ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನಿಶ್ಚಿತ: ನಂಜಯ್ಯನಮಠ

0
46

ಕನ್ನಡಮ್ಮ ಸುದ್ದಿ-ಗುಳೇದಗುಡ್ಡ: ಜನಪರ ಹಾಗೂ ದಕ್ಷ ಆಡಳಿತ ನೀಡಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಜನರು ಬಹುಮತದಿಂದ ಅಧಿಕಾರ ನೀಡಲಿದ್ದಾರೆ ಎಂಬÀ ವಿಶ್ವಾಸವಿದೆ ಎಂದು ಕೆಪಿಸಿಸಿ ವಕ್ತಾರ, ಮಾಜಿ ಶಾಸಕ ಎಸ್‌.ಜಿ.ನಂಜಯ್ಯನಮಠ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಐದು ವರ್ಷಗಳ ಕಾಲ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ಉತ್ತಮ ಆಡಳಿತ ನೀಡಿದೆ. ನಮ್ಮಲ್ಲಿ ನಾಯಕತ್ವದ ಗೊಂದಲಗಳಿಲ್ಲ. ಕಾಲು ಜಕ್ಕಾಟವಿಲ್ಲ. ಒಗ್ಗಟ್ಟಿನಿಂದ ಜನರ ಕಲ್ಯಾಣದ ಕಾರ್ಯಕ್ರಮಗಳನ್ನು ಕಾಂಗ್ರೆಸ್‌ ಸರ್ಕಾರ ನೀಡಿದೆ ಎಂದರು. U
ಗುಳೇದಗುಡ್ಡ ನೂತನ ತಾಲೂಕು ರಚನೆಯಲ್ಲಿ ತಮ್ಮನ್ನು ಸೇರಿ 1972ರಿಂದ ಎಲ್ಲ ಶಾಸಕರು, ಮುಖಂಡರು ಶ್ರಮಿಸಿದ್ದರ ಫಲವಾಗಿ ತಾಲೂಕು ರಚನೆ ಆಗಿದೆ. ಜನರ ಇತಿಹಾಸ ಮರೆತಿಲ್ಲ. ತಮ್ಮಿಂದಲೇ ತಾಲೂಕು ರಚನೆ ಆಗಿದೆ ಎಂದು ಹೇಳುವ ಕೆಲವೊಬ್ಬರ ವಾದ ತಪ್ಪು ಎಂದು ಹೇಳಿದ ನಂಜಯ್ಯನಮಠ, ಬಡವರ ಪರ ಕಾಳಜಿ ಉಳ್ಳ ಕಾಂಗ್ರೆಸ್‌ ಪಕ್ಷ ವಿದ್ಯಾಸಿರಿ, ಕೃಷಿ ಭಾಗ್ಯ, ಅನ್ನಭಾಗ್ಯ, ನೀರಾವರಿ, ಗ್ರಾಮಾಭಿವೃದ್ಧಿ ಸೇರಿದಂತೆ ಹತ್ತಾರು ಜನಪರ ಕಾರ್ಯಕ್ರಮಗಳನ್ನು ನೀಡಿದೆ. ಅದರ ಫಲವಾಗಿ ಮತ್ತೆ ಜನ ಆಶೀರ್ವಾದ ಮಾಡಿ ಮತ್ತೆ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ರಚನೆಯಾಗುವುದು ನಿಶ್ಚಿತ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಯೋಜನೆಗಳು ವಿಫಲವಾಗಿದ್ದು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮಾ ಮಾಡುವ ಭರವಸೆ ನೀಡಿದ್ದರು. ಅಲ್ಲದೇ ಕಪ್ಪು ಹಣ ತರುವ ಭರವಸೆ ನೀಡಿದ್ದರು. ಆದರೆ ಯಾವುದು ಈಡೆರಿಲ್ಲ. ಬಿಜೆಪಿ ಆಡಳಿತವಿದ್ದಾಗ ತಮ್ಮಲ್ಲಿ ಸಾಕಷ್ಟು ಗೊಂದಲ, ಸಮಸ್ಯೆಗಳಿದ್ದವು. ಆಂತರಿಕ ಕಚ್ಚಾಟದಿಂದ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ 3 ಜನ ಸಿಎಂ ಬದಲಾಗಬೇಕಾಯಿತು. ಆದರೆ ಕಾಂಗ್ರೆಸ್‌ದಲ್ಲಿ ಈ ತೆರನಾದ ಸಮಸ್ಯೆಗಳು ಇಲ್ಲ. ಇಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವುದು ಕಾಂಗ್ರೆಸ್‌ ಸರ್ಕಾರದ ಹೆಗ್ಗಳಿಕೆ ಎಂದು ನಂಜಯ್ಯನಮಠ ಬಣ್ಣಿಸಿದರು. ಶಿವಾನಂದ ಮಳ್ಳಿಮಠ, ಶ್ಯಾಮು ಮಾಲಪಾಣಿ, ನೀಲಕಂಠಯ್ಯ ಸಿಂದಗಿಮಠ, ಮೆಹಬೂಬ ಸೌರಾಜ, ಮಲ್ಲಪ್ಪ ಕೊರವಾರ, ಚಾಂದ್‌ ಹನಮಸಾಗರ, ಸಲೀಮ್‌ ಮೋಮಿನ್‌, ರಾಜು ಸಂಗಮ, ಶಶಿಧರ ಬಿಜ್ಜಳ ಮತ್ತಿತರರು ಪತ್ರಿಕಾಗೋಷ್ಟಿಯಲ್ಲಿ ಇದ್ದರು.

loading...