ರಾಜಕಾರಣಿ ಆದರ್ಶಪ್ರಾಯ ನಾಯಕನಾಗಿರಬೇಕು

0
43

ಸವದತ್ತಿ 16- ತಾಲೂಕಿನ ಜೆ.ಡಿ.ಎಸ್. ಕಛೇರಿಯಲ್ಲಿ ದಿ.ಚಂದ್ರಶೇಖರ ಮಾಮನಿ ಮಾಜಿ ವಿಧಾನಸಭೆಯ ಉಪಸಭಾಪತಿಯ 14ನೇ ಪುಣ್ಯತಿಥಿ ಅಂಗವಾಗಿ ಶ್ರದ್ದಾಂಜಲಿ ಸಭೆ ಏರ್ಪಡಿಸಿ ದಿವಗಂತರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಜೆ.ಡಿ.ಎಸ್. ಉಪಾಧ್ಯಕ್ಷ ಈರಣ್ಣಾ ಪಟ್ಟಣಶೆಟ್ಟಿ ಮಾತನಾಡಿ ನಮ್ಮ ಹಿರಿಯರ ರಾಜಕಾರಣಿ ಮಾರ್ಗದರ್ಶನದಂತೆ ಅವರ ರಾಜಕೀಯ ಚರಿತ್ರೆ ಆದರ್ಶಪ್ರಾಯವಾಗಿದ್ದು ಅದನ್ನೇ ನಾವೂ ಹಿರಿಯರ ಆರ್ಶಿವಾದವೆಂದು ತಿಳಿದು ಮುಂದಿನ ದಿನಗಳಲ್ಲಿ ಜೆ.ಡಿ.ಎಸ್.ನಿಂದ ಸವದತ್ತಿಗೆ ಒಬ್ಬ ಆದರ್ಶ ವ್ಯಕ್ತಿಯನ್ನು ಶಾಸಕನಾಗಿ ಕೊಡುವೆವು.

ಮತದಾರ ಬಂಧುಗಳು ಈ ಸಲ ಜೆ.ಡಿ.ಎಸ್.ಗೆ ಬೆಂಬಲ ಕೊಡಲಿದ್ದಾರೆ. ಈಗ ಇದ್ದ ಸರಕಾರದ ಕಾರ್ಯವೈಖರ್ಯದಿಂದ ಜನ ಬೇಸತ್ತು ಹೋಗಿದ್ದಾರೆ. ಕುಮಾರಸ್ವಾಮಿರವರ 20 ತಿಂಗಳ ಆಡಳಿತ ಅವಧಿಯ ಸಾಧನೆ ಯಾರೂ ಮರೆತಿಲ್ಲ. ಜೆ.ಡಿ.ಎಸ್. ರಾಜಕೀಯ ದಿವಂಗತ ಚಂದ್ರಶೇಖರ ಮಾಮನಿಯವರಂತ ರಾಜಕೀಯ ದುರೀಣ ಕಂಡ ಈ ಕ್ಷೇತ್ರ ಮತ್ತೊಮ್ಮೆ ಜೆ.ಡಿ.ಎಸ್. ಅತ್ಯುತ್ತಮ ರಾಜಕೀಯ ವ್ಯವಸ್ಥೆ ಕೊಡುವುದರಲ್ಲಿ ಸಂಶಯವಿಲ್ಲ. ಸದ್ಯದ ರಾಜಕಾರಣಿಗಳಿಂದ ಜನರಿಗೆ ದ್ರೌಹವಾಗಿದೆ. ಜನ ಅಂತಹರನ್ನು ಕ್ಷೇಮಿಸುವುದಿಲ್ಲ. ಕರ್ನಾಟಕಕ್ಕೆ ಕೆಟ್ಟ ಹೆಸರು ತಂದ ಬಿ.ಜೆ.ಪಿ.ದಂತಹ ಭ್ರಸ್ಟ ಸರಕಾರ ತಮ್ಮ ಅಧಿಕಾರ ಅವಧಿಯಲ್ಲಿ ಕುರ್ಚಿಗಾಗಿ ಏನು ಮಾಡಬಾರದೆನೆಲ್ಲ ಮಾಡಿದ್ದಾರೆ.

ಕುಮಾರಸ್ವಾಮಿಯವರು ಬಡವರಿಗಾಗಿ ಹೆಣ್ಣು ಮಕ್ಕಳಿಗಾಗಿ ಭಾಗ್ಯಲಕ್ಷ್ಮೀ, ವಿದ್ಯಾರ್ಥಿನಿಯರಿಗೆ ಸೈಕಲ್, ರೈತರಿಗಾಗಿ ಸಾಲ ಮನ್ನಾ, ಗ್ರಾಮವಾಸ್ತವ್ಯ, ಲಾಟರಿ ನಿಷೇದ, ಸಾರಾಯಿ ಬಂದು ಮಾಡಿದ ಕೀರ್ತಿ ಜೆ.ಡಿ.ಎಸ್.ಗೆ ಸಲ್ಲುವುದು. ಇಂತಹ ರಾಜಕಾರಣಿಗಳಿಗೆ ಮತ್ತೊಮ್ಮೆ ಕರ್ನಾಟಕ ಚುಕ್ಕಾಣಿ ಇಡಿದು ಅಭಿವೃದ್ದಿಯತ್ತ ಸಾಗಿಸಲು ಜನ ಜೆ.ಡಿ.ಎಸ್. ಪರ ಒಲವು ತೋರಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎ.ಆರ್.ನದಾಫ, ದಾದಾಬಾಯಿ.ಸಣ್ಣಕ್ಕಿ, ಡಾ|| ಎಂ.ಸಿ.ಬೆಂಡಿಗೇರಿ ಹಾಗೂ ಇನ್ನಿತರೂ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here