ರಾಜಕೀಯ ಪಗಡೆಯಾಟಕ್ಕೆ ಕಣ ಸಜ್ಜು: ಬಂಡಾಯ ಶಮನದತ್ತ ಒಲವು

0
9

ಅಳ್ನಾವರ: ಇಲ್ಲಿನ ಪಟ್ಟಣ ಪಂಚಾಯ್ತಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಮೇ. ೧೬ ರ ಮಧ್ಯಾಹ್ನ ೩ ಗಂಟೆಗೆ ಅಂತಿಮ ತೆರೆ ಬಿದ್ದಿದೆ. ನಾಮಪತ್ರ ಪರಿಶೀಲನೆಗೆ ಚಾಲನೆ ದೊರೆತಿದೆ. ಇನ್ನೊಂದಡೆ ಕಾಂಗ್ರೆಸ್ ಮತ್ತು ಬಿಜೆಪಿ ಉಭಯ ಪಕ್ಷಗಳಿಗೆ ಬಂಡಾಯದ ಬಿಸಿ ನುಂಗಲಾರದ ತುತ್ತಾಗಿದೆ.
೧೮ ಸ್ಥಾನಗಳಿಗೆ ಬಿಜೆಪಿ ಪಕ್ಷದಿಂದ ಸ್ಪರ್ಧೆ ಬಯಸಿ ೬೦ ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದವು. ಕಳೆದ ಹಲವು ದಿನಗಳಿಂದ ನಡೆದ ರಾಜಕೀಯ ಪಗಡೆಯಾಟದಲ್ಲಿ ಟಿಕೇಟ ಪಡೆದವರು ಪಕ್ಷದ ಬಿ ಫಾರ್ಮ ದೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಟಿಕೇಟ ವಂಚಿತ ಹಲವಾರು ಕಾರ್ಯಕರ್ತರು ತಮ್ಮ ಅಸಮಾಧಾನ ಹೊರ ಹಾಕಿದ್ದು, ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಾ ಕಣಕ್ಕೆ ದುಮುಕಿದ್ದಾರೆ. ಪಕ್ಷದ ಮುಖಂಡರು ಬಂಡಾಯ ಅಭ್ಯರ್ಥಿಗಳನ್ನು ಸಂಪರ್ಕಿಸಿ ನಾಮಪತ್ರ ಹಿಂಪಡೆದು ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸಲು ಕೈ ಜೋಡಿಸಿ ಎಂದು ವಿನಂತಿ ಮಾಡುವದರ ಜೊತೆಗೆ ಪಕ್ಷದಲ್ಲಿ ಉಳಿಯಿರಿ, ಬರುವ ದಿನಗಳಲ್ಲಿ ಸೂಕ್ತ ಸ್ಥಾನ ಮಾನ ನೀಡುವ ಭರವಶೆ ನೀಡುವ ಮೂಲಕ ಬಂಡಾಯ ಶಮನಕ್ಕೆ ಮುಂದಾಗಿದ್ದಾರೆ. ದಿ. ೨೦ ರಂದು ನಾಮಪತ್ರ ಹಿಂಪಡೆಯಲು ಅವಕಾಶ ಇದೆ.

ಬಿಜೆಪಿ ಪಕ್ಷದಿಂದ ಟಿಕೇಟ ದೊರೆಯದೆ ಬಂಡಾಯ ಅಭ್ಯರ್ಥಿಯಾಗಿ ೧ ನೇ ವಾರ್ಡನಿಂದ ಶ್ರಿÃದೇವಿ ಜನಕಾಟಿ, ೩ ನೇ ವಾರ್ಡನಿಂದ ಬಾಳಕೃಷ್ಣ ಲಂಕಲ, ೧೦ ನೇ ವಾರ್ಡನಲ್ಲಿ ಪ್ರಶಾಂತ ಪವಾರ, ೧೧ ನೇ ವಾರ್ಡನಲ್ಲಿ ಯುನುಸ್ ಬಾಗವಾನ, ೧೪ ನೇ ವಾರ್ಡನಲ್ಲಿ ಅಭಯ ವಾಘಮೋಡೆ, ೧೮ ನೇ ವಾರ್ಡನಿಂದ ದ್ರಾಕ್ಷಾಯಣಿ ಕುಂಬಾರ ಸ್ಪರ್ಧಾ ಕಣಕ್ಕೆ ದುಮುಕಿದ್ದಾರೆ. ೧೧ ನೇ ವಾರ್ಡನಿಂದ ಟಿಕೇಟ ಬಯಸಿದ ಪ್ರವೀಣ ಪವಾರ ಟಿಕೇಟ ದೊರಕದ ಪ್ರಯುಕ್ತ ಮೌನಕ್ಕೆ ಶರಣಾಗಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ೧೮ ಸ್ಥಾನಗಳಿಗೆ ೩೦ ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದವು. ಪಕ್ಷದ ವರಿಷ್ಟರು ಅಭ್ಯರ್ಥಿಗಳನ್ನು ಅಳೆದು ತೂಗಿ ನೋಡಿ ಅಂತಿಮ ಪಟ್ಟಿ ನೀಡಿದ ಪ್ರಯುಕ್ತ ಎಲ್ಲ ವಾರ್ಡಗಳಿಗೆ ನಾಮಪತ್ರ ಸಲ್ಲಿಕೆಯಾಗಿದೆ. ಮೇಲ ನೋಟಕ್ಕೆ ಸ್ಟಾçಂಗ್ ಕ್ಯಾಂಡಿಟೇಟ ಹಾಕಿದ್ದಾರೆ ಎಂಬ ಅಂಶ ರಾಜಕೀಯ ಪಂಡಿತರ ಲೆಕ್ಕಾಚಾರದಲ್ಲಿ ಕಂಡು ಬಂದಿದೆ. ಸ್ಥಳಿಯ ಸಂಸ್ಥೆಯ ಆಡಳಿತ ಚುಕ್ಕಾಣೆಯಲ್ಲಿ ಸದಾ ತನ್ನ ಪ್ರಭುತ್ವ ಸಾದಿಸಿದ ಕಾಂಗೈ ತನ್ನ ಪರಂಪರೆಯನ್ನು ಮುಂದುವರೆಸಲು ಶಕ್ತಿ ಮೀರಿ ಪ್ರಯತ್ನ ನಡೆಸಿದೆ.

ಕಾಂಗ್ರೆಸ್ ಪಕ್ಷದಿಂದ ಟಿಕೇಟ ದೊರೆಯದೆ ಬಂಡಾಯ ಅಭ್ಯರ್ಥಿಗಳಾಗಿ ೭ ನೇ ವಾರ್ಡನಿಂದ ಶ್ರಿÃಕಾಂತ ಪಗಡಿ, ೧೦ ನೇ ವಾರ್ಡನಿಂದ ಫರೀದ ತೇಗೂರ, ೧೨ ನೇ ವಾರ್ಡನಿಂದ ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ಪರಶುರಾಮ ಬೇಕನೇಕರ, ಅರ್ಬನ್ ಬ್ಯಾಂಕ್ ನಿರ್ಧೆಶಕ ಎಸ್.ಜಿ. ಜಕಾತಿ, ರಮೇಶ ಕುನ್ನೂರಕರ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಮತ್ತು ಬೆಜೆಪಿ ಎಲ್ಲ ೧೮ ಸ್ಥಾನಗಳಿಗೆ ಹಾಗೂ ಜೆಡಿಎಸ್ ೧೪ ಸ್ಥಾನಗಳಿಗೆ ಸ್ಪರ್ಧೆ ಮಾಡಿದೆ. ೩೩ ಅಭ್ಯರ್ಥಿಗಳು ಪಕ್ಷೆÃತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

loading...