ರಂಗಪಂಚಮಿ ನಾಟಕೋತ್ಸವ ಕಾರ್ಯಕ್ರಮ

0
85

ಸಿದ್ದಾಪುರ: ತಾಲೂಕಿನ ಒಡ್ಡೋಲಗ(ರಿ) ಹಿತ್ತಲಕೈ ಇವರಿಂದ “ರಂಗಪಂಚಮಿ ನಾಟಕೋತ್ಸವ” ಕಾರ್ಯಕ್ರಮ ಶ್ರೀ ಶಂಕರ ಮಠದಲ್ಲಿ ಆರಂಭಗೊಂಡಿದೆ. ಜ.23 ರವರೆಗೆ ಪ್ರತಿದಿನ ಸಾಯಂಕಾಲ 6 ಗಂಟೆಗೆ ದಿನಕ್ಕೊಂದರಂತೆ 5 ನಾಟಕಗಳು ಪ್ರದರ್ಶನಗೊಳ್ಳಲಿವೆ.
ನಾಟಕೋತ್ಸವ ಉದ್ಘಾಟಿಸಿದ ಚಲಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ನಾಟಕೋತ್ಸವಕ್ಕೆ ಶುಭ ಹಾರೈಸಿದರು. ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ನಿಕಟಪೂರ್ವ ಯಕ್ಷಗಾನ ಆಕಾಡೆಮಿ ಸದಸ್ಯೆ ಡಾ.ವಿಜಯನಳಿನಿ ರಮೇಶ ಶಿರಸಿ, ಹೊಗ್ಗೋಡು ನಿನಾಸಂ ನಿಕಟಪೂರ್ವ ಪ್ರಾಂಶುಪಾಲ ಕೆ.ಜಿ. ಮಾಹಬಲೇಶ್ವರ ಮಾತನಾಡಿದರು.
ನಂತರ ಧಾರವಾಡ ಜಾನಪದ ಸಂಶೋಧನಾ ಕೇಂದ್ರದವರಿಂದ ಶ್ರೀ ಕೃಷ್ಣ ಪಾರಿಜಾತ ನಾಟಕ ಪ್ರದರ್ಶನಗೊಂಡಿತು.
ಜನವರಿ 20ರಂದು ಹಿತ್ಲಕೈ ಒಡ್ಡೋಲಗ ರಂಗಪರ್ಯಟನ 2017 ರವರಿಂದ “ಬಾಕಿ ಕೊಡೋದಿಲ”್ಲ, 21 ರಂದು ಶಿಕಾರಿಪುರದ ಗುಡಿ ರಂಗ ಪಯಣ-2017 ರವರಿಂದ “ಅಂಧಯುಗ”, 22ರಂದು ನೀನಾಸಂ ತಿರುಗಾಟ-2017 ರವರಿಂದ “ಮಧ್ಯಮ ವ್ಯಾಯೋಗ”, ಮತ್ತು 23 ರಂದು “ಸು ಬಿಟ್ರೆ ಬಣ್ಣ, ಬ ಬಿಟ್ರೆ ಸುಣ್ಣ” ಎಂಬ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಸುಮಂಗಲ ಗೌಡ ಮತ್ತು ಮೈತ್ರ ರಂಗಗೀತೆ ಹಾಡಿದರು. ಗಣಪತಿ ಹೆಗಡೆ ನಿರೂಪಿಸಿದರು. ಉಪನ್ಯಾಸಕ ಎಂ.ಕೆ ನಾಯ್ಕ ಹೊಸಳ್ಳಿ ಸ್ವಾಗತಿಸಿ ವಂದಿಸಿದರು.

loading...