ರಮಜಾನ ಪುಣ್ಯಗಳ ಸುರಿಮಳೆಯ ತಿಂಗಳು

0
67

Bijapuradalli iftar sarva darmagala kuta1

ವಿಜಾಪುರ : 17 ನಗರದ ಫೆಡಿನಾ ಸಂಸ್ಥೆಯ ಸಭಾಭವನದಲ್ಲಿ ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಹಾಗೂ ಫೆಡಿನಾ ಸಂಸ್ಥೆ ಸಹಯೋಗದಲ್ಲಿ ಸರ್ವಧರ್ಮಿಯರಿಗೆ ಇಪ್ತಿಯಾರ ಕೂಟ ಏರ್ಪಡಿಸಲಾಗಿತ್ತು.
ವಿಶ್ರಾಂತ ಮುಖ್ಯ ಅಧ್ಯಾಪಕ ಅಬ್ದುಲಸುಕುರ ಇನಾಮದಾರ ಇಪ್ತಿಯಾರ ಕೂಟದ ಧಾರ್ಮಿಕ ಕ್ರಿಯೆಗಳನ್ನು ಕುರಿತು ಮಾತನಾಡಿದರು.
ವಿಶ್ರಾಂತ ಪ್ರಾಚಾರ್ಯ ಎಸ್.ಎಸ್. ಕನಮಡಿ ಮಾತನಾಡಿ ನಾವು ಚಿಕ್ಕವರಿರುವಾಗ ಜಾತಿ ಭೇದ ಮರೆತು ಎಲ್ಲರೂ ಸೇರಿ ಹಬ್ಬಗಳನ್ನು ಆಚರಿಸುತ್ತಿದ್ದೇವು. ಸುಖ-ದುಃಖಗಳನ್ನು ಹಂಚಿಕೊಂಡು ಬದುಕುತ್ತಿದ್ದೇವು ಇಂದು ಅಂತಹ ವಾತಾವರಣ ಕಲುಷಿತಗೊಂಡರು, ಒಳ್ಳೆಯ ಆತ್ಮಗಳು ಎಲ್ಲರೊಂದಿಗೆ ಬೆರೆತು ಪವಿತ್ರ ಉಪವಾಸವನ್ನು ಆಚರಿಸುತ್ತಿರುವುದು ನೆಮ್ಮದಿಯ ವಿಷಯ. ಇದು ಪಾಪ ಕರ್ಮಗಳನ್ನು ತೊರೆಯುವ ಸಮಯ, ಇದರಿಂದ ಮನುಷ್ಯನಲ್ಲಿ ಸಾತ್ವಿಕ ಗುಣಗಳು ಎಚ್ಚರಿಸುತ್ತಿವೆ. ದೇವ ಭಯ ಎಲ್ಲರಿಗೂ ಎಲ್ಲರಿಗೂ ಇರಬೇಕು. ಉಪವಾಸ ಬಡವರ ಮತ್ತು ನಿರ್ಗತಿಕರ ಬಗ್ಗೆಯು ಚಿಂತಿಸುವಂತೆ ಮಾಡಿದೆ. ಇದು ಪುಣ್ಯದ ಕಾರ್ಯ ಎಂದರು.
ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ರಾಜ್ಯಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ ರಮಜಾನ ಪುಣ್ಯಗಳ ಸುರಿಮಳೆಯ ತಿಂಗಳು, ಅಂತರಂಗ ಮತ್ತು ಬಹಿರಂಗ ಶುದ್ದಿಗೆ ಪ್ರೇರಣೆ ನೀಡುವ ತಿಂಗಳು ಈ ದಿನಗಳಲ್ಲಿ ಮುಸ್ಲಿಮರು ಹಗಲಿಡಿ ಉಪವಾಸ ಇರುತ್ತಾರೆ. ಜೊತೆಗೆ ದಾನ, ಆರಾಧನೆ ಮತ್ತು ಸನ್ನಡತೆಗಳ ಮೂಲಕ ತಮ್ಮನ್ನು ತಾವು ಆತ್ಮ ವಿಮರ್ಶೆ ಮಾಡಿಕೊಂಡು ಉದ್ದರಿಸಿಕೊಳ್ಳುತ್ತಾರೆ. ಮುಸ್ಲಿಮರಿಗೆ ರಮಜಾನ ತರಬೇತಿ ತಿಂಗಳು. ಬಡವರ-ಶ್ರೀಮಂತರ ನಡುವಿನಲ್ಲಿರುವ ಬೇಧವನ್ನು ತೆಗೆದುಹಾಕುತ್ತದೆ. ನಮ್ಮಲ್ಲಿನ ಎಲ್ಲ ಕೆಡುಕು ಮತ್ತು ಅನಾಚಾರಗಳನ್ನು ತೊರೆಯಬೇಕಾದ ಈ ತಿಂಗಳು ಇಸ್ಲಾಮರಿಗೆ ಮೋಕ್ಷ ಪಡೆಯುವ ಸಮಯ ಎಂದರು.
ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಜಿಲ್ಲಾಧ್ಯಕ್ಷ ವಿಜಯಕುಮಾರ ಘಾಟಗೆ ಮಾತನಾಡಿ ಮುಸ್ಲಿಮರು ರಮಜಾನ ತಿಂಗಳಲ್ಲಿ ದಾನ, ಧರ್ಮ ಪುಣ್ಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಆನಂದದ ವಿಷಯ. ಮುಸ್ಲಿಮರಲ್ಲದೆ ಅನೇಕ ಹಿಂದುಗಳು ಸಹ ಉಪವಾಸ ವೃತವನ್ನು ಮಾಡುತ್ತಾರೆ. ಇದು ದೇವರ ಮೇಲಿನ ದೃಢ ವಿಶ್ವಾಸ. ಮುಸಲ್ಮಾನರು ಎಲ್ಲ ಧರ್ಮಿಯರಿಗೆ ಈ ಸಮಯದಲ್ಲಿ ದಾನ ಮಾಡುವುದು ಅರ್ಥಪೂರ್ಣ ಕಾಯಕ ಎಂದರು.
ಪ್ರಾಸ್ತಾವಿಕವಾಗಿ ಫೆಡಿನಾ ಸಂಸ್ಥೆಯ ಸಂಯೋಜಕ ಪ್ರಭುಗೌಡ ಪಾಟೀಲ ಮಾತನಾಡಿ ಸಜ್ಜಿನಿಕೆ, ಬದ್ದತೆ, ತಾಳ್ಮೆಯ ಪಾಠವನ್ನು ರಮಜಾನ ತಿಂಗಳು ನಮಗೆ ಕಲಿಸುತ್ತದೆ. ದಾನ -ಧರ್ಮ ಆಚಾರ-ವಿಚಾರ ನಿಯಮಿತ ಕುಟುಂಬ ರಕ್ಷಣೆಯಂತಹ ಕರ್ತವ್ಯಗಳಿಗೆ ಅವಕಾಶ ಮಾಡಿಕೊಟ್ಟ ತಿಂಗಳ ರಮಜಾನ ಎಂದರು.
ದಿಲಾವರ ಖಾಜಿ, ಜಾವೀದ ಜಮಾದಾರ, ಚಂದ್ರಕಾಂತ ಹಿರೇಮಠ, ಡಿ.ಎಸ್. ಮುಲ್ಲಾ, ಗುರುಸಿಂಗ ತೋನಶ್ಯಾಳ ಮಾತನಾಡಿದರು.
ಗೌಸ ಮುಜಾವರ, ಡಾ. ಮಂಜುರಅಹ್ಮದ ಇನಾಮದಾರ, ರಾಜು ಹಿಪ್ಪರಗಿ, ಅಲಿಸಾಬ ಕಡಕೆ, ಸಲಿಮ ಉಸ್ತಾದ, ರಂಗರಾವ ಕುಲಕರ್ಣಿ, ಜಹಾಂಗೀರ ಮಿರ್ಜಿ, ಬಂದೇನವಾಜ ವಾಲಿಕಾರ, ಜಹಾಂಗೀರ ಮಮದಾಪೂರ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here