ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ

0
5

ಕನ್ನಡಮ್ಮ ಸುದ್ದಿ-ನರೇಗಲ್ಲ: ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಪ.ಪಂ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಕಾಲೇಜುಗಳ ಆಶ್ರಯದಲ್ಲಿ ಶುಕ್ರವಾರ ಮತದಾರರ ಜಾಗೃತಿ ಜಾಥ ಹಾಗೂ ಮಾನವ ಸರಪಳಿ, ಪ್ರತಿಜ್ಞಾವಿಧಿ ಕಾರ್ಯಕ್ರಮಗಳು ಜರುಗಿದವು.
ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಗಜೇಂದ್ರಗಡ ತಹಸೀಲ್ದಾರ ಎಸ್.ಆರ್. ಮದಗುಣಕಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನಕ್ಕೆ ಅತ್ಯಂತ ಮಹತ್ವವಿದೆ. ಮತದಾನ ಪ್ರತಿಯೊಬ್ಬ ನಾಗರಿಕರ ಹಕ್ಕಾಗಿದ್ದು, ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ಸಂವಿಧಾನದಲ್ಲಿ ದೃಢವಿಶ್ವಾಸ ಹೊಂದಿರುವ ನಾವೆಲ್ಲ ಪ್ರಜಾಪ್ರಭುತ್ವ ಆಡಳಿತಕ್ಕೆ ಶಕ್ತಿ ತುಂಬಬೇಕಾದರೆ ಮತ ಚಲಾವಣೆ ಮಾಡುವುದು ಅವಶ್ಯಕ. ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಉತ್ತಮ ಆಡಳಿತ ವ್ಯವಸ್ಥೆ ತರಲು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಯುವ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಮೂಲಕ ಪ್ರಜಾತಂತ್ರದ ಬಹುಮುಖ್ಯ ಅಂಗದಲ್ಲಿ ಭಾಗಿಯಾಗಬೇಕು ಎಂದರು. ಪಿಎಸ್‍ಐ ರಾಜೇಶ ಬಟಕುರ್ಕಿ ಮಾತನಾಡಿ, ನಮ್ಮ ದೇಶದ ಪ್ರಜಾಪ್ರಭುತ್ವವು ವಿಶ್ವ ಮನ್ನಣೆ ಪಡೆದಿದ್ದು, ಯುವ ಮತದಾರರು ಕಡ್ಡಾಯವಾಗಿ ಮತ ಚಲಾವಣೆ ಮಾಡಿದರೆ ಸೂಕ್ತ ಜನಪ್ರತಿನಿಧಿ ಆಯ್ಕೆ ಸಾಧ್ಯ. ಮತ ಚಲಾಯಿಸುವುದರ ಜತೆಗೆ ಇತರರಿಗೂ ಮತದಾನದ ಅರಿವು ಮೂಡಿಸಬೇಕು ಎಂದರು.
ಮತದಾರರ ಜಾಗೃತಿ ಜಾಥಾವು ಪ.ಪಂ ನಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಹೊಸ್ ಬಸ್ ನಿಲ್ದಾಣದ ಹತ್ತಿರ ಮಾನವ ಸರಪಳಿ, ಮತದಾರರ ಪ್ರತಿಜ್ಞಾವಿಧಿ ಭೋದಿಸಿ ಮತದಾನದ ಜಾಗೃತಿ ಮೂಡಿಸಲಾಯಿತು. ಪ.ಪಂ ಮುಖ್ಯಾಧಿಕಾರಿ ಎಸ್.ಎಸ್. ಹುಲ್ಲಮ್ಮನವರ, ಹಿರಿಯ ಆರೋಗ್ಯ ನಿರಿಕ್ಷಕ ಎನ್.ಎಂ. ಹಾದಿಮನಿ, ಗ್ರಾಮ ಲೆಕ್ಕಾಧಿಕಾರಿ ಕೆ.ಎನ್. ಪಾಟೀಲ, ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಬಸವರಾಜ ಬಳಗಾನೂರಮಠ, ಉಪನ್ಯಾಸಕರಾರ ಈ.ಆರ್. ಲಗಳೂರ. ಶಿವಮೂರ್ತಿ ಕುರೇರ, ಕೆ.ಎಚ್. ಅಂಜನಮೂರ್ತಿ, ಮೀನಾಕ್ಷಿ ಕೆ.ಎಚ್., ನಶೀನಾ ಜಮಾದಾರ, ಜ್ಯೋತಿ ಬೊಳ್ಳನ್ನವರ ಎನ್. ಶೋಭಾ, ಎಲ್.ಸಿ. ಹಿರೇಮಠ, ಕೆ.ಆರ್. ಪಾಟೀಲ, ಎಎಸ್‍ಐ ಎಸ್.ಆರ್. ರುದ್ರಪ್ಪನವರ, ಪೇದೆಗಳಾದ ಹನಮಂತ ದೊಡ್ಡಮನಿ, ಎಸ್.ಆರ್. ಸವದತ್ತಿ, ಎಸ್. ಗೂಳಪ್ಪನವರ, ಕಳಕಪ್ಪ ತಳವಾರ, ಎಸ್.ಎ. ಜಕ್ಕಲಿ, ಎನ್.ಬಿ. ಮಾರನಬಸರಿ ಇದ್ದರು.

loading...