ರಸಗೊಬ್ಬರ ಮಾರಾಟಗಾರ ಗಮನಕ್ಕಾಗಿ

0
33

ಅಥಣಿ,23- ತಾಲೂಕಿನ ಎಲ್ಲಾ ಖಾಸಗಿ ಮತ್ತು ಸಹಕಾರ ರಸಗೊಬ್ಬರ ಮಾರಾಟಗಾರರು ಕೃಷಿ ಇಲಾಖೆ ನೀಡಿರುವ ರಸಗೊಬ್ಬರ ಮಾರಾಟ ಪರವಾನಗಿ ವಿವರ ನೀತಿ ಸಂಬಂಧಪಟ್ಟ ಜಿಲ್ಲಾ ರಸಗೊಬ್ಬರ ತಯಾರಕರ ನೋಡಲೇ ಕಂಪನಿಯದ ಜುವಾರಿ ಇಂಡಸ್ಟ್ತ್ರೀಜ್ ಲಿಮಿಟೆಡ್ ಅಧಿಕಾರಿಗಳನ್ನು ಸಂಪರ್ಕಿಸಿ ಈ ಕೂಡಲೇ ಮೊಬೈಲ್ ಫರ್ಟಿಲೈಜರ ಮಾನಿಟರಿಂಗ ಸಿಸ್ಟಮ್ (ಎಮ್. ಎಪ್.ಎಮ್.ಎಸ್.) ರಡಿಯಲ್ಲಿ ತಕ್ಷಣವೇ ನೊಂದಾಯಿಸಿ ಕೊಳ್ಳ ಬೇಕೆಂದು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ನೊಂದಣಿ ಮಾಡಿಸದೇ ಇರುವ ರಸಗೊಬ್ಬರ ಮಾರಾಟಗಾರರಿಗೆ ರಸಗೊಬ್ಬರ ತಯಾರಕರಿಂದ ಜನೇವರಿ 1 2012 ರಿಂದ ರಸಗೊಬ್ಬರ ಪೂರೈಕೆ ಮಾಡಲು ಅವಕಾಶವಿರುವುದಿಲ್ಲ ನೊಂದಣಿ ಮಾಡಿಸಿಕೊಳ್ಳದೇ ಇದ್ದಲ್ಲಿ ಇನ್ನು ಮುಂದೆ ಈಗಾಗಲೇ ರಸಗೊಬ್ಬರ ಮಾರಾಟ ಪರವಾನಿಗೆಯನ್ನು ನವೀಕರಿಸುವುದಿಲ್ಲ.ಕೆಂದ್ರ ಸರ್ಕಾರವು ರಸಗೊಬ್ಬರ ಪೂರೈಕೆಯ ಸಮರ್ಪಕ ಉಸ್ತುವಾರಿಗಾಗಿ ಮೊಬೈಲ್ ಫರ್ಟಿ ಲೈಜರ್ ಮಾನಿಟರಿಂಗ ಸಿಸ್ಟಮ್. (ಎಮ್. ಎಫ್.ಎಮ್.ಎಸ್.) ಯೋಜನೆಯನ್ನು ಅನುಷ್ಠಾನ ಗೊಳಿಸಲು ತಿರ್ಮಾನಿಸಿದೆ.

ಪ್ರಥಮ ಹಂತದಲ್ಲೆ ಈ ಯೋಜನೆಯು 2012ರ ಜನೇವರಿ 1 ರಿಂದ ಜಾರಿಗೊಳಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ. ಅದರನ್ವಯ ಖಾಸಗಿ ಮತ್ತು ಸಹಕಾರ ಸಂಸ್ಥೆ ಗಳನ್ನೊಳ ಗೊಂಡಂತೆ ಎಲ್ಲಾ ನಗದು ಹಾಗೂ ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ (ಎಮ್.ಎಪ್.ಎಮ್. ಎಸ್.) ರಡಿ ನೊಂದಣಿ ಮಾಡಿಸಿಕೊಳ್ಳ ಬೇಕಾಗಿರು ತ್ತದೆ ಈ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲಾ ತಾಲೂಕಿನಲ್ಲಿ  ಸಂಬಂಧಪಟ್ಟ ರಸಗೊಬ್ಬರ ತಯಾರಕರು ತರಬೇತಿ ನಡೆಸಿ ಯೋಜನೆಯ ಬಗ್ಗೆ ವಿವರ ನೀಡಿರುತ್ತಾರೆ. ಈಗ ನೊಂದಣಿಯು ಪ್ರಗತಿಯಲ್ಲಿರುತ್ತೆಂದು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಡಾ. ಸಲೀಂ ಇ ಸಂಗತ್ರಾಸೆ ಇವರು ತಿಳಿಸಿರುತ್ತಾರೆ.

 

loading...

LEAVE A REPLY

Please enter your comment!
Please enter your name here