ರಸ್ತೆ ಸುರಕ್ಷಾ ನಿಯಮ ಪಾಲಿಸಿ ಅಪಘಾತ ತಡೆಯಿರಿ: ಸಿಪಿಐ ಶೇಖರಪ್ಪ

0
57

ಅಥಣಿ: ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿಯ ಸವಾರರು ಕಡ್ಡಾಯವಾಗಿ ಐಎಸ್‌ಐ ಗುಣಮಟ್ಟದ ಹೆಲ್ಮೇಟ ಧರಿಸಿ ಸವಾರಿ ಮಾಡಬೇಕು. ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸುವ ಮೂಲಕ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದು ಅಥಣಿ ಸಿಪಿಐ ಎಚ್‌ ಶೇಖರಪ್ಪ ಹೇಳಿದರು.
ಅವರು ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ ಅಂಗವಾಗಿ ಪಟ್ಟಣದ ವಿವಿಧ ವೃತ್ತಗಳ ಹೆಲ್ಮೇಟ ಜಾಗ್ರತೆಗೆ ನಾಮಫಲಕ ಅಳವಡಿಸಿದ ನಂಥರ ಅಂಬೇಡ್ಕರ ವೃತ್ತದಲ್ಲಿ ಬೈಕ ಸವಾರರಿಗೆ ತಿಳುವಳಿಕೆ ನೀಡುತ್ತಾ ಮಾತನಾಡಿದರು. ಪೋಲಿಸರ ಮತ್ತು ಕಾನೂನಿನ ಭಯಕ್ಕೆ ಮಾತ್ರ ಹಲ್ಮೆಟ ಧರಿಸದೇ ನಿಮ್ಮ ಅತ್ಯಮೂಲ್ಯ ಜೀವ ರಕ್ಷಣೆಗಾಗಿ ಧರಿಸಬೇಕು. ಹೋದ ಜೀವ ಮತ್ತೇ ಬಾರದು, ಹೆಲ್ಮೇಟ ಧರಿಸದೇ ನಿತ್ಯ ಬೈಕ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ಅಪಘಾತಗಳಲ್ಲಿ ಶೇ.99 ಸಾವುಗಳು ತಲೆಗೆ ಪೆಟ್ಟುಬಿದ್ದು ಸಾವು ಸಂಭವಿಸುತ್ತಿವೆ. ಆದ್ದರಿಂದ ಬೈಕ ಸವಾರರು ರಸ್ತೆ ಸುರಕ್ಷಾ ನಿಯಮಗಳ ಜೊತೆಗೆ ಕಡ್ಡಾಯವಾಗಿ ಹೆಲ್ಮೆಟವನ್ನು ಧರಿಸಬೇಕು. ಮುಂದಿನ ದಿನಗಳಲ್ಲಿ ಹೆಲ್ಮೆಟ ಧರಿಸದೇ ಬೈಕ ಸವಾರಿ ಮಾಡಿದರೆ ಧಂಡ ವಿಧಿಸಿ ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುವದು ಎಂದು ಹೇಳಿದರು.
ಪಿಎಸ್‌ಐ ಸುರೇಶ ಬಂಡೇಗುಂಬಳ ಮಾತನಾಡಿ ಬೈಕ ಸವಾರರು ಮೂರು ಜನರನ್ನು ಕೂಡಿಸಿಕೊಂಡು ಸವಾರಿ ಮಾಡುವದು, ಮೋಬೈಲಗಳಲ್ಲಿ ಮಾತನಾಡುತ್ತಾ ಸವಾರಿ ಮಾಡುವದು, ಚಿಕ್ಕ ಮಕ್ಕಳ ಕೈಗೆ ಬೈಕ ಅಥವಾ ಸ್ಕೂಟಿ ಕೊಟ್ಟರೇ ಕಾನೂನು ರೀತಿ ಕ್ರಮ ಜರುಗಿಸಲಾಗುವದು. ಬೈಕ ಹೊಂದಿರುವ ಪ್ರತಿಯೊಬ್ಬ ನಾಗರಿಕರು ಚಾಲನಾ ಪತ್ರ, ವಾಹನ ನೋಂದಣಿ ಪತ್ರ ಹೊಂದಿರಬೇಕು. ರಸ್ತೆ ಸುರಕ್ಷಾ ನಿಯಮಗಳನ್ನು ತಿಳಿದುಕೊಂಡು ವಾಹನ ಓಡಿಸಬೇಕು ಎಂದು ಹೇಳಿದರು. ಎಎಸ್‌ಐಗಳು ಮತ್ತು ಪೊಲೀಸ ಸಿಬ್ಬಂದಿ ಹೆಲ್ಮೇಟ ಧರಿಸಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಬೈಕ ಜಾಥಾ ಮಾಡುವ ಮೂಲಕ ಜನರಲ್ಲಿ ಜಾಗ್ರತೆ ಮೂಡಿಸುವ ಪ್ರಯತ್ನ ಮಾಡಿದರು.

loading...