ರಾಜ್ಯದಲ್ಲಿರುವುದು ಮಿತ್ರ ಮಂಡಳಿ, ಬಿಜೆಪಿ‌ ಸಮ್ಮಿಶ್ರ ‌ಸರಕಾರ: ಮಾಜಿ ಸಚಿವ ಎಂ.ಬಿ.ಪಾಟೀಲ

0
21

ಬೆಳಗಾವಿ

ರಾಜ್ಯದಲ್ಲಿರುವುದು ಮಿತ್ರ ಮಂಡಳಿ ಮತ್ತು‌ ಬಿಜೆಪಿಯ ಸಮ್ಮಿಶ್ರ ‌ಸರಕಾರ ಇದೆ. ಇದು ರಾಜ್ಯವನ್ನು ಲೂಟಿ ಮಾಡಿಕೊಂಡು‌ ಹೋಗಲು‌ ಬಂದಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಸರಕಾರದ ಭ್ರಷ್ಟಾಚಾರದ ವಿರುದ್ದ ಹರಿಹಾಯ್ದರು.

ಸೋಮವಾರ ನಗರದ ಕಾಂಗ್ರೆಸ್ ‌ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಸಮ್ಮಿಶ್ರ ಸರಕಾರದ 17 ಶಾಸಕರ ರಾಜೀನಾಮೆ ಕೊಡಿಸಿ ಉಪಚುನಾವಣೆ ನಡೆಸಿ ಬಳಿಕ ಈಗ ಮಿತ್ರ ಮಂಡಳಿ ಹಾಗೂ‌ ಬಿಜೆಪಿ‌ ಸಮ್ಮಿಶ್ರ ಸರಕಾರ ‌ನಡೆದಿದೆ. ಮಂತ್ರಿಗಳು, ಸಿಎಂ ನಡುವೆ ಸಮನ್ವಯತೆ ಇಲ್ಲ. ಕೊರೋನಾದಲ್ಲಿ‌ ಸಹ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರಾದ‌ ಲಕ್ಷ್ಮೀ ಹೆಬ್ಬಾಳ್ಕರ್, ಗಣೇಶ ಹುಕ್ಕೇರಿ, ಅಂಜಲಿ ನಿಂಬಾಳ್ಕರ್, ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...