ರಂಗಭೂಮಿ ಉಳಿಯಬೇಕು, ಕಲಾವಿಧರಿಗೆ ಅನುಕೂಲವಾಗಬೇಕು : ಡಂಗನವರ

0
43

ಹುಬ್ಬಳ್ಳಿ: ರಂಗಭೂಮಿ ಉಳಿಯಬೇಕು, ಕಲಾವಿಧರಿಗೆ ಅನುಕೂಲವಾಗಬೇಕು ಎಂಬುದೇ ನಾಟಕಗಳನ್ನು ಆಡಿಸುವ ಉದ್ಧೇಶವಾಗಿದೆ ಎಂದು ವಾಕರಸಾ ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ಹೇಳಿದರು.

ಅವರು ಧನರಾಜ ನಾಟ್ಯ ಕಲಾ ಸಂಘವು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಪ್ರಸನ್ ಕಾಲೊನಿಯ ಆಂಜನೇಯ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಶ್ರೀ ಶಿವಶರಣ ಹರಳಯ್ಯನವರ ಮಹಾತ್ಮೆ ನಾಟಕ ಪ್ರದರ್ಶನದ ಉಧ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ನಾಟಕ ಕಲಾವಿಧರೇ ನಿಜವಾದ ಹಿರೋಗಳು, ಸಿನೇಮಾ ನಟನೆ ಮಾಡುವವರು ರೀಲ್ ಹಿರೋಗಳು ಅದಕ್ಕಾಗಿ ನಾಟಕ ಕಲಾವಿಧರಿಗೆ ಇನ್ನೂ ಹೆಚ್ಚು ಸೌಲಭ್ಯಗಳು ದೊರೆಯಬೇಕು. ಜನರು ಉಚಿತ ನಾಟಕಗಳನ್ನು ನೋಡಿ ಕಲಾವಿಧರಿಗೆ ಪ್ರೋತ್ಸಾಹ ನೀಡಿ, ಗೌರವದಿಂದ ಕಾಣಬೇಕು. ಧನರಾಜ ನಾಟ್ಯ ಕಲಾ ಸಂಘವು ಉತ್ತಮ ನಾಟಕಗಳನ್ನು ಪ್ರದರ್ಶನ ಮಾಡುತ್ತಾ ಬಂದಿರುವುದು ಶ್ಲಾಘನೀಯ ಕಾರ್ಯ ಎಂದರು.ಆಂಜನೇಯ ದೇವಸ್ಥಾನದ ಅಧ್ಯಕ್ಷ ಎಸ್.ಎಫ್.ನಿರಂಜನಗೌಡ್ರ, ರಂಗಭೂಮಿ ಕಲಾವಿಧ ಪ್ರಕಾಶ ಧೂಳೆ, ಮಾತನಾಡಿದರು. ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ ಅವರು ಸ್ವಾಗತಿಸಿ, ನಿರೂಪಿಸಿದರು. ಧನರಾಜ ನಾಟ್ಯ ಕಲಾ ಸಂಘದ ಅಧ್ಯಕ್ಷ ಧನರಾಜ ಸಾತಪುತೆ, ಸಮಗಾರ ಸಮಾಜದ ಅಧ್ಯಕ್ಷ ಅಣ್ಣಪ್ಪ ಬಾಗಲಕೋಟಿ, ಶಿವಾಜಿ ಲೋಕಾಪುರ ಇದ್ದರು.

ಸಾಧು ಎಸ್. ಕಠಾರೆ ರಚಿಸಿದ, ಉಮಾ ಹುಲಿಕಂತಿಮಠ ನಿರ್ದೇಶನದಲ್ಲಿ ಶ್ರೀ ಶಿವಶರಣ ಹರಳಯ್ಯನವರ ಮಹಾತ್ಮೆ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ರವಿ ಉಪ್ಪಾರ, ಭರಮಗೌಡ ರಾ. ಪಾಟೀಲ, ಐ.ಎಸ್.ಹಿರೇಮಠ, ನಾಗಯ್ಯ ಎಂ. ಪುರಾಣಿಕಮಠ, ಕಾರ್ತಿಕ ಎಸ್. ಕುಲಕರ್ಣಿ, ಅರುಣ ರಾಮಾಪುರ, ಅರುಣ ಆರ್.ಶಿರಹಟ್ಟಿ, ಹರೀಶ ಧೂಳೆ, ಶಾಹಿದಾ ಕೆ.ಪಿ., ಗೊವಿಂದ ಬಿ.ದೊಡ್ಡಮನಿ, ಧನರಾಜ ಸಾತಪುತೆ, ನಾಟಕದಲ್ಲಿ ಪಾತ್ರ ನಿರ್ವಹಿಸಿದರು. ಈಶ್ವರಪ್ಪ ಬಡಿಗೇರ ಹಾರ್ಮೋನಿಯಂ ಸಾತ ನೀಡಿದರು. ಕೊಂಡಯ್ಯ ಮೈಸೂರ ಪ್ರಸಾಧನ ಕಾರ್ಯ ಮಾಡಿದರು.

loading...