ರಮೇಶ ಜಾರಕಿಹೊಳಿ ಮುಸ್ಲಿಂ ಟೋಪಿ ಹಾಕಿದ್ದು ನೋಡಿದ್ದೇನೆ ಆದರೆ ಕರಿ ಟೋಪಿ ಹಾಕಿದ್ದು ನೋಡಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಜಾರಕಿಹೊಳಿ

0
64

ಬೆಳಗಾವಿ

ರಮೇಶ ಜಾರಕಿಹೊಳಿ ಮುಸ್ಲಿಂ ಟೋಪಿ ಹಾಕಿದ್ದು ನೋಡಿದ್ದೇವೆ ಆದರೆ ಕರಿ ಟೋಪಿ ಹಾಕಿದ್ದು ನೋಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಶುಕ್ರವಾರ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ರಮೇಶ ಜಾರಕಿಹೊಳಿ ಮುಸ್ಲಿಂ ಪರವಾಗಿ ಹೋರಾಟ ಮಾಡಿದ್ದರು. ಮುಂದೆಯೂ ಇರುತ್ತಾರೆ ಎನ್ನುವ ವಿಶ್ವಾಸ ಇದೆ.ರಮೇಶ ಜಾರಕಿಹೊಳಿ ಅಧಿಕಾರ ಎಂಜಾಯ್ ಮಾಡಲಿ ಆದರೆ ಹಿಂದಿನ ಹೋರಾಟ ಮುಂದುವರೆಸಬೇಕು ಎಂದು ಸಲಹೆ‌ ನೀಡಿದರು.

ನಮ್ಮ ತಂದೆ ಪತ್ರ ಚಳವಳಿಯಲ್ಲಿ ಹೋರಾಟ ಮಾಡಿದ್ದರು. ಆದರೆ ಸಂಘ ಪರಿವಾರದಲ್ಲಿ ಇರಲಿಲ್ಲ. ಆದರೆ ಸಂಘದ ಸಲುವಾಗಿ ಮೂರು ವರ್ಷ ಜೈಲು ವಾಸ ಮಾಡಿದ್ದಾರೆ ಎನ್ನುವುದು ಶುದ್ದ ಸುಳ್ಳು ಎಂದರು.

ನಮ್ಮ ಬಳಿ ಯಾವ ಸೀಡಿ ಇಲ್ಲ ಯಾವುದು ಇಲ್ಲ. ಸೀಡಿ ಇದ್ದವರು ಮಂತ್ರಿಯಾಗಿದ್ದಾರೆ ಎಂದು ಶಾಸಕ ಯತ್ನಾಳ ಆರೋಪ ಮಾಡಿದ್ದಾರೆ ಅದನ್ನು ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದರು.

ಕಾನೂನು ಉಲ್ಲಂಘನೆ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರ ನಂಬರ್ ಒನ್.ಕೊರೋನಾ ವೈರಸ್ ಭೀತಿಯ ನಡುವೆ ಸಾರ್ವಜನಿಕರು ಗುಂಪು ಗುಂಪಾಗಿ ಸೇರಬೇಡಿ ಎಂದು ಮದುವೆ, ಜಾತ್ರೆಗೆ ನಿರ್ಬಂಧ ಹಾಕುತ್ತಾರೆ. ಆದರೆ ನಾಲ್ಕು ಲಕ್ಷ ಜನ ಸೇರಿಸಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರು ಮಾಡಿದ ಕಾನೂನು ಅವರೇ ಮುರಿಯುತ್ತಾರೆ. ಇಲ್ಲದಿದ್ದರೆ ಆ ಕಾನೂನು‌ ತೆಗೆದರೆ ಉತ್ತಮ ಎಂದರು.

ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಸುನೀಲ್ ಹನುಮಣ್ಣವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

loading...