ರಸ್ತೆ ನಿಯಮ ಉಲಂಘನೆ: ಸಂಚಾರಕ್ಕೆ ಅಡ್ಡಿ

0
13

ಕನ್ನಡಮ್ಮ ಸುದ್ದಿ-ಅಂಕೋಲಾ: ದಿನ ಬಿಟ್ಟು ದಿನದಂತೆ ಎರಡುಕಡೆಗಳಲ್ಲಿ ಪಾರ್ಕಿಂಗ್‌ ಮಾಡಲು ವ್ಯವಸ್ಥೆ ಇದ್ದರೂ ಕೂಡ ಎರಡು ಕಡೆಗಳಲ್ಲಿ ಪಾರ್ಕಿಂಗ್‌ ಮಾಡುವುದರಿಂದ ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಅಂಕೋಲಾ ಪಟ್ಟಣವೂ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಈ ಕಾರಣದಿಂದ ಈ ಹಿಂದೆ ಸಿಪಿಐ ಕುಮಾರ ಕೊಳ್ಳುರು ಇದ್ದಾಗ ದಿನ ಬಿಟ್ಟು ದಿನದಂತೆ ಎರಡುಕಡೆ ಪಾರ್ಕಿಂಗ್‌ ಮಾಡಲು ಅವಕಾಶವನ್ನು ಮಾಡಿಕೊಟ್ಟಿದ್ದರು.
ಆದರು ಕೂಡ ಇಲ್ಲಿಯ ನರಸಿಂಹ ಸ್ಟೋರ್ಸ್‌ ಬಳಿ ಎರಡು ಬದಿಗಳಲ್ಲಿ ವಹನಗಳನ್ನು ಪಾರ್ಕಿಂಗ್‌ ಮಾಡುತ್ತಾರೆ. ಇನ್ನು ಈ ರಸ್ತಯು ಏಕಮುಖ ಸಂಚಾರಕ್ಕಾಗಿದ್ದು ಅದನ್ನು ಕೂಡ ಉಲ್ಲಂಘಿಸಿ ವಾಹನ ಚಲಾವಣೆ ಮಾಡುತ್ತಿರುವುದು ಕಂಡುಬಂದಿದ್ದೆ. ಇನ್ನು ಗುಡಿಗಾರ ಗಲ್ಲಿಯ ಕ್ರಾಸ್‌ ಬಳಿ ನಿತ್ಯವು ಆಟೋ ರಿಕ್ಷಗಳು ನಿಲ್ಲುತ್ತಿದ್ದು ಅದನ್ನು ಪೊಲೀಸರು ನೋಡಿಯು ನೋಡದಂತಿರುವುದು ವಿಯರ್ಪಾಸವೇ ಸರಿ ಈ ಬಗ್ಗೆ ಅದೇಷ್ಟುಬಾರಿ ಪೋಲಿಸರಿಗೆ ಹಾಗೂ ಸಂಬಂಧಪಟ್ಟವರಿಗೆ ತಿಳಿಸಿದರು ಯಾವುದೆ ಪ್ರಯೋಜನವಾಗಿಲ್ಲವಂತೆ. ಸುಗಮ ಸಂಚರಕ್ಕಾಗಿ ಈ ಹಿಂದೆ ಮಾಡಿದ ನಿಯಮಗಳನ್ನು ಗಾಳಿಗೆ ತೋರಿದವರಿಗೆ ದಂಡವಿಧಿಸಬೇಕಾದ ಪೊಲೀಸರು ನಿದ್ದೆಗೆ ಜಾರಿರುವುದು ವಿಪಚಿiÀiರ್ಾಸವೆ ಸರಿ. ಒಟ್ಟಿನಲ್ಲಿ ಜನದಟ್ಟೆಯಿಂದ ಕೂಡಿರು ಈ ರಸ್ತೆಯಲ್ಲಿ ಸುಗಮ ಸಂಚಾರದ ಬಗ್ಗೆ ಲಕ್ಷವಹಿಸಬೇಕಾದ ಪೊಲೀಸರೆ ನಿದ್ದೆ ಜಾರಿದರೆ ಟ್ರಾಫಿಕ್‌ ಸಮಸ್ಯೆಗೆ ಬ್ರೆಕ್‌ ಬೀಳುವುದಾದರು ಹೇಗೆ ಈಗಲಾದರು ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.

loading...