ರಕ್ತದಾನ ಮಾಡಿ ಜೀವ ಉಳಿಸಿ : ಡಾ. ಮೀನಾ

0
24

ಗುಳೇದಗುಡ್ಡ: ರಕ್ತದಾನ ಮಹಾದಾನವಾಗಿದ್ದು, ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜನರಿಗೆ ಜೀವ ಕೊಡುತ್ತದೆ. ನಾವು ನೀಡಿದ ಕೆಲವೇ ದಿನಗಳಲ್ಲಿ ಮತ್ತೆÃ ನಮ್ಮ ದೇಹವು ಉತ್ಪಾದಿಸುತ್ತದೆ. ತುರ್ತು ಸಂದರ್ಭದಲ್ಲಿ ನಾವು ಮಾಡುವ ರಕ್ತದಾನ ರೋಗಿಯ ಜೀವ ಉಳಿಸುತ್ತದೆ ಎಂದು ಜಿಲ್ಲಾ ರಕ್ತಭಂಡಾರದ ವೈದ್ಯಾಧಿಕಾರಿ ಡಾ. ಮೀನಾ ಹೇಳಿದರು.
ಅವರು ಇಲ್ಲಿನ ಸ್ನೆÃಹಿತರ ಕೂಟದ ವತಿಯಿಂದ ನಗರದ ಸರಸ್ವತಿ ವಿದ್ಯಾಸಂಸ್ಥೆಯ ಪಾರ್ವತಿಬಾಯಿ ಸಭಾಭವನದಲ್ಲಿ ರವಿವಾರ ಜಿಲ್ಲಾಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೆÃರಿತ ರಕ್ತದಾನ ಶೀಬರ ಹಾಗೂ ಆರೋಗ್ಯ ಉಚಿತ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ನೆÃಹಿತರ ಕೂಟದ ಗೆಳೆಯರು ಸಮಾಜಿಕ ಕಾರ್ಯಮಾಡುತ್ತಿರುವುದ ಶ್ಲಾಘನೀಯ ಎಂದರು.
ಡಾ. ಅಮರೇಶ ಜೀಡಿ ಮಾತನಾಡಿ, ಗೆಳೆಯರೆಲ್ಲ ಒಟ್ಟಿಗೆ ಸೇರಿ ಸ್ನೆÃಹಿತರ ಕೂಟ ಸಂಘಟಿಸಿ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಸ್ವಯಂಪೇರಿತ ರಕ್ತದಾನ ಶಿಬಿರ ಹಮ್ಮಿಕೊಂಡು ಸಾಮಾಜಿಕ ಕಳಕಳಿ ಮೆರೆಯುತ್ತಿರುವುದು ಹೆಮ್ಮೆಯ ಸಂಗತಿ. ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನದಿಂದ ಇನ್ನಿತರ ವಿದ್ಯಾರ್ಥಿಗಳಿಗೂ ಸ್ಪೂರ್ತಿ ತುಂಬುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಮರಡಿಮಠದ ಶ್ರಿÃ ಅಭಿನವ ಕಾಡಸಿದ್ದೆÃಶ್ವರ ಸ್ವಾಮಿಗಳು ಮಾತನಾಡಿ, ಸಮಾಜದಿಂದ ನಾವು ಬೆಳೆಯುತ್ತೆÃವೆ. ಸಮಾಜದಿಂದ ನಾವು ಪಡೆದುದ್ದರಲ್ಲಿ ಒಂದಿಷ್ಟು ದಾನ ಮಾಡಿದಾಗ ನಾವು ಸಮಾಜದ ಋಣ ತೀರಿಸಿದಂತಾಗುತ್ತದೆ. ಇದರಿಂದ ಸಮಾಜವೂ ನಮ್ಮನ್ನು ಗೌರವಿಸುತ್ತದೆ. ಇಲ್ಲಿನ ಸ್ನೆÃಹಿತ ಕೂಟ ಇಂತಹ ಕಾರ್ಯ ಹಮ್ಮಿಕೊಂಡು ಸಮಾಜದ ಋಣ ತೀರಿಸುವ ಕೆಲಸ ಮಾಡುತ್ತಿದೆ. ಈ ಸಂಘಟನೆ ಇನ್ನಷ್ಟು ಬೆಳೆಯಲಿ ಎಂದರು.
ಡಾ. ಬಸವರಾಜ ಬಂಟನೂರ, ಡಾ. ವೀಣಾ ಜೀಡಿ, ಶಿವಕುಮಾರ ಕರನಂದಿ ಮಾತನಾಡಿದರು. ಸ್ನೆÃಹಿತರ ಕೂಟದ ಅಧ್ಯಕ್ಷ ಪರಶುರಾಮ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಆಯ್ಕೆಯಾದ ಪ್ರೊ. ವಿಠ್ಠಲ ಕಳಸಾ ಹಾಗೂ ಸಂಗಣ್ಣ ಪರ್ವತಿ ಅವರನ್ನು ಸನ್ಮಾನಿಸಲಾಯಿತು. ನಗರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಘದ ಗೌರವಾಧ್ಯಕ್ಷ ಸಂಪತಕುಮಾರ ರಾಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹನಮಂತ ನಾಯ್ಕರ, ರಾಜೇಶ ಜಿರ್ಲಿ, ಅಶೋಕ ಬಾದವಾಡಗಿ, ಸಂಗಣ್ಣ ಹುನಗುಂದ, ಪರಶುರಾಮ ಬಂತಲ, ಗಿರೀಶ ಸಿಂಗ್ರಿ, ಮನೋಹರ ಘಟ್ನೂರ, ಮಹಾಗುಂಡಪ್ಪ ಯಾನಮಶೆಟ್ಟಿ, ಶಿವಕುಮಾರ ಹರವಿ, ಈರಣ್ಣ ಪತ್ತಾರ, ಗೋಪಾಲ ಮಾಲಪಾಣಿ, ಶಿವಾನಂದ ಅಕ್ಕಿ, ಸುರೇಶ ಮೇಡಿ, ಸದಾಶಿವ ಅಳ್ಳೊಳ್ಳಿ ಮತ್ತಿತರರು ಇದ್ದರು.

loading...