ರಡ್ಡೇರ ಮನೆಗೆ ಎಸಿಬಿ ತಂಡ ಧೀಡಿರ್‌ ದಾಳಿ

0
22

ಕನ್ನಡಮ್ಮ ಸುದ್ದಿ-ರೋಣ: ತಾಲೂಕಿನ ಗ್ರಾಮೀಣ ನೀರು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜನೀಯರ ಎಸ್‌.ಎಚ್‌.ರಡ್ಡೇರ ಮನೆಗೆ ಎಸಿಬಿ ತಂಡ ಧೀಡಿರ್‌ ದಾಳಿಯನ್ನು ನಡೆಸಿದ ಘಟಣೆ ತಾಲೂಕಿನಲ್ಲಿ ನಡೆದಿದೆ.ಎಸಿಬಿ ಅಧಿಕಾರಿಗಳಾದ ಮಂಜುನಾಥ ಕುಸುಗಲ್‌, ಪ್ರಮೋದ್‌, ಆನಂದ ಒಣಕುದರಿ ಹಾಗೂ 12 ಸಿಬ್ಬಂದಿಯ ತಂಡವು ಅಧಿಕಾರಿಯ ಮನೆಗೆ ದಾಳಿಯನ್ನು ನಡೆಸಿದ್ದು, ಮನೆಯಲ್ಲಿರುವ ದಾಖಲಾತಿಯನ್ನು ಹಾಗೂ ಅಪಾರ ಪ್ರಮಾಣದ ಬಂಗಾರ, ಬೆಳ್ಳಿ ಮತ್ತು ಹಣವನ್ನು ವಶಪಡಿಸಿಕೊಂಡು ಪರೀಶೀಲನೆಯನ್ನು ನಡೆಸಿದರು.
ಘಟಣೆಯ ವಿವಿರ: ನಿನ್ನೆಯ ದಿನವಾದ ಬೆಳಗಿನ ಜಾವದಲ್ಲಿ ಅಧಿಕೃತ ಮಾಹಿತಿಯನ್ನು ಆಧರಿಸಿ ಅಧಿಕಾರಿಗಳು ಸುಮಾರು 7.30 ಘಂಟೆಗೆ ಅಧಿಕಾರಿಗಳ ತಂಡ ಎಸ್‌.ಎಚ್‌.ರಡ್ಡೇರ ಮನೆಯ ಮೇಲೆ ದಾಳಿಯನ್ನು ನಡೆಸಿ ಮಾಹಿತಿಯನ್ನು ಕಲೆಹಾಕಿದರು.
ಕಛೇರಿಗೂ ಮುತ್ತಿಗೆ: ಎಸಿಬಿ ಅಧಿಕಾರಿಗಳು ಮನೆಗೆ ದಾಳಿಯನ್ನು ನಡೆಸಿ, ಆಡಳಿತ ಕಛೇರಿಗೂ ಮುತ್ತಿಗೆ ಹಾಕಿ ದಾಖಲಾತಿಗಳನ್ನು ಪರೀಶೀಲಿಸಿ ಸಂಬಂಧಿಸಿದ ದಾಖಲಾತಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಪರಿಶೀಲನಾ ಕಾರ್ಯವನ್ನು ಮುಂದುವರೆಸಿದರು.

loading...