳ ನಂತರ, ಯುನೈಟೆಡ್ ಕಿಂಗ್‌ಡಮ್  ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮೂವರು  ಭಾರತೀಯ ಮೂಲದ ಸಂಸದರೊಂದಿಗೆ ಸಚಿವ ಸಂಪುಟವನ್ನು ಪುನರ್ರಚಿಸಿದ್ದಾರೆ.
ಇನ್ಫೋಸಿಸ್ ಸಹ  ಸಂಸ್ಥಾಪಕ ರಾಮರಾವ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ (39) ಗುರುವಾರ  ಯುನೈಟೆಡ್ ಕಿಂಗ್‌ಡಂನ ಹಣಕಾಸು ಮಂತ್ರಿಯನ್ನಾಗಿ ನೇಮಕ ಮಾಡಿದ್ದಾರೆ. ಈ ಮೊದಲು ಈ ಸ್ಥಾನದಲ್ಲಿ ಪಾಕಿಸ್ತಾನ ಮೂಲದ ಸಾಜಿದ್ ಜಾವಿದ್ ಇದ್ದರು. ಅಲೋಕ್ ಶರ್ಮಾ  ಅವರನ್ನು ಬ್ರಿಟಿಷ್ ಕ್ಯಾಬಿನೆಟ್‌ನಲ್ಲಿ ವ್ಯವಹಾರ ಕಾರ್ಯದರ್ಶಿಯಾಗಿ ಹಾಗೂ ಪ್ರೀತಿ ಪಟೇಲ್ ಅವರನ್ನು ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಜಾನ್ಸನ್ ಕಳೆದ ಜುಲೈನಲ್ಲಿ ಪಟೇಲ್ ಅವರನ್ನು ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಿಸಿದ್ದರು.
ಯುಕೆಯಲ್ಲಿ ಉನ್ನತ ಹುದ್ದೆ ಹೊಂದಿರುವ ಮೊದಲ ಬ್ರಿಟಿಷ್ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸಾಜಿದ್  ಜಾವಿದ್ ಅವರು ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಮತ್ತು ಅವರ ಮುಖ್ಯ ಸಲಹೆಗಾರ ಡೊಮಿನಿಕ್  ಕಮ್ಮಿಂಗ್ಸ್ ಅವರೊಂದಿಗೆ ದೇಶದ ಆರ್ಥಿಕತೆಯನ್ನು ನಿಯಂತ್ರಿಸುವ ವಿಷಯದಲ್ಲಿ ನಡೆದ ಆಂತರಿಕ ಹೋರಾಟದಲ್ಲಿ ಸೋತಿದ್ದಾರೆ ಎನ್ನಲಾಗಿದೆ.
ಸಾಜಿದ್ ಜಾವಿದ್ ಅವರ ಚಾನ್ಸಲರ್ ಆಗುತ್ತಾರೆ ಎಂದು ಪ್ರಧಾನಿಯವರು ಮಾಧ್ಯಮಗಳು ಮತ್ತು ಸಾರ್ವಜನಿಕರ ಮುಂದೆ ಕೆಲವು ದಿನಗಳ ಹಿಂದೆ ಭರವಸೆ ನೀಡಿದ್ದರು.
“ನಾನು ನಿಮಗೆ ಸಂಪೂರ್ಣ ಖಚಿತವಾದ ಭರವಸೆ ನೀಡಲಿದ್ದೇನೆ, ನಾನು ಸಾಜಿದ್ ಜಾವಿದ್‌ ರನ್ನು ನನ್ನ ಚಾನ್ಸಲರ್ ಆಗಿ ನೇಮಕ ಮಾಡಿಕೊಳ್ಳುತ್ತೇನೆ. ಅವರು ಒಬ್ಬ ಮಹಾನ್ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ, ಮತ್ತು ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರಧಾನಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು.

loading...