ಯೋಧರ ಮೇಲಿನ ದಾಳಿಗೆ ಪ್ರತಿಕಾರವೇ ಮೂಲ

0
15

ಸಿಂದಗಿ: ಭಾರತೀಯರಾದ ನಾವುಗಳು ಶಾಂತಿ ಪ್ರಿÃಯರು ಆದರೆ ಇಂದು ಆ ಸಹನೆ, ತಾಳ್ಮೆಯನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇತ್ತಿಚಿಗೆ ನಡೆದ ಯೋಧರ ಮೇಲೆ ನಡೆದ ದುರಂತ ಹೇಡಿತನದಿಂದ ಕೂಡಿದೆ. ಅದಕ್ಕೆಲ್ಲ ಪ್ರತೀಕಾರವೇ ಮೂಲ ಅದನ್ನು ಮುಂದೊಂದು ದಿನ ಕಾಣಲಿದ್ದೆÃವೆ ಎಂದು ಕಸಾಪ ಅಧ್ಯಕ್ಷ ಎಸ್.ಬಿ.ಚೌಧರಿ ಹೇಳಿದರು.
ಅವರು ತಾಲೂಕಿನ ಮೋರಟಗಿ ಗ್ರಾಮದ ಕಲ್ಪವೃಕ್ಷ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಶ್ರಿÃ ವ್ಹಿ.ಎಸ್.ಬಿರಾದಾರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ರವಿವಾರ ಹಮ್ಮಿಕೊಂಡ ವಾರ್ಷಿಕ ಸ್ನೆÃಹ ಸಮ್ಮೆÃಳನ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಶುಭ ಕೋರುವ ಸಮಾರಂಭದಲ್ಲಿ ಭಾಗವಹಿಸಿ ಮಾತಾಡಿದರು.

ದಾವಣಗೇರಿಯ ವ್ಹಿ.ಸಿ.ಹೊನ್ನಳ್ಳಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾನಿಧ್ಯ ವಹಿಸಿ ಗಂಗಾವತಿಯ ಬ್ರಹ್ನಮಠ ಹರನಾಳದ ಪೂಜ್ಯ ಸಂಗನಬಸವ ಸ್ವಾಮಿಗಳು, ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಶರಣಗೌಡ ಬಿರಾದಾರ ಮಾತನಾಡಿದರು. ವೇದಿಕೆ ಮೇಲೆ ಜಿಪಂ ಸದಸ್ಯ ಬಿಂದುರಾಯಗೌಡ ಪಾಟೀಲ, ಶಂಕರ ಬಗಲಿ, ಸಂಸ್ಥೆಯ ಆಡಳಿತಾಧಿಕಾರಿ ಎಸ್.ಎಚ್.ದೂಳಬಾ, ಡಾ. ಶ್ರಿÃಶೈಲ ಕೊಣಶಿರಸಗಿ, ವರದಿಗಾರ ಪಂಡಿತ ಯಂಪೂರೆ, ಸಿದ್ದು ಕೆರಿಗೊಂಡ, ಬಿ.ಎಸ್.ತಮ್ಮಾಗೋಳ, ಎಸ್.ಬಿ.ಬಿರಾದಾರ, ಸೇರಿದಂತೆ ಇತರರು ಇದ್ದರು. ಇದೇ ಸಂದರ್ಭದಲ್ಲಿ ದೂರದರ್ಶನ ಕಲಾವಿದರಾದ ಇಂದುಮತಿ ಸಾಲಿಮಠ, ಭಾಗೇಶ ಮುರಡಿ, ಮಹಾಂತೇಶ ಹಡಪದ ಅವರಿಂದ ನಗೆ ಹಬ್ಬ ಕಾರ್ಯಕ್ರಮ ಜರುಗಿತು.
ಶಿಕ್ಷಕ ನಾಗೇಂದ್ರ ಪಿ.ಆರ್ ಮತ್ತು ಚೇತನಾ ಗೌಡ ನಿರೂಪಿಸಿದರು. ಎಸ್.ಎಮ್.ಲಂಗೋಟಿ ಸ್ವಾಗತಿಸಿದರು. ಆರ್.ಆಯ್.ಚೌಧರಿ ವಂದಿಸಿದರು.

loading...