ರಸ್ತೆ ಹಾಗೂ ಒಳಚರಂಡಿ ಅವ್ಯವಸ್ತೆಯನ್ನು ಸರಿಪಡಿಸಲು ಆಗ್ರಹ

0
40

ಧಾರವಾಡ : ನಗರದ ಲೈನ್‍ಬಜಾರ ರಸ್ತೆಯ ಭೂಸಪ್ಪ ಚೌಕ ಹತ್ತಿರದ ರಸ್ತೆಯು ತುಂಬಾ ದುರಸ್ಥಿಯಾಗಿದ್ದು ಒಳಚರಂಡಿ ಪೈಪಲೈನ್‍ಗಳು ಒಡೆದಿವೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು.
ತಿಂಗಳಲ್ಲಿ ಕನಿಷ್ಠ 3 ಭಾರಿಯಾದರು ಒಳಚರಂಡಿ ನೀರು ರಸ್ತೆ ಮೇಲೆ ಹರಿದು ರಸ್ತೆ ಪೂರ್ತಿ ಹಾಳಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರು ಮಹಾನಗರ ಪಾಲಿಕೆಯ ಸದಸ್ಯರಿಗೆ ಹಲವು ಭಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಶಾಶ್ವತವಾದ ಪರಿಹಾರ ತೆಗೆದುಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು ಈ ಕೂಡಲೇ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂಬರುವ ದಿನದಲ್ಲಿ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿತು.
ಯಾಸಿನ್, ಕೆ.ಕೆ. ಕೈಲಾಶ ಅಗ್ನಿಹೋತ್ರಿ, ರಾಘವೇಂದ್ರ ಸೋನೆ, ಅರ್ಕಾಮ್ ಬೇಪಾರಿ, ಜೀನೇದ ಬೇಪಾರಿ, ತೌಶಿಪ್ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here