ರಾಜ್ಯದಲ್ಲಿ 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ದ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

0
19

ಬೆಳಗಾವಿ

ರಾಜ್ಯದಲ್ಲಿ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಅಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯಾದ್ಯಂತ ಕಾಂಗ್ರೆಸ್ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಕೊರೋನಾ ವೈರಸ್ ಸಂದರ್ಭದಲ್ಲಿ ರಾಜ್ಯ ಸರಕಾರದ ವೈಫಲ್ಯದ ಬಗ್ಗೆ ಜನರ ಸೂಕ್ಷ್ಮವಾಗಿ ನೋಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಕೊರೋನಾ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಲಾಕ್ ಡೌನ್ ಒಂದೇ ಪ್ರಶ್ನೆಯಲ್ಲ. ಮಹಾಮಾರಿ ಕೊರೋನಾಗೆ ಇಲ್ಲಿಯವರೆಗೂ ಔಷಧ ಕಂಡು‌ ಹಿಡಿದಿಲ್ಲ. ಬೆಂಗಳೂರು ಲಾಕ್‌ ಡೌನ್ ಮಾಡಿದರೆ ಯಾವುದೇ ಉಪಯೋಗವಿಲ್ಲ ಎಂದರು.

ಮನೆಯಲ್ಲಿದ್ದರೂ ಕೂಡ ಕರೋನಾ ಬರುವುದೇ. ಹೊರಗಡೆಯಿದ್ದರೂ ಕರೋನಾ ಬರುವುದೇ. ಜನರು ಸಾಮಾಜಿಕ ಅಂತರ ಹಾಗೂ ಸುರಕ್ಷತೆ ಕೈಗೊಳ್ಳುವುದು ಮುಖ್ಯ ಹೊರತು ಲಾಕ್ ಡೌನ್ ಮಾಡಿ ಕೊರೋನಾ ನಿಯಂತ್ರಣ ಮಾಡುವುದು ಅಸಾಧ್ಯದ ಮಾತು ಎಂದರು.

ಗೋಕಾಕನಲ್ಲಿ ಐದು ಜನರಿಗೆ ಕೊರೋನಾ ಬಂದಿದೆ. ಅದಕ್ಕೆ ಲಾಕ್ ಡೌನ್ ಮಾಡಿದರೆ ಅಲ್ಲಿನ ಜನರಿಗೆ ಉದ್ಯೋಗ ಯಾರು ಕೊಡುತ್ತಾರೆ. ಅವರನ್ನು ನೋಡಿ ಎಲ್ಲ ತಾಲೂಕಿನವರು ಮಾಡುತ್ತಾರೆ. ಲಾಕ್ ಡೌನ್ ಒಂದೇ ಪರಿಹಾರವಲ್ಲ ಎಂದರು.

loading...