ಅಥಣಿ 17:ರಾಜ್ಯ ಖಾದಿ ನಿಗಮದ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಚಿಕ್ಕೂಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಉಮೇಶರಾವ ಬಂಟೋಡಕರ ಅವರನ್ನು ಅಥಣಿ ಪುರಸಭೆಯಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಸನ್ಮಾನಿಸಿದರು.
ಉಮೇಶರಾವ ಬಂಟೋಡಕರ ಮಾತನಾಡಿ, ತಮಗೆ ದೊರತ ಅಧಿಕಾರದ ಸದ್ಬಳಕೆ ಮಾಡಿಕೊಳ್ಳುವ ಮೂಲಕ ನಿಗಮದ ಅಭಿವೃದ್ದಿಗೆ ಶ್ರಮಿಸಲಾಗುವುದು.ತಮ್ಮ ಆಯ್ಕೆಗೆ ಸಹಕರಿಸಿದ ಪಕ್ಷದ ಎಲ್ಲ ಪದಾಧಿಕಾರಿಗಳಿಗೆ ಅಭಿನಂದಿಸಿದರು. ಅಧ್ಯಕ್ಷತೆ ವಹಿಸಿದ್ದ ಪುರಸಭಾಧ್ಯಕ್ಷ ಬಸವರಾಜ ಮಾಳಿ ಮಾತನಾಡಿ, ಉಮೇಶರಾವ ಬಂಟೋಡಕರ ಅವರು ರಾಜ್ಯ ಖಾದಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗುರುವುದು ನಮಗೆಲ್ಲ ಸಂತಸ ಮೂಡಿಸಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷ ಸದಾಶಿವ ಬಾಗಡಿ, ಮುಖ್ಯಾಧಿಕಾರಿ ಜಿ.ಡಿ.ಗುದಿಗೆಣ್ಣವರ, ಪುರಸಭೆ ಸದಸ್ಯರು, ಸಿಬ್ಬಂದಿ ವರ್ಗಉಪಸ್ಥಿತರಿದ್ದರು.
loading...