ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ

0
32

ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ಶಿಕ್ಷೆಗೊಳಗಾಗಿರುವ ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಅನಿಲ್ ರಾಜ್‍ಗೆ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು, ಪುನಃ ವಿಚಾರಣೆ ನಡೆಸಿ ಪರಿಹಾರ ಹುಡುಕಲು ಸಾಧ್ಯವೇ ಹೇಗೆ ಎಂಬುದನ್ನು ಪರಿಶೀಲಿಸಿ ಮಾಹಿತಿ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಹಕ್ಕುಬಾಧ್ಯತೆಗಳ ಸಮಿತಿ ವಿಧಿಸಿರುವ ಒಂದು ವರ್ಷದ ಜೈಲು ಶಿಕ್ಷೆ ಮತ್ತು ರೂ. 10 ಸಾವಿರ ದಂಡದ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿ ಪತ್ರಕರ್ತ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್ ಪೊನ್ನಣ್ಣ ಅವರಿಗೆ ಸೂಚಿಸಿದೆ.
ರವಿ ಬೆಳಗೆರೆ ಮತ್ತು ಅನಿಲ್ ರಾಜ್ ಕ್ಷಮೆ ಯಾಚಿಸಿದರೆ ನಿರ್ಣಯ ಬದಲಿಸಲು ಸಾಧ್ಯವೇ, ಶಿಕ್ಷೆ ಮರು ಪರಿಶೀಲಿಸಲು ವಿಧಾನಸಭಾಧ್ಯಕ್ಷರು ತಮಗಿರುವ ಅಂತರ್ಗತ ಅಧಿಕಾರವನ್ನು ಬಳಸಬಹುದೇ, ವಿಧಾನಸಭಾಧ್ಯಕ್ಷರು ಅರ್ಜಿದಾರರನ್ನು ಕರೆಯಿಸಿಕೊಂಡು ಅವರಿಂದ ಸೂಕ್ತ ಸಮಜಾಯಿಷಿ ಪಡೆಯಲು ಅವಕಾಶ ಇದೆಯೇ ಕಾನೂನಿನ ಯಾವ ಚೌಕಟ್ಟಿನಲ್ಲಿ ನೀವು ಈ ಶಿಕ್ಷೆ ವಿಧಿಸಿದ್ದೀರಿ. ಇದಕ್ಕೆ ನಿರ್ದಿಷ್ಟ ಮಾರ್ಗದರ್ಶಿ ಸೂತ್ರ ಇವೆಯೇ , ಪ್ರಕರಣವನ್ನು ರಿಓಪನ್ ಮಾಡಿ, ಪುನರ್ ಪರಿಶೀಲನೆ ಮಾಡಲು ಸಾಧ್ಯವಿದೆಯೆ ಎಂದು, ನ್ಯಾಯಮೂರ್ತಿ ಹಿಂಚಗೇರಿ , ಪೊನ್ನಣ್ಣ ಅವರಿಗೆ ಕೇಳಿದ್ದಾರೆ. ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿದೆ.
ಒಬ್ಬ ಪತ್ರಕರ್ತ ಆಸ್ಪತ್ರೆಗೆ ದಾಖಲಾಗಿದ್ದಾರೆ, ಮತ್ತೊಬ್ಬ ತಲೆ ಮರೆಸಿಕೊಂಡಿದ್ದಾರೆ. ಹೀಗಿರುವಾಗ ಅವರು ಬಿಡುಗಡೆಗೆ ಅರ್ಹರಾಗಿಲ್ಲ ಎಂದು ಪೊನ್ನಣ್ಣ ವಾದಿಸಿದ್ದಾರೆ.ಅರ್ಜಿದಾರರ ಪರ ವಕೀಲ, ಹಕ್ಕು ಬಾಧ್ಯತಾ ಸಮಿತಿ ನೀಡಿರುವ ಆದೇಶದ ಪ್ರತಿಯನ್ನು ನಮಗೆ ನೀಡಿಲ್ಲ, ಖುದ್ದಾಗಿ ತಾವೇ ಹೋಗಿ ಕೇಳಿದರು ಆದೇಶದ ಪ್ರತಿಯನ್ನು ನೀಡಿಲ್ಲ ಎಂದು ಹೇಳಿದರು. ಹಕ್ಕು ಬಾಧ್ಯತಾ ಸಮಿತಿಯು ಆದೇಶದ ದೃಢೀಕೃತ ನಕಲು ಪ್ರತಿಯನ್ನು ಅರ್ಜಿದಾರರಿಗೆ ಎರಡು ವಾರಗಳಲ್ಲಿ ನೀಡಬೇಕು ಎಂದೂ ನ್ಯಾಯಪೀಠವು ವಿಧಾನಸಭಾಧ್ಯಕ್ಷರಿಗೆ ನಿರ್ದೇಶಿಸಿದೆ.

loading...