ರಹಿತ ರೈಲ್ವೆ ಪ್ರಯಾಣದ ಪ್ರತಿಭಟನೆಗೆ ಹಸಿರು ನಿಶಾನೆ

0
71

ಕನ್ನಡಮ್ಮ ಸುದ್ದಿ-ಮುಂಡರಗಿ : ಕಳೆದ 12 ವರ್ಷಗಳಿಂದ ಈ ಭಾಗದ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆಯಾಗುವದರಿಂದ ಶೈಕ್ಷಣಿಕ, ಕೃಷಿ, ಕೈಗಾರಿಕಾ, ಹಾಗೂ ಸರ್ವ ರಂಗಗಳು ಅಭಿವೃಧ್ಧಿಯಾಗುತ್ತದೆ ಆದ್ದರಿಂದ ಕೇಂದ್ರ ಸರಕಾರ ಈ ಹಿಂದುಳಿದ ತಾಲೂಕಾಗಳಿಗೆ, ಜಿಲ್ಲೆಗಳಿಗೆ ರೈಲ್ವೆ ಮಾರ್ಗಗಳ ರಚನೆಗೆ ಹಣ ಬಿಡುಗಡೆ ಮಾಡಬೇಕು ಎಂದು ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಹಾಗೂ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಮುಂಡರಗಿಯಿಂದ ಕಾಶಿ ವಿಶ್ವನಾಥÀನಿಗೆ ರುಧ್ರಾಭಿಷೇಕ ಯಾತ್ರೆ ಟಿಕೆಟ್ ರಹಿತ ರೈಲ್ವೆ ಪ್ರಯಾಣದ ಪ್ರತಿಭಟನೆಗೆ ಹಸಿರು ನಿಶಾನೆ ಶಾಲು ತೋರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.ಹೋರಾಟಗಳು ಯಶಸ್ವಿಯಾಗಲು ಆಶಾವಾದಿಗಳಾಬೇಕು, ಜೊತೆಗೆ ರೈಲ್ವೇ ಮಾರ್ಗಕ್ಕಾಗಿ ಈ ಭಾಗದ ಸಂಸದರು,ರೈಲ್ವೆ ಮಂತ್ರಿಗಳಿಗೆ ತಾವು ಕೂಡಾ ಮನವಿ ನೀಡಲಾಗುವದು ಎಂದು ಹೇಳಿದರು.
ಬಸವರಾಜ ನವಲಗುಂದ ಮಾತನಾಡಿ ಕೇಂದ್ರ ಸರಕಾರವು 2017ರ ಮುಂಗಡ ಪತ್ರದಲ್ಲಿ ಗದಗ-ಹರಪನಹಳ್ಳಿ ರೈಲ್ವೆ ಆರ್ಗ ರಚನೆ ಮಾಡಲು ಯಾವುದೇ ರೀತಿ ಹಣ ಕಾಯ್ದಿರಿಸಿರುವದಿಲ್ಲ. ಬಾಗಲಕೋಟ ಜಿಲ್ಲಾ, ಗದಗ ಜಿಲ್ಲಾ, ಕೊಪ್ಪಳ ಜಿಲ್ಲಾ, ಬಳ್ಳಾರಿ ಜಿಲ್ಲಾ, ಸೊಲ್ಲಾಪುರದಿಂದ ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿಗೆ ದಿನನಿತ್ಯ ಓಡಾಡುವ ಜನತೆಗೆ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆಯಾದರೇ ಜನತೆಗೆ ಹಣ, ಸಮಯ ಉಳಿತಾಯವಾಗುತ್ತದೆ. ಹಿಂದುಳಿದ ಈ ಜಿಲ್ಲೆಗಳಲ್ಲಿಯ ಕೃಷಿ ಬೆಳೆಗಳು ಪೇಟೆಗೆ ರವಾನೆಯಾಗುವದರಿಂದ ರೈತನ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ ಶಿಕ್ಷಣ ಅಭಿವೃಧ್ಧಿಯಾಗುತ್ತದೆ ಇದರ ಜೊತೆಗೆ ಈ ಭಾಗದ ಐತಿಹಾಸಿಕ ಸ್ಥಳಗಳು ಪ್ರವಾಸೋದ್ಯಮವಾಗಿ ಮಾರ್ಪಡುತ್ತವೆ ಸಣ್ಣ ಕೈಗಾರಿಕೆ, ಭಾರಿ ಕೈಗಾರಿಕೆಗೆ ರೈಲ್ವೆ ಸಾರಿಗೆಯಿಂದ ಕಚ್ಚಾ ವಸ್ತು ಪೂರೈಕೆಯಾಗುವದರಿಂದ ಉತ್ಪಾದನೆಯಾದ ವಸ್ತುಗಳು ಸ್ಥಳಾಂತರವಾಗಳು ರೈಲ್ವೆ ಅವಶ್ಯಕತೆ ಇದೆ ಎಂದರು.
ಕೇಂದ್ರದ ರೈಲ್ವೆ ಬೋರ್ಡ್‍ನವರು ಗದಗ-ಹರಪನಹಳ್ಳಿ ರೈಲ್ವೆ ಮಾರ್ಗದ ಯೋಜನಾ ವರದಿಯನ್ನು ಕೇಂದ್ರದ ಮುಂಗಡ ಪತ್ರಕ್ಕೆ ಸಲ್ಲಿಸದೇ ಇರುವದರಿಂದ ಕೇಂದ್ರದ 2017ರ ಮುಂಗಡ ಪತ್ರದಲ್ಲಿ ಈ ಯೋಜನೆಗೆ ಹಣ ಮಂಜೂರಾಗಿರುವದಿಲ್ಲಾ. ಮಾರ್ಚ್ 15 2017 ಕರ್ನಾಟಕ ರಾಜ್ಯ ಸರಕಾರದ ಮುಂಗಡ ಪತ್ರ ಜಾರಿಗೆ ಬರುವದಿದ್ದು ಅದರಲ್ಲಿ ರಾಜ್ಯ ಸರಕಾರದ ಜವಾಬ್ದಾರಿ ಹಣವನ್ನು ಜಮೀನನ್ನು ಕಾಯ್ದಿರಿಸಿ ಪುನಃ ಮೂಲಭೂತ ಸೌಕರ್ಯ ಇಲಾಖೆ ಬೆಂಗಳೂರುರವರಿಂದ ಪತ್ರವನ್ನು ಸೌತ್ ವೆಸ್ಟರ್ನ ರೈಲ್ವೆ ಬೋರ್ಡ್ ಹುಬಳ್ಳಿಯವರಿಗೆ ಪತ್ರವನ್ನು ಬರೆಸಬೇಕೆಂದು ಮತು ಕೇಂದ್ರ ಸರಕಾರ ಈ ಯೋಜನೆಗೆ ಹಣ ಮಂಜೂರು ಮಾಡಬೇಕೆಂದು ಆಗ್ರಹಿಸಿ ದಿ:23/02/2017 ರಂದು ಮುಂಡರಗಿಯಿಂದ ಕಾಶಿ ವಿಶ್ವನಾಥÀನಿಗೆ ರುಧ್ರಾಭಿಷೇಕ ಯಾತ್ರೆ ಟಿಕೆಟ್ ರಹಿತ ರೈಲ್ವೆ ಪ್ರಯಾಣದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಈ ಪ್ರತಿಭಟನೆಯಲ್ಲಿ 300ಕ್ಕಿಂತಲೂ ಹೆಚ್ಚು ಜನಸಂಖ್ಯೆ ರುಧ್ರಾಭಿಷೇಕದ ಸದಸ್ಯರು ಪಾಲ್ಗೊಳಲಿದ್ದು ಸುರಕ್ಷಿತವಾಗಿ ಹೋಗಿ ಬರಲು ರಾಜ್ಯ ಸರಕಾರವು ಕಾಳಜಿ ವಹಿಸಬೇಕೆಂದರು.

loading...