ರಾಯಣ್ಣನ ಆದರ್ಶ ಮೈಗೂಡಿಸಿಕೊಳ್ಳಿ ಃ ಮಹಾಂತೇಶ ದೊಡಗೌಡರ

0
83
ಚನ್ನಮ್ಮ ಕಿತ್ತೂರಿಗೆ ಆಗಮಿಸಿದ ಸಂಗೊಳ್ಳಿ ರಾಯಣ್ಣನ ವೀರ ಜ್ಯೋತಿಗೆ ಪೂಜೆ ಸಲ್ಲಿಸಿ ಬರಮಾಡಿಕೊಳ್ಳುತ್ತಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ ಇತರರು ಚಿತ್ರದಲ್ಲಿದ್ದಾರೆ.
ಚನ್ನಮ್ಮ ಕಿತ್ತೂರಿಗೆ ಆಗಮಿಸಿದ ಸಂಗೊಳ್ಳಿ
ರಾಯಣ್ಣನ ವೀರ ಜ್ಯೋತಿಗೆ ಪೂಜೆ ಸಲ್ಲಿಸಿ ಬರಮಾಡಿಕೊಳ್ಳುತ್ತಿರುವ ಡಿಸಿಸಿ ಬ್ಯಾಂಕ್
ನಿರ್ದೇಶಕ ಮಹಾಂತೇಶ ದೊಡಗೌಡರ ಇತರರು ಚಿತ್ರದಲ್ಲಿದ್ದಾರೆ.

ಚನ್ನಮ್ಮ ಕಿತ್ತೂರು  ಃ ದೇಶದ ಸ್ವಾತಂತ್ರ್ಯಕ್ಕಾಗಿ ರಾಯಣ್ಣ ಹೊರಾಟ ಮಾಡಿದಂತೆ ದೇಶದ
ಭದ್ರತೆಗಾಗಿ ಯುವಕರು ರಾಯಣ್ಣನ ಆದರ್ಶವನ್ನು ಮೈಗೊಡಿಸಿಕೊಳ್ಳಬೇಕೆಂದು ಬೆಳಗಾವಿ
ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ ಹೇಳಿದರು.
ಸಂಗೊಳ್ಳಿ ರಾಯಣ ್ಣನ 188ನೇ ಪುಣ್ಯತಿಥಿ ಅಂಗವಾಗಿ ಬೈಲಹೊಂಗಲದ ಕ್ರಾಂತಿವೀರ
ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿಯ ಆಶ್ರಯದಲ್ಲಿ ತರುವ ರಾಯಣ್ಣನ ವೀರ ಜ್ಯೋತಿಯು
ಮಾರ್ಗ ಮದ್ಯದಲ್ಲಿರುವ ಕಿತ್ತೂರಿಗೆ ಆಗಮಿಸಿದಾಗ  ಇಲ್ಲಿಯ ಹೆದ್ದಾರಿ ಪಕ್ಕದ ರಾಣಿ
ಚನ್ನಮ್ಮಾ ವೃತ್ತದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿ ಜ್ಯೊತಿಯನ್ನು ಬರಮಾಡಿಕೊಂಡು
ಮಾತನಾಡಿದ ಅವರು, ಕಳೆದ 19 ವರ್ಷಗಳಿಂದ ಸ್ಮರಣೋತ್ಸವ ಸಮಿತಿಯವರು ಈ ಸೇವೆಯನ್ನು
ಮಾಡುತ್ತಿರುವದು ಮುಂದಿನ ಯುವ ಜನಾಂಗಕ್ಕೆ ಒಳ್ಳೆಯ ಸಂದೇಶವಾಗಿದೆ. ರಾಣಿ
ಚನ್ನಮ್ಮಾಜಿಯ ಬಲಗೈಬಂಟ ಸಂಗೊಳ್ಳಿ ರಾಯಣ್ಣನ ಶೌರ್ಯ ತ್ಯಾಗ ಬಲಿದಾನ ಸ್ಮರಣೀಯವಾಗಿದೆ.
ಈ ಎಲ್ಲ ಕಾರ್ಯಗಳಿಗೆ ಪತ್ರಕರ್ತರು ಬೆನೆಲುಬಾಗಿ ನಿಂತ್ತು ಪ್ರತಿವರ್ಷ ಈ ಕಾರ್ಯವನ್ನು
ಯಶಸ್ವಿಗೊಳ್ಳಿಸುತ್ತಿರುವ ಕಾರ್ಯ ಶ್ಲಾಘನೀವೆಂದು ಹೇಳಿದರು.

ಮಾಜಿ ಕಸಾಪ ಅಧ್ಯಕ್ಷ ಬಸವರಾಜ ಕುಪ್ಪಸಗೌಡರ ಮಾತನಾಡಿ, ಶೂರತನಕ್ಕೆ ಹೆಸರಾದ
ರಾಯಣ್ಣನ್ನು ಸ್ಮರಿಸುವದರ ಜೊತೆಗೆ ಅವರ ಜೀವನದ ಇತಹಾಸವನ್ನು ಬದುಕಿನಲ್ಲಿ
ಅಳವಡಿಕೊಳ್ಳಬೇಕು. ನಾಡು,ನುಡಿ ರಕ್ಷಣೆಗೆ ಸದಾ ಸಿದ್ದರಿರಬೇಕೆಂದರು.

ಕಲಾವಿದ ಸಿ.ಕೆ ಮೆಕ್ಕೆದ ಮಾತನಾಡಿ, ಕಳೆದ 19 ವರ್ಷಗಳಿಂದ ಜ್ಯೋತಿ ತರುವ ಪವಿತ್ರ
ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಗಣ್ಯರ ಮತ್ತು ಸಂಘ ಸಂಸ್ಥೆಗಳ ಕಾರ್ಯ
ಶ್ಲಾಘನೀಯವೆಂದು ಹೇಳಿದರು.

ಕಿತ್ತೂರು ತಹಶೀಲ್ದಾರ ಪ್ರವೀಣ ಹುಚ್ಚಣ್ಣವರ,  ಸ್ಮರಣೋತ್ಸವ ಸಮೀತಿ ಅಧ್ಯಕ್ಷ ರಾಜು
ಸೊಗಲ, ವiಹಾಂತೇಶ ತುರಮರಿ, ಈಶ್ವರ ಹೋಟಿ, ಸೋಮನಾಥ ಸೊಪ್ಪಿಮಠ, ನಮಠ ಬಸವರಾಜ ಕಲಾದಗಿ,
ಶ್ರೀಶೈಲ ಯಡಳ್ಳಿ, ರವಿ ಹುಲಕುಂದ, ನಿಂಗನಗೌಡ ದೊಡಗೌಡರ, ನ್ಯಾಯವಾದಿ ಶ್ರೀಕರ್
ಕುಲಕರ್ಣಿ, ಮಲ್ಲಿಕಾರ್ಜುನ ಉಳ್ಳಾಗಡ್ಡಿ,  ಡಾ. ಜಗದೀಶ ಹಾರುಗೊಪ್ಪ, ಸೇರಿದಂತೆ
ಪಟ್ಟಣದ ನಾಗರಿಕರು ಹಾಜರಿದ್ದರು.

loading...