ರಸ್ತೆ ಅಪಘಾತದಲ್ಲಿ ಈಜು ಪಟು ಸಾವು

0
4

ಚೆನ್ನೈ:- ಢಾಕಾ ಏಷ್ಯನ್ ಕ್ರೀಡಾಕೂಟದಲ್ಲಿ ಬಂಗಾರ ಸೇರಿದಂತೆ, ರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಲ್ಲಿ ಸಾಧನೆ ಮಾಡಿರುವ ಅನುಭವಿ ಈಜು ಪಟು ಎಂ.ಬಿ.ಬಾಲಕೃಷ್ಣನ್ ಅವರು ಮಂಗಳವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.29 ವರ್ಷದ ಬ್ಯಾಕ್ ಸ್ಟ್ರೋಕ್ ನುರಿತ ಈಜು ಪಟು, ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅರುಂಬಕ್ಕಂ ನಲ್ಲಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ.
ಬುಲೆಟ್ ಚಲಾಯಿಸುತ್ತಿದ್ದ ಬಾಲಕೃಷ್ಣನ್ ಅವರು ಅರುಂಬಕ್ಕಂನಲ್ಲಿನ ಜಯಲಕ್ಷ್ಮೀ ಎಂಬಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಬೈಕ್ ನಲ್ಲಿ ಬರುತ್ತಿದ್ದ ಬಾಲಕೃಷ್ಣನ್ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸದಲ್ಲಿ ದ್ವಿಚಕ್ರ ವಾಹನದ ನಿಯಂತ್ರಣ ತಪ್ಪಿ ನೇರವಾಗಿ ಲಾರಿ ಚಕ್ರಕ್ಕೆ ಸಿಕ್ಕಿ ಮೃತ ಪಟ್ಟಿದ್ದಾರೆ. ಮೃತ ದೇಹವನ್ನು ಕಿಲ್ಪಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕೃಷ್ಣನ್ ಅವರು ಗಿಂಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಅಮೆರಿಕದಲ್ಲಿ ಎಂ.ಎಸ್ ಪೂರ್ಣಗೊಳಿಸಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದರು. ರಜಾ ಸಮಯದಲ್ಲಿ ಸ್ವಗ್ರಾಮಕ್ಕೆ ಬಂದ ಅವರು ಪಾಲಕರೊಂದಿಗೆ ಸಮಯ ಕಳೆಯುತ್ತಿದ್ದರು.

loading...